ಬೆಂಗಳೂರು: ಟೌನ್ ಹಾಲ್ ಮುಂಭಾಗ ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್- ಜೆಡಿಎಸ್ ಕೌನ್ಸಿಲ್ ಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿದರು.
ಗದ್ದಲ ಜೋರಾದಾಗ, ಕೌನ್ಸಿಲ್ ಹಾಲ್ನ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಆದರೆ, ಸಭೆ ಹತೋಟಿಗೆ ಬಾರದೇ ಇದ್ದಾಗ, ಮೇಯರ್ ಗೌತಮ್ ಕುಮಾರ್ ಹತ್ತು ನಿಮಿಷಗಳ ಕಾಲ ಸಭೆ ಮುಂದೂಡಿದರು.
ಈ ವೇಳೆ, ಕೆಳಗೆ ಕುಳಿತು ಧರಣಿ ಮುಂದುವರಿಸಿದ ಪಾಲಿಕೆ ಸದಸ್ಯರು ಅಲ್ಲಿಗೆ ಬಂದ ತಿಂಡಿ ತೆಗೆದುಕೊಂಡು ತಿನ್ನಲು ಆರಂಭಿಸಿದರು. ಇದನ್ನು ನೋಡಿದ ಬಿಜೆಪಿ ಸದಸ್ಯರು, ತಮಾಷೆಯಿಂದ ಕಾಲೆಳೆದರು. ಧರಣಿ ಅಂದ್ರೆ ಉಪವಾಸ ಇರಬೇಕು, ಹೊಟ್ಟೆತುಂಬ ತಿಂದು ಪ್ರತಿಭಟನೆ ನಡೆಸೋದಲ್ಲ ಎಂದು ಮಾಜಿ ಮೇಯರ್ ಶಾಂತಕುಮಾರಿ ಹಾಗೂ ಪಾಲಿಕೆ ಸದಸ್ಯೆ ವಾಣಿ ವಿ ರಾವ್ ಪ್ರತಿಭಟನಾನಿರತರ ಕಾಲೆಳೆದರು.