ETV Bharat / state

ಕೆಎಸ್​​ಆರ್​ಪಿ ಕಾನ್ಸ್‌ಟೇಬಲ್ ಸ್ಕೂಟರ್‌ನ್ನೇ ಕದ್ದ ಕಳ್ಳ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಕೆಎಸ್​​ಆರ್​ಪಿ 4ನೇ ಬೇಟಾಲಿಯನ್ ಹೆಡ್ ಕಾನ್ಸ್‌ಟೇಬಲ್ ಆಗಿರುವ ಉಮೇಶ್ ಎಂಬುವವರ ಸ್ಕೂಟರ್ ಕಳ್ಳತನವಾಗಿದ್ದು, ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

author img

By

Published : Mar 9, 2022, 8:59 AM IST

scooter theft cctv footage
ಕಾನ್ಸ್‌ಟೇಬಲ್ ಸ್ಕೂಟರ್‌ ಕಳ್ಳತನ-ಸಿಸಿಟಿವಿ ದೃಶ್ಯಾವಳಿ

ಬೆಂಗಳೂರು: ಬ್ಯಾಂಕ್​​ಗೆ ಹೋಗಿ ಬರುವಷ್ಟರಲ್ಲಿ ಕಳ್ಳನೊಬ್ಬ ಪೊಲೀಸ್ ಹೆಡ್ ಕಾನ್ಸ್​​‌ಟೇಬಲ್ ಅವರ ಸ್ಕೂಟರ್​​ ಕದ್ದು ಪರಾರಿಯಾಗಿರುವ ಘಟನೆ ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ನಡೆದಿದೆ.

ಕೆಎಸ್​​ಆರ್​ಪಿ 4ನೇ ಬೇಟಾಲಿಯನ್ ಹೆಡ್ ಕಾನ್ಸ್‌ಟೇಬಲ್ ಆಗಿರುವ ಉಮೇಶ್ ಎಂಬುವವರ ಸ್ಕೂಟರ್ ಕಳ್ಳತನವಾಗಿದೆ. ಫೆಬ್ರವರಿ 9ರಂದು ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿಯ ಖಾಸಗಿ ಬ್ಯಾಕ್ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿದ್ದ ಉಮೇಶ್ ಬ್ಯಾಂಕ್​​ನೊಳಗೆ ತೆರಳಿದ್ದರು.

ಕೆಲಸ ಮುಗಿಸಿ ಬರುವಷ್ಟರಲ್ಲಿ ಖದೀಮನೊಬ್ಬ ಸ್ಕೂಟರ್ ಕದ್ದು ಪರಾರಿಯಾಗಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಮೇಶ್ ನೀಡಿದ ದೂರಿನ ಅನ್ವಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಂಚ ಕೇಳಿದ ಆರೋಪ: ಆರ್‌ಪಿಎಫ್ ಇನ್ಸ್​​ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಸಿಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.