ದೊಡ್ಡಬಳ್ಳಾಪುರ: ಡಾ. ಬಿ.ಆರ್.ಅಂಬೇಡ್ಕರ್ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಸಂಘಟನೆಯಿಂದ ನಿರಾಶ್ರಿತ ಮತ್ತು ನಿರ್ಗತಿಕರ ನಿವೇಶನಕ್ಕಾಗಿ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಿ.ಕ್ರಾಸ್ ರಸ್ತೆಯಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಪ್ರತಿಯೊಬ್ಬರು ತಮ್ಮದೇ ಆದ ಸೂರು ಹೊಂದಬೇಕು. ಸರ್ಕಾರದ ಗುರಿ ಸಹ ಅದೇ ಆಗಿದೆ. ಆದರೆ ಇವತ್ತು ಸಹ ಮನೆ ಇಲ್ಲದೆ ಸಾವಿರಾರು ನಿರಾಶ್ರಿತರು ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ವಾಸ ಮಾಡುತ್ತಿದ್ದಾರೆ. ವಸತಿ ವಂಚಿತ ಜನರಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆ ಮತ್ತು ಇಂದಿರಾ ಗಾಂಧಿ ವಸತಿ ಯೋಜನೆ ಅಡಿ ನಿವೇಶನ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಸುರೇಶ್, ತಾಲೂಕು ಅಧ್ಯಕ್ಷ ಜಾನಕಿರಾಮ್, ಕಾರ್ಯಾಧ್ಯಕ್ಷ ನಂದಕುಮಾರ್, ಜಂಟಿ ಕಾರ್ಯದರ್ಶಿ ಬಿ.ಎಸ್.ಮಂಜುನಾಥ್, ಕಾರ್ಯದರ್ಶಿ ಶಾಂತಮ್ಮ, ಮಹಿಳಾ ಕಾರ್ಯದರ್ಶಿ ಭಾಗವಹಿಸಿದ್ದರು.