ETV Bharat / state

ತಪ್ಪಿತಸ್ಥರನ್ನು ಬಂಧಿಸೋ ಬದಲು ಆರೋಪ ಮಾಡಿದವರಿಗೆ ನೋಟಿಸ್ ನೀಡುವುದು ಎಷ್ಟು ಸರಿ: ಪ್ರಿಯಾಂಕ ಪ್ರಶ್ನೆ

ಸರ್ಕಾರದ ತಾಳಕ್ಕೆ ಕುಣಿಯುವವನು ನಾನಲ್ಲ. ನಾನೊಬ್ಬ ಜನಪ್ರತಿನಿಧಿ. ಜನರಿಂದ ಬಂದವನು. ಸಾರ್ವಜನಿಕರ ಸಮಸ್ಯೆ ಎತ್ತಿಹಿಡಿಯುವುದು ನನ್ನ ಕೆಲಸ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಖರ್ಗೆ ಅವರು ತಿಳಿಸಿದ್ದಾರೆ.

ಪ್ರಿಯಾಂಕ ಖರ್ಗೆ
ಪ್ರಿಯಾಂಕ ಖರ್ಗೆ
author img

By

Published : Apr 25, 2022, 3:48 PM IST

ಬೆಂಗಳೂರು: ಪೊಲೀಸ್ ನೇಮಕದಲ್ಲಿ ಅಕ್ರಮ ಎಸಗಿದವರನ್ನು ಬಂಧಿಸುವ ಬದಲು ಪ್ರಶ್ನಿಸಿದ ನನಗೆ ನೋಟಿಸ್ ನೀಡುವುದು ಎಷ್ಟು ಸರಿ ಅಂತ ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನೀವೇನು ಕತ್ತೆ ಕಾಯ್ತಿದ್ದೀರಾ?, ಕಡ್ಲೆಪುರಿ ತಿನ್ನುತ್ತಿದ್ದೀರಾ? ಆರೋಪಿ ಮೇಲೆ ಯಾಕೆ ಎಫ್​ಐಆರ್​ ಮಾಡಿಲ್ಲ. ಇದರಲ್ಲಿ ಡಿಪಾರ್ಟ್​ಮೆಂಟ್ ಶಾಮೀಲಾಗಿದೆ ಅಂದುಕೊಳ್ಳಬಹುದಾ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಖರ್ಗೆ ಅವರು ಮಾತನಾಡಿದ್ದಾರೆ

ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರು? ಯಾಕೆ ಅವರನ್ನ ನೀವು ಇನ್ನೂ ವಿಚಾರಣೆಗೆ ಕರೆದಿಲ್ಲ. ನೇಮಕಾತಿ ಎಕ್ಸಿಕ್ಯೂಟಿವ್ ಹೆಡ್ ಹೋಂ ಮಿನಿಸ್ಟರ್. ಇಲ್ಲಿಯವರೆಗೆ ಯಾಕೆ ಅವರನ್ನ ವಿಚಾರಣೆಗೆ ಕರೆದಿಲ್ಲ. ನೇಮಕಾತಿ ಮಾಡುವವರನ್ನ ತನಿಖೆಗೆ ಯಾಕೆ ಒಳಪಡಿಸಿಲ್ಲ. ಗೃಹ ಸಚಿವರು ಆರೋಪಿ ಮನೆಗೆ ಹೋಗಿರ್ತಾರೆ. ದಿವ್ಯಾ ಹಾರಗಿ ಮನೆಗೆ ಹೋಗಿದ್ದಾರೆ. ಅವರ ಮನೆಯಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಬಾದಾಮಿ, ಗೋಡಂಬಿ, ಕಿಸ್ಮಿಸ್ ತಿಂದು ಬರ್ತಾರೆ. ಯಾಕೆ ಗೃಹ ಸಚಿವರಿಗೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಜ್ಞಾನ ಜ್ಯೋತಿ ತರಬೇತಿ ಸಂಸ್ಥೆ ಎಕ್ಸಾಂ ಸೆಂಟರ್ ಅಲ್ಲ. ಹಾಗಂತ ಕಲಬುರಗಿಯಲ್ಲಿ ಲೆಟರ್ ಕೊಟ್ಟಿದ್ದಾರೆ. ಸುನೀಲ್ ಕುಮಾರ್ ಪ್ರಿಯಾಂಕ್ ತನಿಖೆ ಮಾಡಿ ಅಂತಾರೆ. ಸ್ವಾಮಿ ಸುನೀಲ್ ಮೊದಲು ಗೃಹ ಸಚಿವರನ್ನ ತನಿಖೆಗೊಳಪಡಿಸಿ. ಗೃಹ ಸಚಿವರೇ ಆರೋಪಿ ಮನೆಗೆ ಹೋಗಿ ಬರ್ತಾರೆ. ಸಿಎಂ, ಗೃಹ ಸಚಿವರಿಗಿಂತ ನಾನು ಪ್ರಭಾವಿಯೇ? ನಾನು ಪ್ರಭಾವಿಯಾಗಿದ್ದಾರೆ ಅರೆಸ್ಟ್ ಮಾಡಿಸಿ. ದಿವ್ಯಾ ಹಾರಗಿ ಚಿಕ್ಕ ಚಿಕ್ಕ ಮೀನುಗಳಷ್ಟೇ. ಇವರು ಹಣ ಕಲೆಕ್ಟ್ ಮಾಡೋರು. ಅವರು ಕಲೆಕ್ಟ್ ಮಾಡಿದ್ದು ಎಲ್ಲಿಗೆ ಹೋಗುತ್ತೆ. ಅದು ಬೆಂಗಳೂರಿಗೆ ಬರುತ್ತೆ. ಅಧಿಕಾರಿಗಳಿಗೆ, ಇವರಿಗೆ ಹೊರಬರುತ್ತೆ. ಹಣ ಅಧಿಕಾರಿ, ಶಾಸಕರು, ಬಿಜೆಪಿ ಕಚೇರಿಗೂ ಹೋಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇಣುಕಾಚಾರ್ಯ ಯುವಕರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಎಸ್ ಸಿ ಸರ್ಟಿಫಿಕೇಟ್​ ಪಡೆದವರು ಯಾರು? ದಲಿತ ಯುವಕರ ಅವಕಾಶ ಕಿತ್ತವರು ಯಾರು. ಕಿವಿ ಮೇಲೆ ಲಾಲ್​ಬಾಗ್​​ ಇಟ್ಟಿದ್ದಾರೆ ಅಂತಾರೆ. ದಲಿತರ ಮೀಸಲಾತಿ ಕಿತ್ತುಕೊಂಡವರು ನೀವಲ್ವೇ? ನಿಮ್ಮದೇ ಸರ್ಕಾರ, ನಿಮ್ಮದೇ ಅಧಿಕಾರಿ ಇದ್ದಾರೆ. ಸರಿಯಾದ ತನಿಖೆ ಯಾಕೆ ನಡೆಯುತ್ತಿಲ್ಲ. ಸಿಎಂ, ಕಟೀಲ್ ಯತ್ನಾಳ್ ಸಲಹೆ ತೆಗೆದುಕೊಳ್ಳಿ. ಗೃಹ ಸಚಿವರು ಸರಿಯಿಲ್ಲ ಅಂತ ಯತ್ನಾಳ್ ಹೇಳಿದ್ದಾರೆ. ಅವರ ಸಲಹೆಯನ್ನ ಸರ್ಕಾರ ಪಡೆದುಕೊಳ್ಳಲಿ ಎಂದರು.

ಸರ್ಕಾರದ ತಾಳಕ್ಕೆ ಕುಣಿಯುವವನು ನಾನಲ್ಲ. ನಾನೊಬ್ಬ ಜನಪ್ರತಿನಿಧಿ. ಜನರಿಂದ ಬಂದವನು. ಸಾರ್ವಜನಿಕರ ಸಮಸ್ಯೆ ಎತ್ತಿಹಿಡಿಯುವುದು ನನ್ನ ಕೆಲಸ. ನಿಮ್ಮ ವೈಫಲ್ಯ ನಾವು ಬಿಚ್ಚಿಡಬಾರ್ದಾ? ನಾನು 15 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಸಾಕಷ್ಟು ಜನ ಸಮಸ್ಯೆ ಹೊತ್ತು ಬರ್ತಾರೆ. ಅನ್ಯಾಯ ಆದಾಗ ನಮ್ಮ‌ಬಳಿ ಬರ್ತಾರೆ. ಅವರ ಸಮಸ್ಯೆಯನ್ನ ಎತ್ತಿಹಿಡಿಯೋ ಕೆಲಸ ನಮ್ಮದು. ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯೋಕೆ ಆಗಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಸ್ಥಳದಲ್ಲೇ ಇಬ್ಬರ ಸಾವು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.