ಬೆಂಗಳೂರು: ರಾಜಧಾನಿಯ ಪ್ರಥಮ ಟ್ರಾಫಿಕ್ ಸಿಗ್ನಲ್ ಬಳಕೆಯ ಸವಿ ನೆನಪನ್ನು ಪೊಲೀಸ್ ಇಲಾಖೆ ಮೆಲಕು ಹಾಕಿತು. ಟ್ರಾಫಿಕ್ ದಟ್ಟಣೆ ತಪ್ಪಿಸಲು 58 ವರ್ಷಗಳ ಬಳಿಕ ಪ್ರಪ್ರಥಮ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ನಿರ್ಮಿಸಿದ ಸವಿನೆನಪಿನ ಕಾರ್ಯಕ್ರಮವನ್ನು ಅಂದಿನ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಜೊತೆ ಪೊಲೀಸ್ ಇಲಾಖೆ ಸಂಭ್ರಮಾಚರಣೆ ಆಚರಿಸಿತು.
1963ರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್ ಬಳಕೆ ಮಾಡಲಾಗಿತ್ತು. ಎನ್ ಆರ್ ರಸ್ತೆಯಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್ ಬಳಸಲಾಗಿತ್ತು. ಈ ಸವಿನೆನಪಿಗಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂದಿನ ಪೊಲೀಸ್ ಕಮಿಷನರ್ ಚಾಂಡೈ ಮತ್ತು ಸಂಚಾರ ಡಿಸಿಪಿಯಾಗಿದ್ದ ಗರುಡಚಾರ್ ಪಾಲ್ಗೊಂಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎನ್ ಆರ್ ರಸ್ತೆಯಲ್ಲಿ ಸೊಗಸಾದ ಸವಿನೆನಪಿನ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ಪ್ರಕರಣ, ಎಸ್.ಐ.ಟಿ ತನಿಖೆ ಹಾಗು ಯುವತಿಯನ್ನು ಗೌಪ್ಯ ಸ್ಥಳದಲ್ಲಿಟ್ಟು ತನಿಖೆ ನಡೆಸಿರುವುದರ ಬಗ್ಗೆ ಮಾಧ್ಯಮದವರ ಪ್ರೆಶ್ನೆಗಳಿಗೆ ಉತ್ತರಿಸುತ್ತಾ ತನಿಖೆ ನಡೆಯುತ್ತಿದೆ ಸೂಕ್ತ ಸಮಯದಲ್ಲಿ ನಿಮಗೆ ಎಲ್ಲಾ ಗೊತ್ತಾಗುತ್ತೆ, ಇದನ್ನು ಬಿಟ್ಟು ಏನೂ ಹೇಳಲು ಸಾಧ್ಯವಿಲ್ಲ ಎಂದು ತನಿಖೆಯ ಗುಟ್ಟನ್ನು ಬಿಟ್ಟುಕೊಡದೆ ಕಮಿಷನರ್ ಕಮಲ್ ಪಂತ್ ಕಾರ್ಯಕ್ರಮದಿಂದ ಹೊರನೆಡೆದರು.
ಇದನ್ನು ಓದಿ:ಕೋವಿಡ್ 2ನೇ ಅಲೆ ಭೀತಿ: ಅಧಿವೇಶನದಲ್ಲಿ ಜನನಾಯಕರ ಡೋಂಟ್ ಕೇರ್, ಮಾಸ್ಕ್, ಸಾಮಾಜಿಕ ಅಂತರ ಮಾಯ!