ಬೆಂಗಳೂರು: ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆದರೆ, ಆರೋಪಿತರ ಕೆಲ ಕೋಡ್ ವರ್ಡ್ಗಳು ಇದ್ದು, ಅದನ್ನು ಡಿಕೋಡ್ ಮಾಡುವುದು ಸವಾಲಾಗಿದೆ.
ಈಗಾಗಲೇ 15 ಜನರು ಸಿಕ್ಕಿಬಿದ್ದಿರುವುದು ಗೊತ್ತೇ ಇದೆ. ಅವರನ್ನು ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಚೇರಿ ಮತ್ತು ಮನೆಗಳ ಮೇಲೆ ದಾಳಿ ವೇಳೆ ವಶಕ್ಕೆ ಪಡೆದುಕೊಂಡಿರುವ ವಸ್ತುಗಳಲ್ಲಿ ಕೆಲವೊಂದು ಡೈರಿಗಳು ಸಿಕ್ಕಿದೆ. ಆ ಡೈರಿಯಲ್ಲಿ ಉಲ್ಲೇಖಿಸಿರುವ ಕೋಡ್ ವರ್ಡ್ಗಳು ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಮುಖ ಆರೋಪಿಗಳಾದ ನಾಸೀರ್ ಪಾಷಾ ಹಾಗೂ ಮೊಹಮ್ಮದ್ ಅಶ್ರಫ್ ಇಬ್ಬರನ್ನು ಪೂರ್ವ ವಿಭಾಗ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರು ಉಳಿದ ಆರೋಪಿಗಳಿಗೆ ದೇಶ ವಿರೋಧಿ ಕೃತ್ಯಗಳಿಗೆ ಬೇಕಾದಂತಹ ಸೂಚನೆ ಹಾಗೂ ಕೆಲವೊಂದು ಪ್ರಚೋದನಾಕಾರಿ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಎನ್ನಲಾಗುತ್ತಿದೆ.
ಅಷ್ಟೇ ಅಲ್ಲ, ಇವರಿಬ್ಬರ ಅಕೌಂಟ್ಗೆ ವಿದೇಶಿ ಫಂಡಿಂಗ್ ಆಗಿರುವುದರ ಬಗ್ಗೆ ಕೂಡ ಬ್ಯಾಂಕ್ ರೆಕಾರ್ಡ್ ಮೂಲಕ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಇನ್ನೂ ಕೆಲ ಆರೋಪಿಗಳ ಬಳಿ ಡೈರಿಗಳು ಸಿಕ್ಕಿದ್ದು, ಆ ಡೈರಿಯಲ್ಲಿ ಕೋಡ್ ವರ್ಡ್ ರೀತಿಯಲ್ಲಿ ಒಂದಷ್ಟು ಶಬ್ಧಗಳನ್ನು ಬಳಕೆ ಮಾಡಲಾಗಿದೆ. ಅದರಲ್ಲಿ 'training to be organized' ಎಂಬ ಶಬ್ದವೇ ಸ್ವಲ್ಪ ಮಟ್ಟಿಗೆ ಆತಂಕ ಹುಟ್ಟಿಸುವಂತದ್ದು, ಈ ಶಬ್ಧವನ್ನು ಯಾವ ಅರ್ಥದಲ್ಲಿ ಬರೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.
ಇದು ಭಯೋತ್ಪಾದಕ ಕೃತ್ಯದಾ ಟ್ರೈನಿಂಗಾ?, ಕೋಮುಗಲಭೆಗೆ ಸೃಷ್ಟಿಗಾ ಅಥವಾ ಸ್ಫೋಟಕ ತಯಾರಿಸಲು ತರಬೇತಿಯಾ ಎಂಬುದರ ಬಗ್ಗೆ ಮೊದಲು ಪೊಲೀಸರು ತಿಳಿದುಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ. ಈ ಹದಿನೈದೂ ಜನರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬಂಧಿತ ಪಿಎಫ್ಐ ಪ್ರಮುಖರ ಮನೆಯಲ್ಲಿ ಸಾವರ್ಕರ್ ಪುಸ್ತಕ: ಆರೋಪಿಗಳಿಗಿದೆ ಕೆಲ ರಾಜಕಾರಣಿಗಳ ನಂಟು