ಬೆಂಗಳೂರು: ಗೌರಿ ಗಣೇಶ ಹಬ್ಬದ ನಡುವೆ ಜನರಿಗೆ ಬೆಲೆ ಏರಿಕೆ ಶಾಕ್ ಎದುರಾಗಿದೆ. ಒಂದೂವರೆ ವರ್ಷದಿಂದ ಹಬ್ಬಗಳಿಗೆ ಬ್ರೇಕ್ ಹಾಕಿದ್ದ ರಾಜ್ಯ ಸರ್ಕಾರ, ಇದೀಗ ಹಬ್ಬ ಆಚರಣೆ ಮಾಡಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹಣ್ಣು, ಹೂವಿನ ಬೆಲೆ ಗಗನಕ್ಕೇರಿರುವುದು ಜನತೆಯ ನಿದ್ದೆಗೆಡಿಸಿದೆ.
ಇಂದು ಕೆ.ಆರ್ ಮಾರ್ಕೆಟ್ನಲ್ಲಿ ಹೂ, ಹಣ್ಣು ಖರೀದಿ ವ್ಯಾಪಾರ ಜೋರಾಗಿದೆ. ಕಳೆದ ವಾರದ ಬೆಲೆಗಿಂತ ಈಗಿನ ಬೆಲೆ ದುಪ್ಪಟ್ಟಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಬೆಲೆ ಏರಿಕೆ:
- ಶಿಮ್ಲಾ ಸೇಬು (1 kg): ಕಳೆದ ವಾರ - 60 : ಹಬ್ಬದ ಬೆಲೆ - 120
- ಸೀತಾಫಲ (1 kg): ಕಳೆದ ವಾರ - 40 : ಹಬ್ಬದ ಬೆಲೆ - 80
- ಮೂಸಂಬಿ (1 kg): ಕಳೆದ ವಾರ - 30 : ಹಬ್ಬದ ಬೆಲೆ - 60
- ದಾಳಿಂಬೆ (1 kg): ಕಳೆದ ವಾರ - 80: ಹಬ್ಬದ ಬೆಲೆ - 150
ಏರಿದ ಹೂವುಗಳ ಬೆಲೆ :
- ಚೆಂಡು ಹೂವು (1 kg): ಕಳೆದ ವಾರ - 30 - 50 : ಹಬ್ಬದ ಬೆಲೆ 80 - 120
- ಮಲ್ಲಿಗೆ (1 kg): ಕಳೆದ ವಾರ - 600 : ಹಬ್ಬದ ಬೆಲೆ - 800
- ಮಳ್ಳೆ ಹೂವು (1 kg): ಕಳೆದ ವಾರ 400 : ಹಬ್ಬದ ಬೆಲೆ - 600
- ಗುಲಾಬಿ (1 kg): ಕಳೆದ ವಾರ - 200 : ಹಬ್ಬದ ಬೆಲೆ - 240
- ಮಿಲ್ಕಿ ವೈಟ್ (1 kg): ಕಳೆದ ವಾರ - 200 : ಹಬ್ಬದ ಬೆಲೆ - 300