ETV Bharat / state

ಸಿಸಿಬಿ ಕಚೇರಿಗೆ ಆಗಮಿಸಿದ ಪ್ರಶಾಂತ್ ಸಂಬರಗಿ! - ಸ್ಯಾಂಡಲ್​​ವುಡ್​ಗೆ ಡ್ರಗ್ಸ್ ನಂಟು

ಕನ್ನಡ ಚಿತ್ರರಂಗದ ಕೆಲವು ನಟನಟಿಯರಿಗೆ ಡ್ರಗ್ಸ್ ಮಾಫಿಯಾ ನಂಟಿದೆ ಎಂದು ಅರೋಪ ಮಾಡುತ್ತಲೇ ಬಂದಿದ್ದ ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ತಿಳಿಸಿತ್ತು. ನೋಟಿಸ್ ನೀಡಿದ ಬೆನ್ನಲ್ಲೇ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ಒಂದು ಫೈಲ್ ಸಮೇತ ಆಗಮಿಸಿದ್ದಾರೆ.

Prashant Sambaragi arrived at CCB office!
ಸಿಸಿಬಿ ಕಚೇರಿಗೆ ಆಗಮಿಸಿದ ಪ್ರಶಾಂತ್ ಸಂಬರಗಿ!
author img

By

Published : Sep 12, 2020, 11:24 AM IST

ಬೆಂಗಳೂರು: ಸ್ಯಾಂಡಲ್​​ವುಡ್​ಗೆ ಡ್ರಗ್ಸ್ ನಂಟು ಅರೋಪಕ್ಕೆ ಸಂಭದಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.

ಕನ್ನಡ ಚಿತ್ರರಂಗದ ಕೆಲವು ನಟನಟಿಯರಿಗೆ ಡ್ರಗ್ಸ್ ಮಾಫಿಯಾ ನಂಟಿದೆ ಎಂದು ಅರೋಪ ಮಾಡುತ್ತಲೇ ಬಂದಿದ್ದ ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ತಿಳಿಸಿತ್ತು. ನೋಟಿಸ್ ನೀಡಿದ ಬೆನ್ನಲ್ಲೇ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ಒಂದು ಫೈಲ್ ಸಮೇತ ಆಗಮಿಸಿದ್ದಾರೆ. ಇನ್ನು ಪ್ರಶಾಂತ್ ಸಂಬರಗಿ ನಟಿ ಸಂಜನಾ ಹಾಗೂ ಶಾಸಕ ಜಮೀರ್ ಅಹಮ್ಮದ್ ಬಗ್ಗೆ ಹೇಳಿಕೆ ಕೊಟ್ಟು ಸಂಚನಲ ಮೂಡಿಸಿದ್ದು, ಇಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ. ಎನ್​ಸಿಬಿ ಎಸಿಪಿ ಗೌತಮ್ ಕುಮಾರ್ ಮತ್ತು ಇನ್ಸ್​​ಪೆಕ್ಟರ್​​ ಸಿರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

ಸಿಸಿಬಿ ಕಚೇರಿಗೆ ಆಗಮಿಸಿದ ಪ್ರಶಾಂತ್ ಸಂಬರಗಿ!

ಇನ್ನು ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ತರೆಳುವ ಮುನ್ನ ಮತ್ತೊಂದು ಬಾಂಬ್ ಸಿಡಿಸಿದ್ದು, ಮಾನ್ಯ ಶಾಸಕ ಜಮೀರ್ ಅಹಮ್ಮದ್ ಕ್ಯಾಬಿನೆಟ್ ಸದಸ್ಯರಾಗಿದ್ದ ವೇಳೆ ಕೊಲೊಂಬೋಗೆ ಯಾಕೆ ತೆರಳಿದ್ರು, 8,9,10-2019ರ ಆ ಮೂರು ದಿನ ಯಾರ ಜೊತೆ ಯಾಕೆ ಹೋಗಿದ್ರು, ಜಮೀರ್ ಸಂಜನಾ ಜೊತೆ ಹೋಗಿದ್ರಾ, ಡ್ರಗ್ಸ್​​ ಜೊತೆ ಲಿಂಕ್ ಇದೆಯಾ ಎಂದು ನಾನು ಎಲ್ಲೂ ಹೇಳಿಲ್ಲ. ನಾನು ಹಿಟ್ ಅಂಡ್ ರನ್ ಮಾಡಲ್ಲ. ನನ್ನ ಬಳಿ ಸಾಕ್ಷ್ಯ ಇಲ್ಲದೆ ಮಾಹಿತಿ ಹೇಳೊದಕ್ಕೆ ಸಾಧ್ಯವಿಲ್ಲ. ಈ ಫೈಲ್​​ನಲ್ಲಿ ಕೆಲವರ ಭವಿಷ್ಯ ಅಡಗಿದೆ ಎಂದು ಸಂಬರಗಿ ಬಾಂಬ್ ಸಿಡಿಸಿ ಸಿಸಿಬಿ ಕಚೇರಿಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.