ಬೆಂಗಳೂರು: ಕೊರೊನಾ ಸೋಂಕಿನ (Corona Virus) ತೀವ್ರತೆ ತಡೆಯಬೇಕಾದರೆ ವ್ಯಾಕ್ಸಿನೇಷನ್ (Karnataka Vaccination) ರಾಮಬಾಣವಾಗಿದೆ. ಮೊದಮೊದಲು ವ್ಯಾಕ್ಸಿನೇಷನ್ ಹಿಂದೇಟು ಹಾಕುತ್ತಿದ್ದ ಜನರು ನಂತರ ಜಾಗೃತಿಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದರು.
ಇದೀಗ ಮೊದಲ ಡೋಸ್ ಪಡೆದವರು 2ನೇ ಡೋಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸೆಕೆಂಡ್ ಡೋಸ್ ವ್ಯಾಕ್ಸಿನ್ ಹಾಕಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ. ಅವಧಿ ಮುಗಿದರೂ ಲಕ್ಷಕ್ಕೂ ಅಧಿಕ ಮಂದಿ 2ನೇ ಡೋಸ್ ಪಡೆಯಲು ಹಿಂದೇಟು ಹಾಕಿದ್ದಾರೆ. ರಾಜ್ಯದಲ್ಲಿ ಒಟ್ಟು 45,14,612 ಮಂದಿ 2ನೇ ಡೋಸ್ ವ್ಯಾಕ್ಸಿನ್ ಪಡೆಯದವರಿದ್ದಾರೆ.
![public-hesitate-to-get-the-2nd-dose-in-state](https://etvbharatimages.akamaized.net/etvbharat/prod-images/kn-bng-3-vaccine-2nddose-problem-7201801_12112021133052_1211f_1636704052_1028.jpg)
ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್ (Frontline warriors) ಕೂಡ 2ನೇ ಡೋಸ್ (2nd Dose) ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲೇ ಹೆಚ್ಚು ಮಂದಿ ಸೆಕೆಂಡ್ ಡೋಸ್ ಪಡೆದಿಲ್ಲ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಸೆಕೆಂಡ್ ಡೋಸ್ಗಾಗಿ ಕರೆ ಮಾಡಿದರೆ ಬಹುತೇಕರ ನಂಬರ್ ಸ್ವಿಚ್ಡ್ ಆಫ್ ಆಗಿವೆ ಎಂಬುದು ವೈದ್ಯಕೀಯ ಸಿಬ್ಬಂದಿ ಅಳಲಾಗಿದೆ.
2ನೇ ಡೋಸ್ ಪಡೆಯದವರ ಜಿಲ್ಲಾವಾರು ಸಂಖ್ಯೆ
ಜಿಲ್ಲೆ | 2ನೇ ಡೋಸ್ ಬಾಕಿ ಉಳಿಸಿಕೊಂಡವರ ಸಂಖ್ಯೆ |
1 | ಬಿಬಿಎಂಪಿ | 11,84,072 |
2 | ಬೆಳಗಾವಿ | 2,54,564 |
3 | ಮೈಸೂರು | 2,39,175 |
4 | ಬೆಂಗಳೂರು ನಗರ | 2,19,336 |
5 | ಕಲಬುರಗಿ | 1,72,111 |
6 | ರಾಯಚೂರು | 1,69,946 |
7 | ಧಾರವಾಡ | 1,69,599 |
8 | ತುಮಕೂರು | 1,66,934 |
9 | ಬಳ್ಳಾರಿ | 1,52,579 |
10 | ದಾವಣಗೆರೆ | 1,44,604 |
11 | ಶಿವಮೊಗ್ಗ | 1,40,677 |
12 | ದಕ್ಷಿಣ ಕನ್ನಡ | 1,22,511 |
13 | ವಿಜಯಪುರ | 1,23,792 |
14 | ಮಂಡ್ಯ | 1,09,024 |
15 | ಬೆಂ. ಗ್ರಾಮಾಂತರ | 1,08,330 |
16 | ಬೀದರ್ | 1,05,780 |
ಒಟ್ಟು | 45,14,612 |
ವ್ಯಾಕ್ಸಿನ್ ಹಾಕಿಸದಿದ್ದರೆ ಓಡಾಟಕ್ಕೆ ಬೀಳುತ್ತಾ ಬ್ರೇಕ್..?
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ(BBMP Commissioner Gaurav Gupta) , ಜ್ವರ, ನೆಗಡಿಯಂತಹ ಲಕ್ಷಣಗಳು ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ. ಶೇ.57ರಷ್ಟು ಜನರು 2ನೇ ಡೋಸ್ ವ್ಯಾಕ್ಸಿನೇಷನ್ ಪಡೆದಿದ್ದಾರೆ. ಕೆಲವರು 12 ವಾರಗಳ ನಂತರವೂ ಸಹ 2ನೇ ಡೋಸ್ ವ್ಯಾಕ್ಸಿನ್ ಪಡೆದಿಲ್ಲ. ಅಂತವರಿಗೆ ನಾವು ಕಾಲ್ ಸೆಂಟರ್ ಮೂಲಕ ಕರೆ ಮಾಡಿ ಜಾಗೃತಿ ಗೊಳಿಸುತ್ತಿದ್ದೇವೆ. ಜೊತೆಗೆ ಹತ್ತಿರದ ವ್ಯಾಕ್ಸಿನ್ ಸೆಂಟರ್ಗೆ ಬಂದು ವ್ಯಾಕ್ಸಿನ್ ಪಡೆಯುವಂತೆ ಒತ್ತಡ ಹಾಕುತ್ತಿದ್ದೇವೆ ಎಂದಿದ್ದಾರೆ.
ಯಾರು ವ್ಯಾಕ್ಸಿನ್ ಪಡೆದಿದ್ದಾರೋ ಅವರು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಬರಬಹುದು ಅನ್ನೋ ರೂಲ್ಸ್ ಸಿಂಗಪುರ್ನಲ್ಲಿ ಇದೆ. ವ್ಯಾಕ್ಸಿನ್ ಪಡೆಯದೆ ಇರುವವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರಲಾಗಿದೆ. ಈ ರೀತಿಯ ನಿರ್ಬಂಧನೆಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಅದನ್ನ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದರು.
ಓದಿ: ಅನುದಾನ ಬಳಕೆ: ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದ ಸಂಸದ ಬಿ.ವೈ.ರಾಘವೇಂದ್ರ