ETV Bharat / state

ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ‌ ಕಾಣಿಕೆ, ಬರದಿಂದ ಬೇಸತ್ತ ರೈತರಿಗೆ ನೇಣಿನ ಕುಣಿಕೆ: ಆರ್ ಅಶೋಕ್ - ಅಲ್ಪಸಂಖ್ಯಾತರ ಅಭಿವೃದ್ಧಿ

ಸಿಎಂ ಸಿದ್ದರಾಮಯ್ಯ ಅವರದು ಟಿಪ್ಪು, ತುಘಲಕ್ ಸಂಸ್ಕೃತಿಯ ಆಳ್ವಿಕೆ‌ ಎಂದು ಆರ್​ ಅಶೋಕ್​ ಹರಿಹಾಯ್ದಿದ್ದಾರೆ.

r ashok lashed out cm  ಸಿಎಂ ಸಿದ್ದರಾಮಯ್ಯ  ಅಲ್ಪಸಂಖ್ಯಾತರ ಕಾಲೋನಿ  r ashok rant cm  ಅಲ್ಪಸಂಖ್ಯಾತರ ಅಭಿವೃದ್ಧಿ  ಆರ್​ ಅಶೋಕ್​ ವಾಗ್ದಾಳಿ
ಸಿಎಂ ವಿರುದ್ದ ಆರ್​ ಅಶೋಕ್​ ವಾಗ್ದಾಳಿ
author img

By ETV Bharat Karnataka Team

Published : Dec 30, 2023, 5:49 PM IST

Updated : Dec 30, 2023, 8:26 PM IST

ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್, ಹೆಚ್​​ಡಿಕೆ ವಾಗ್ದಾಳಿ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ‌ ಕಾಣಿಕೆ. ಬರದಿಂದ ಬೇಸತ್ತ ರೈತರಿಗೆ ನೇಣಿನ ಕುಣಿಕೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಾಲೋನಿಗೆ ಹೆಚ್ಚಿನ ಅನುದಾನ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಬರದಿಂದ ಸುಮಾರು 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ‌ ಹಿಂದೆ ಹತ್ತು ಸಾವಿರ ಕೋಟಿ ಕೊಡ್ತೇವೆ ಅಂದಿದ್ರು. ಈಗ ಒಂದು ಸಾವಿರ ಕೊಡೋದಾಗಿ ಹೇಳಿದ್ದಾರೆ. ಒಟ್ಟು ಹನ್ನೊಂದು ಸಾವಿರ ಕೋಟಿ ರೂ‌. ಹಿಂದುಗಳ ಮತ್ತು ದಲಿತರ ಕಾಲೋನಿ ಅಭಿವೃದ್ಧಿ ಬೇಡ್ವಾ ಹಾಗಿದ್ರೆ?. ಟಿಪ್ಪು, ತುಘಲಕ್ ಸಂಸ್ಕೃತಿಯ ಆಳ್ವಿಕೆ‌ ಸಿದ್ದರಾಮಯ್ಯರದ್ದು. ವೋಟಿನ ವೋಲೈಕೆಗಾಗಿ ಹೀಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಕಳೆದ ಏಳು ತಿಂಗಳಿನಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಈ‌ ಹಿಂದೆ ಪಿಎಫ್​ಐ ಕೇಸ್ ವಾಪಸ್ ಪಡೆದಿದ್ರು. ಡಿಜೆ ಹಳ್ಳಿ, ಕೆಜಿ ಹಳ್ಳಿಯ ಕೇಸ್ ವಾಪಸ್ ಪಡೆಯಲು ಫೈಲ್ ಮೂವ್ ಮಾಡಿದ್ದಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದು ಅವರೆಲ್ಲ ಬ್ರದರ್ ಅಂತ. ಇದೆಲ್ಲ ವೋಲೈಕೆಗಾಗಿ ಮಾಡ್ತಿರೋದು. ರೈತರಿಗೆ ಸುಮಾರು 30 ಸಾವಿರ ರೂ. ನಷ್ಟು ಪರಿಹಾರ ಹಣ ಕೊಡಬೇಕು. ವಿಪಕ್ಷಗಳು ಅಧಿವೇಶನದಲ್ಲಿ ಪ್ರಶ್ನೆ ಮಾಡ್ತಾರೆ ಎಂದು 2 ಸಾವಿರ ಕೊಡೋದಾಗಿ ಘೋಷಣೆ ಮಾಡಿದ್ರು. ಇವರ ಯೋಗ್ಯತೆಗೆ ಇದುವರೆಗೂ ಹಣ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತ ಕಾಲೋನಿ ಎಂದು ಪ್ರತ್ಯೇಕವಾಗಿ ಹಣ ಘೋಷಣೆ ಮಾಡಿ ಸಮಾಜ ಒಡೆಯಲಾಗಿದೆ. ಮುಸ್ಲಿಂರನ್ನು ಪ್ರತ್ಯೇಕ ಮಾಡುವ ಹುನ್ನಾರ ಇದು. ಈ ಹಿಂದೆ ಟಿಪ್ಪು ಆಳ್ವಿಕೆಯಲ್ಲಿ ಪ್ರತ್ಯೇಕ ಮಾಡಲಾಗ್ತಿತ್ತು. ಇದನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಣ್ತಿದ್ದೇವೆ. ವೋಲೈಕೆಗಾಗಿ ಹೀಗೆ ಮಾಡಲಾಗ್ತಿದೆ ಎಂದು ಅಶೋಕ್​ ಆರೋಪಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಅಲ್ಲ, ಕಮಿಷನ್ ದಂಧೆಗೆ ಉಪಯೋಗಕ್ಕೆ ಬರುವ ಹಣ: ಹೆಚ್​ಡಿಕೆ

ಮತ್ತೊಂದೆಡೆ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾತನಾಡಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ, ಅದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವಲ್ಲ, ಕಮಿಷನ್ ಹೊಡೆಯಲು ದಂಧೆಗೆ ಉಪಯೋಗಕ್ಕೆ ಬರುವ ಹಣ ಎಂದು ಆರೋಪಿಸಿದ್ದಾರೆ. ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ರೂಪಾಯಿ ಅನುದಾನ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅವರಿಗೆ ಪರ್ಸಂಟೇಜ್ ಎಷ್ಟು ಬರುತ್ತೆ ಎಂಬುದು ಜಗಜ್ಜಾಹಿರಾಗಿದೆ. ಅವರನ್ನು ವೋಲೈಸಿಕೊಳ್ಳಲು ಅವರ ಹಿಂದೆ ನಿಂತುಕೊಳ್ಳುವವರ ಸಂತೃಪ್ತಿಗಾಗಿ ಈ ಹಣ ಮೀಸಲಿಟ್ಟಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಅಲ್ಲ ಎಂದರು.

ಕೆಲವರನ್ನು ಖುಷಿಪಡಿಸಲು, ತಾತ್ಕಾಲಿಕವಾಗಿ ಈ ರೀತಿಯ ಘೋಷಣೆ ಮಾಡ್ತಾರೆ, ಅದು ಯಾವುದು ಜಾರಿಗೆ ಬರೋಲ್ಲ. ಹಿಜಾಬ್ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿ ಪುನಃ ವಾಪಸ್ ಪಡೆದ್ರು ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್​ ಡಿಕೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿಶ್ವದ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಅವರಿಗ್ಯಾಕೆ: ಹೆಚ್​ಡಿಕೆಗೆ ರಾಯರೆಡ್ಡಿ ತಿರುಗೇಟು

Last Updated : Dec 30, 2023, 8:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.