ETV Bharat / state

ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಕೊರತೆ - ಸಮಸ್ಯೆ ನಿವಾರಿಸಲು ಎ.ಎಲ್.ಎಸ್ - ಮುಖ್ಯ ಆಯುಕ್ತ ಗೌರವ್​ ಗುಪ್ತಾ

ಕೋವಿಡ್​ ಪ್ರಮಾಣ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ಅಡ್ವಾನ್ಸ್ ಲೈಫ್ ಸಪೋರ್ಟ್ ಸಿಸ್ಟಂ ಇರುವ ಆ್ಯಂಬುಲೆನ್ಸ್​​ ವ್ಯವಸ್ಥೆ (ಎ.ಎಲ್.ಎಸ್) ಮಾಡಲಾಗುತ್ತದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.

gowrav gupta
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ
author img

By

Published : Apr 15, 2021, 2:41 PM IST

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಐಸಿಯು ಬೆಡ್​ಗಳ ತೀವ್ರ ಕೊರತೆಯಾಗುತ್ತಿದೆ. ಸೋಂಕಿತರು ತುರ್ತಾಗಿ ಬೆಡ್ ಸಿಗದೆ ಪರದಾಡುವಂತಾಗಿದೆ. ಈ ಹಿನ್ನೆಲೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ಅಡ್ವಾನ್ಸ್ ಲೈಫ್ ಸಪೋರ್ಟ್ ಸಿಸ್ಟಂ ಇರುವ ಆ್ಯಂಬುಲೆನ್ಸ್ ವ್ಯವಸ್ಥೆ (ಎ.ಎಲ್.ಎಸ್) ಮಾಡಲಾಗುತ್ತದೆ ಎಂದು ಮುಖ್ಯ ಆಯುಕ್ತ ಗೌರವ್​ ಗುಪ್ತಾ ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ

ಖಾಸಗಿ ಆಸ್ಪತ್ರೆಗಳು ಇನ್ನೂ 3,500 ಬೆಡ್ ಕೊಡಲು ಬಾಕಿ:

ಖಾಸಗಿ ಆಸ್ಪತ್ರೆಗಳಿಂದ ಕೋವಿಡ್​ ಚಿಕಿತ್ಸೆಗೆ ಶೇ.50 ರಷ್ಟು ಬೆಡ್ ಕೊಡಲು ಸರ್ಕಾರ ಆದೇಶಿಸಿದೆ. ಖಾಸಗಿ ಆಸ್ಪತ್ರೆಗಳಿಂದ 6 ಸಾವಿರ ಬೆಡ್ ಗುರುತು ಮಾಡಲಾಗಿದೆ. ಈ ಪೈಕಿ ಈಗಾಗಲೇ 2,500 ಹಾಸಿಗೆಗಳು ಭರ್ತಿಯಾಗಿವೆ. ಸಂಖ್ಯೆ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಬಾಕಿ ಇರುವ 3,500 ಬೆಡ್ ಕೊಡಲು, ನಮ್ಮ ಅಧಿಕಾರಿಗಳು ಎಲ್ಲ ಆಸ್ಪತ್ರೆಗೆ ಭೇಟಿ ಕೊಟ್ಟು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದರು. ಇನ್ನೂ 24 ಗಂಟೆಯೊಳಗೆ ಟೆಸ್ಟ್ ರಿಸಲ್ಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸೋಂಕು ಲಕ್ಷಣಗಳನ್ನು ಕಡೆಗಣಿಸದಿರಿ:

ಸೋಂಕಿನ ಲಕ್ಷಣ ಇರುವವರು ಆರೋಗ್ಯ ಪರಿಸ್ಥಿತಿ ಹದಗೆಡುವವರೆಗೂ ಕಾಯದೆ, ತಕ್ಷಣ ಟೆಸ್ಟ್ ಮಾಡಿಸಿಕೊಂಡು ಅಗತ್ಯ ಔಷಧ ಪಡೆಯಬೇಕು. ಸರಿಯಾದ ಸಮಯಕ್ಕೆ ಟೆಸ್ಟ್ ಮಾಡಿ, ಹೋಂ ಐಸೋಲೇಷಬ್​ನಲ್ಲಿ ಗುಣಮುಖ ಆಗೋಕೆ ಕ್ರಮ ಕೈಗೊಳ್ಳಬಹುದು. ಆದರೆ, ಹೆಚ್ಚಿನವರು ಕೊನೆ ಗಳಿಗೆಯಲ್ಲಿ ಬರೋದ್ರಿಂದ ಬೆಡ್ ಸಮಸ್ಯೆ ಆಗ್ತಿದೆ. ವೆಂಟಿಲೇಟರ್​ಗಳು ಸೀಮಿತವಾಗಿ ಇರುತ್ತೆ. ಆದ್ರೆ ಎಲ್ಲರೂ ಅದನ್ನೇ ಕೇಳುತ್ತಿದ್ದಾರೆ. ಬೇಗ ಟೆಸ್ಟ್ ಮಾಡಿದರೆ, ಬೇಗ ಗುಣಮುಖರಾಗಬಹುದು ಎಂದರು.

600 ರಷ್ಟು ಬೆಡ್​ಗಳು ಖಾಲಿ ಇವೆ. ಆದರೆ ಐಸಿಯು, ವೆಂಟಿಲೇಟರ್ ಬೆಡ್​​ಗಳ ಸಂಖ್ಯೆ ಸೀಮಿತ ಆಗಿರುವುದ್ರಿಂದ ಸಮಸ್ಯೆ ಆಗ್ತಿವೆ ಎಂದರು. ಐಸಿಯು ಹಾಗೂ ಐಸಿಯು+ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್​ಗಳ ಸಂಖ್ಯೆಯನ್ನು ಕಳೆದ ವರ್ಷಕ್ಕಿಂದ ಹೆಚ್ಚಳ ಮಾಡಲಾಗಿದೆ. ಆಕ್ಸಿಜನ್ ಬೆಡ್ ಆರು ಪಟ್ಟು ಹೆಚ್ಚು ಮಾಡಲಾಗಿದೆ ಎಂದರು.

12 ಕೋವಿಡ್ ಕೇರ್ ಸೆಂಟರ್ ಸಿದ್ಧತೆ:

ನಗರದಲ್ಲಿ 12 ಕೋವಿಡ್ ಕೇರ್ ಸೆಂಟರ್​​ ಸಿದ್ಧತೆ ಮಾಡಲಾಗುತ್ತಿದ್ದು, ತುರ್ತು ಪರಿಸ್ಥಿತಿಗಾಗಿ ಕೋವಿಡ್ ಕೇರ್ ಸೆಂಟರ್​ನಲ್ಲೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಚಿತಾಗಾರಗಳ ಸಂಖ್ಯೆ ಹೆಚ್ಚಳ:

ನಗರದಲ್ಲಿ 13 ವಿದ್ಯುತ್ ಚಿತಾಗಾರಗಳು ಇವೆ. 4 ಕೋವಿಡ್​​ಗೆ ಮೀಸಲಿಡಲಾಗಿದೆ. ಇದರ ಸಂಖ್ಯೆ ಹೆಚ್ಚಳ ಮಾಡಲಾಗುವುದು. ಎಲ್ಲವನ್ನು ವ್ಯವಸ್ಥಿತವಾಗಿ ಹಂಚಲು ವ್ಯವಸ್ಥೆ ಮಾಡಲಾಗುವುದು. ನೌಕರರಿಗೆ ಸಂಬಳ, ಸುರಕ್ಷತಾ ವ್ಯವಸ್ಥೆಯ ಸಮಸ್ಯೆಯನ್ನೂ ತಕ್ಷಣ ಸರಿಪಡಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ನಿರಾಕರಿಸಿದರೆ ಕಠಿಣ ಶಿಕ್ಷೆ:

ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ ನಲ್ಲಿ ಬೆಡ್ ಖಾಲಿ ತೋರಿಸಿ, ರೋಗಿಗಳನ್ನು ಕಳಿಸಿದಾಗ ಬೆಡ್ ಇಲ್ಲ ಎಂದು ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಬೆಡ್ ಅಲಾಟ್ ಸಿಸ್ಟಂಗೆ ಖಾಸಗಿ ಆಸ್ಪತ್ರೆಗಳು‌ ಮಾನ್ಯತೆ ಕೊಡುತ್ತಿಲ್ಲ. ಬೇರೆ ಖಾಯಿಲೆಗಳಿರುವ ರೋಗಿಗಳಿಗೆ ಬೆಡ್ ಕೊಡುತ್ತಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಪ್ರತೀ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರ ಅಂತ ಪ್ರತಿನಿಧಿ ಇರ್ತಾರೆ. ಎಲ್ಲರ ಜೊತೆಗೆ ಸಮನ್ವಯ ಮಾಡುವ ಕೆಲಸ ಮಾಡುತ್ತಾರೆ ಎಂದರು.

ಇನ್ನೂ ನಗರದಲ್ಲಿಂದು 8,815 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.