ETV Bharat / state

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7ಕೆಜಿ ಚಿನ್ನ, 46 ಕೆಜಿ ಬೆಳ್ಳಿ ವಶ - Etv Bharat kannada

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಕೆಜಿ ಚಿನ್ನ ಹಾಗೂ 46 ಕೆಜಿ ಬೆಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

7ಕೆಜಿ ಚಿನ್ನ 46 ಬೆಳ್ಳಿ ವಶ
7ಕೆಜಿ ಚಿನ್ನ 46 ಬೆಳ್ಳಿ ವಶ
author img

By

Published : Apr 19, 2023, 2:01 PM IST

ಬೆಂಗಳೂರು: ಚುನಾವಣೆಗೂ ಮುನ್ನ ಅಕ್ರಮ ಸಂಪತ್ತಿನ ಬೇಟೆ ಮುಂದುವರೆದಿದೆ. ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 7 ಕೆ.ಜಿ 999 ಗ್ರಾಂ ಚಿನ್ನ ಹಾಗೂ 46 ಕೆ.ಜಿ 700 ಗ್ರಾಂ ಬೆಳ್ಳಿಯನ್ನ ವಿವೇಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಈಚರ್ ವಾಹನದಲ್ಲಿ ಸಾಗಿಸುತ್ತಿದ್ದಾಗ ವಿವೇಕನಗರ ಪೊಲೀಸ ಪರಿಶೀಲನೆ ವೇಳೆ ಚಿನ್ನಾಭರಣ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಿರುವ ಪೊಲೀಸರು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾದ ಆಭರಣಗಳ ಮೌಲ್ಯ ಒಟ್ಟು ಐದು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದ್ದು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವೇರಿಯಲ್ಲಿ 6 ಕೋಟಿ ಮೌಲ್ಯದ ಚಿನ್ನಾಭರಣ ವಶ: ಅಜ್ಜಯ್ಯ ಗುಡಿ ಚೆಕ್​ಪೋಸ್ಟ್​ ಬಳಿ ಚುನಾವಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸರಿ ಸುಮಾರು 6 ಕೋಟಿ 90 ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಹಾವೇರಿ ಮತ್ತು ದಾವಣಗೆರೆಯ ಚಿನ್ನದ ಅಂಗಡಿಗಳಿಗೆ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 11 ಕೆ.ಜಿಯಷ್ಟು ಚಿನ್ನ, 70 ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನು ಸಾಗಿಸಲಾಗುತ್ತಿತ್ತು.

ಆಭರಣಗಳನ್ನು ಖರೀದಿಸಿರು ಬಿಲ್​ಗಳಿದ್ದು ಆದರೇ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಹಾಗೇ ನಿಖರವಾಗಿ ಈ ಚಿನ್ನಾಭರಣಗಳನ್ನು ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ದಾಖಲೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿಗೆ ವರ್ಗಾಯಿಸಲಾಗಿದೆ.

ಬೆಳಗಾವಿಯಲ್ಲಿ ಹೊಲಿಗೆ ಯಂತ್ರ ವಶ: ಬೆಳಗಾವಿ: ಮತದಾರರಿಗೆ ಹಂಚಲು ತಂದಿದ್ದ ಎನ್ನಲಾದ ಹೊಲಿಗೆ ಯಂತ್ರಗಳು ಮತ್ತು ಟಿಫಿನ್ ಬಾಕ್ಸ್​ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೌರವ್ ಚೋಪ್ರಾ ಅವರ ಭಾವಚಿತ್ರವಿರುವ ಟಿಫಿನ್ ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ಸವದತ್ತಿ ಪಟ್ಟಣದ ಗೋದಾಮಿನಲ್ಲಿ ಹೊಲಿಗೆ ಯಂತ್ರಗಳು ಹಾಗೂ ಟಿಫಿನ್ ಬಾಕ್ಸ್ಗಳನ್ನು ಮತದಾರರಿಗೆ ಹಂಚಲು ಸಂಗ್ರಹಿಸಲಾಗಿತ್ತು ಎನ್ನಲಾಗಿದ್ದು, ಸುಮಾರು 2300 ಹೊಲಿಗೆ ಯಂತ್ರಗಳನ್ನ ಜಪ್ತಿ ಮಾಡಿದ್ದಾರೆ.

ಜಿಎಸ್​ಟಿ ಅಧಿಕಾರಿಗಳು ಹಾಗೂ ಸ್ಥಳೀಯ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದೆ. ಹೊಲಿಗೆ ಯಂತ್ರಗಳ ಮೇಲೆ ಇರುವ ಚೋಪ್ರಾ ಸಿಂಬಲ್ ಹಾಗೂ ಫೋಟೋಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹೊಲಿಗೆ ಯಂತ್ರಗಳ ಬಿಲ್ ಹಾಗೂ ಅದಕ್ಕೆ ಬೇಕಾದ ದಾಖಲೆಗಳನ್ನು ಟಿಂಬರ್ ಯಾರ್ಡ್ ನವರು ಅಧಿಕಾರಿಗಳಿಗೆ ಒದಗಿಸಿದ್ದಾರೆ. ನೀತಿ ಸಂಹಿತೆ ಬರುವ ಮುಂಚೆ ಇವುಗಳನ್ನು ತರಲಾಗಿದೆ ಎಲ್ಲಿಯೂ ಹಂಚಿಲ್ಲ ಎಂದು ಅಧಿಕಾರಿಗಳಿಗೆ ಅಭ್ಯರ್ಥಿ ಕಡೆಯವರು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಅಬಕಾರಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಬರೋಬ್ಬರಿ 54 ಲಕ್ಷ ಮೌಲ್ಯದ ಮದ್ಯ ವಶ

ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಟಿಫಿನ್ ಬಾಕ್ಸ್, ಹೊಲಿಗೆ ಯಂತ್ರಗಳ ಜಪ್ತಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.