ETV Bharat / state

MLC Election: ಪರಿಷತ್ ಸಭಾನಾಯಕನ ಸ್ಥಾನ ಅಬಾಧಿತ: ಕವಟಗಿಮಠ ಕೈತಪ್ಪುತ್ತಾ ಸಚೇತಕ ಸ್ಥಾನ? - ಸಚೇತಕ ಕವಟಗಿಮಠ

ಪರಿಷತ್​ನಲ್ಲಿ ಸಭಾ ನಾಯಕರಾಗಿ ಕೋಟ ಶ್ರೀನಿವಾಸ್ ಪೂಜಾರಿ ಮುಂದುವರಿಕೆಯಾದರೆ ಉಪಸಭಾಪತಿ ಸ್ಥಾನಕ್ಕೆ ಪೈಪೋಟಿ ಬಿದ್ದರೂ ಅಚ್ಚರಿಯಿಲ್ಲ. ಆದರೆ ಸಚೇತಕ ಕವಟಗಿಮಠ ಚುನಾವಣೆ ಗೆದ್ದು ಮತ್ತೆ ಪರಿಷತ್ ಗದ್ದುಗೆ ಏರಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.

Kavatagimata, Jarakiholi, Kota Srinivasa Poojary
ಕವಟಗಿಮಠ, ಜಾರಕಿಹೊಳಿ, ಕೋಟ ಶ್ರೀನಿವಾಸ್ ಪೂಜಾರಿ
author img

By

Published : Dec 6, 2021, 3:47 PM IST

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆಯುತ್ತಿರುವ ಚುನಾವಣೆಗೆ ಬಿಜೆಪಿಯಿಂದ ಉಪಸಭಾಪತಿ, ಸಭಾನಾಯಕ ಹಾಗೂ ಸರ್ಕಾರಿ ಮುಖ್ಯ ಸಚೇತಕರು ಕಣದಲ್ಲಿದ್ದಾರೆ. ಇದರಲ್ಲಿ ಸಭಾನಾಯಕರ ಸ್ಥಾನ ಅಬಾಧಿತವಾಗಿದ್ದು, ಪ್ರಾಣೇಶ್​ ಉಪಸಭಾಪತಿ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. ಆದರ ಸಚೇತಕ ಕವಟಗಿಮಠ ಭವಿಷ್ಯ ಮಾತ್ರ ಅಸ್ಪಷ್ಟವಾಗಿದೆ.

ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿಯಿಂದ ವಿಧಾನ ಪರಿಷತ್​ನ ಮೂರು ಪ್ರಮುಖ ಸ್ಥಾನಗಳನ್ನು ನಿಭಾಯಿಸುತ್ತಿರುವವರು ಕಣದಲ್ಲಿದ್ದು, ಚುನಾವಣೆ ಕುತೂಹಲ ಮೂಡಿಸಿದೆ. ಚಿಕ್ಕಮಗಳೂರು ಕ್ಷೇತ್ರದಿಂದ ಉಪಸಭಾಪತಿ ಪ್ರಾಣೇಶ್ ಕಣಕ್ಕಿಳಿದಿದ್ದು, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ.

ಮಂಜುನಾಥ್ ಭಂಡಾರಿಗೆ ಒಲಿಯುತ್ತಾ ಗೆಲುವು?

ಜೆಡಿಎಸ್​​ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ, ಹಾಗಾಗಿ ಜೆಡಿಎಸ್ ಮತಗಳು ಪರಿಷತ್​ನಲ್ಲಿನ ಮೈತ್ರಿಯಿಂದಾಗಿ ಬಿಜೆಪಿ ಕಡೆ ಬರಲಿವೆ ಎನ್ನುವ ನಿರೀಕ್ಷೆ ಬಿಜೆಪಿಗಿದೆ. ಹಾಗಾಗಿ ಉಪಸಭಾಪತಿ ಪ್ರಾಣೇಶ್ ಪರಾಭವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಪರಿಷತ್ ಉಪಸಭಾಪತಿ ಸ್ಥಾನದಲ್ಲಿ ಪ್ರಾಣೇಶ್ ಮುಂದುವರೆಯುವ ಸಾಧ್ಯತೆಯೇ ಹೆಚ್ಚಾಗಿದೆ ಎನ್ನಲಾಗ್ತಿದೆ.

ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಥಾನ ಅಬಾಧಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಸದಸ್ಯತ್ವವಿದ್ದು, ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಇಬ್ಬರನ್ನು ಪರಿಷತ್​​ಗೆ ಆಯ್ಕೆ ಮಾಡಬೇಕಿದೆ. ಇಲ್ಲಿ ಆಡಳಿತ ಪಕ್ಷ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ಕಾಂಗ್ರೆಸ್​​ನಿಂದ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿ ಹಾಕದೆ ಬೆಂಬಲಕ್ಕೆ ನಿಂತ ಜೆಡಿಎಸ್

ಎರಡೂ ಪಕ್ಷಗಳು ಒಬ್ಬೊಬ್ಬರೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಅಲ್ಲದೆ ಎಸ್‌ಡಿಪಿಐ ಮಾತ್ರ ಅಭ್ಯರ್ಥಿಯನ್ನು ಹಾಕಿದ್ದು, ಕೇವಲ ಮೂವರು ಮಾತ್ರ ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​​ನ ಇಬ್ಬರೂ ಅಭ್ಯರ್ಥಿಗಳ ಆಯ್ಕೆ ಬಹುತೇಕ ಖಚಿತವಾಗಿದೆ. ಕೋಟ ಗೆಲುವು ಬಹುತೇಕ ಖಚಿತವಾಗಿರುವ ಹಿನ್ನೆಲೆ ಪರಿಷತ್ ಸಭಾನಾಯಕರಾಗಿ ಅವರೇ ಮುಂದುವರೆಯಲಿದ್ದಾರೆ.

ಬಿಜೆಪಿಗೆ ತಲೆನೋವಾಗಿರುವುದು ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ವಿಚಾರದಲ್ಲಿ. ದ್ವಿಸದಸ್ಯ ಬಲದ ಬೆಳಗಾವಿ ಸ್ಥಳೀಯ ಸಂಸ್ಥೆಯಿಂದ ಬಿಜೆಪಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಹಾಂತೇಶ ಕವಟಗಿಮಠ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಆದರೆ, ಇಲ್ಲಿ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರವಾಗಿ ಕಣಕ್ಕಿಳಿದಿರುವುದು ಕವಟಗಿಮಠ ಸುಲಭ ಗೆಲುವಿಗೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

ಬಿಜೆಪಿ ಲಖನ್ ಜಾರಕಿಹೊಳಿ ತಲೆನೋವು

ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಹೆಚ್ಚಾಗಿದ್ದು, ಅವರ ಕುಟುಂಬ ಬೆಂಬಲಿತ ಮತಗಳು ಲಖನ್ ಜಾರಕಿಹೊಳಿ ಪರ ಚಲಾವಣೆಯಾದಲ್ಲಿ ಮಹಾಂತೇಶ ಕವಟಗಿಮಠಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದು ಜಿಲ್ಲೆಯ ಬಿಜೆಪಿ ನಾಯಕರು ಮಾತ್ರವಲ್ಲ ರಾಜ್ಯ ನಾಯಕರಿಗೂ ತಲೆನೋವಾಗಿ ಪರಿಣಮಿಸಿದೆ. ಲಖನ್ ಜಾರಕಿಹೊಳಿ ನಾಮಪತ್ರ ವಾಪಸ್​ಗೆ ಬಿಜೆಪಿ ನಾಯಕರು ಪ್ರಯತ್ನಿಸಿದರೂ ಸಫಲವಾಗಲಿಲ್ಲ.

ಸದ್ಯ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದರೂ ಕೂಡ ಲಖನ್ ಪರವೂ ಕೆಲಸ ಮಾಡುತ್ತಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತಗಳನ್ನು ಲಖನ್​ಗೆ ನೀಡುವಂತೆ ಬಿಜೆಪಿ ಸದಸ್ಯರಿಗೆ ಮನವಿ ಮಾಡುತ್ತಿದ್ದಾರೆ. ಒಂದು ವೇಳೆ ಬೆಳಗಾವಿಯಲ್ಲಿ ಲಖನ್ ಬಿಜೆಪಿ ಮತಗಳನ್ನು ಸೆಳೆಯುವಲ್ಲಿ ಸಫಲವಾದರೆ ಕಮಟಗಿಮಠ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಖಚಿತವಾಗಿದೆ. ಹಾಗಾಗಿ ಮೂರು ಪ್ರಮುಖ ಸ್ಥಾನಗಳಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರ ಸಭಾನಾಯಕ ಸ್ಥಾನ ಅಬಾಧಿತವಾಗಿದ್ದು, ಪ್ರಾಣೇಶ್ ಅವರ ಉಪ ಸಭಾಪತಿ ಸ್ಥಾನಕ್ಕೂ ಅಂತಹ ಸಮಸ್ಯೆಯಾಗಲಾರದು. ಆದರೆ ಸರ್ಕಾರಿ ಮುಖ್ಯ ಸಚೇತಕ ಸ್ಥಾನದ ವಿಚಾರದಲ್ಲಿ ಮಾತ್ರ ವ್ಯತ್ಯಾಸವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಮಹಾಂತೇಶ್ ಕವಟಗಿಮಠ ಗೆಲುವಿನ ವಿಶ್ವಾಸ

ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಲಖನ್ ಹೆಚ್ಚಿನ ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಖಚಿತವಾಗಲಿದೆ. ಆಗ ಪರಿಷತ್​ನಲ್ಲಿ ಕವಟಗಿಮಠ ಜಾಗಕ್ಕೆ ಬಿಜೆಪಿ ಬೇರೊಬ್ಬರ ನೇಮಕ ಮಾಡಬೇಕಾಗಲಿದೆ. ಆದರೆ ಸದ್ಯಕ್ಕೆ ಅಂತಹ ವಾತಾವರಣ ಇಲ್ಲ ಎನ್ನುತ್ತಾರೆ ಬಿಜೆಪಿ ನಾಯಕರು. ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚಿತವಾಗಿದ್ದು, ಲಖನ್ ಜಾರಕಿಹೊಳಿ ಕಾಂಗ್ರೆಸ್ ಮತಗಳನ್ನು ಸೆಳೆಯಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕವಟಗಿಮಠ ಭವಿಷ್ಯ ಇದೀಗ ಲಖನ್ ಜಾರಕಿಹೊಳಿ ಯಾರ ಮತಗಳನ್ನು ಸೆಳೆಯಲಿದ್ದಾರೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ. ಪರಿಷತ್​​​ನಲ್ಲಿ ಸರ್ಕಾರಿ ಮುಖ್ಯ ಸಚೇತಕ ಸ್ಥಾನದಲ್ಲಿ ಕವಟಗಿಮಠ ಮುಂದುವರೆಯಲಿದ್ದಾರಾ ಅಥವಾ ಬೇರೊಬ್ಬರ ನೇಮಕವಾಗಲಿದೆಯಾ ಎನ್ನುವುದು ಡಿಸೆಂಬರ್ 14 ರಂದು ಮತ ಎಣಿಕೆ ಬಳಿಕ ಸ್ಪಷ್ಟವಾಗಲಿದೆ.

ಇದನ್ನೂ ಓದಿ: ನಿತ್ಯ ಜೀನೋಮ್ ಸೀಕ್ವೆನ್ಸಿಂಗ್​​​ಗೆ 15 ಕ್ಕೂ ಹೆಚ್ಚು ಸ್ಯಾಂಪಲ್ಸ್: ಗೌರವ್ ಗುಪ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.