ETV Bharat / state

Opposition parties meeting: ವಿಪಕ್ಷಗಳ ಸಭೆಯಲ್ಲಿ ಮಹಾಮೈತ್ರಿ ನಾಮಕರಣಕ್ಕೆ ನಾಲ್ಕು ಹೆಸರುಗಳ ಪ್ರಸ್ತಾವನೆ

ಕಾಂಗ್ರೆಸ್​ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ವಿಪಕ್ಷಗಳ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಆರು ಪ್ರಮುಖ ಅಂಶಗಳ ಮೇಲೆ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಜೊತೆಗೆ ಮಹಾಮೈತ್ರಿಗೆ ಮರು ನಾಮಕರಣ ಮಾಡಲು ಸಭೆಯಲ್ಲಿ ನಿರ್ಧರಿಸಲಾಗುತ್ತಿದೆ.

opposition-leaders-meeting-four-names-proposed-for-alliance-in-the-meeting
ವಿಪಕ್ಷಗಳ ಮಹಾಮೈತ್ರಿ ಸಭೆ: ಸಭೆಯಲ್ಲಿ ಮಹಾಮೈತ್ರಿ ನಾಮಕರಣಕ್ಕೆ ನಾಲ್ಕು ಹೆಸರುಗಳ ಪ್ರಸ್ತಾವನೆ
author img

By

Published : Jul 18, 2023, 1:53 PM IST

ಬೆಂಗಳೂರು : ಕಾಂಗ್ರೆಸ್ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಷ್ಟ್ರೀಯ ವಿಪಕ್ಷಗಳ ಎರಡನೇ ‌ಮಹಾಘಟಬಂಧನ ಸಭೆ ನಡೆಯುತ್ತಿದೆ. 25 ಪಕ್ಷಗಳ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಮಹಾಮೈತ್ರಿ ಸಭೆ ಆರಂಭವಾಗಿದೆ. ಆರು ಪ್ರಮುಖ ಅಂಶಗಳ ಮೇಲೆ ಸಭೆಯಲ್ಲಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಸಭೆ ಮಹತ್ವದ್ದಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಂಜಾಬ್ ಸಿಎಂ ಭಗವಂತ್ ಮಾನ್, ಎನ್ ಸಿಪಿ ವರಿಷ್ಠ ಶರದ್ ಪವಾರ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಲಾಲೂ ಪ್ರಸಾದ್ ಯಾದವ್, ಫಾರೂಕ್ ಅಬ್ದುಲ್ಲಾ, ಅಖಿಲೇಶ್ ಯಾದವ್, ಸೀತಾರಾಮ್ ಯೆಚೂರಿ, ಓಮರ್ ಅಬ್ದುಲ್ಲಾ, ಡಿ. ರಾಜ, ವೈಕೋ, ಉದ್ದವ್ ಠಾಕ್ರೆ, ಮೆಹಬೂಬಾ ಮುಫ್ತಿ ಸೇರಿದಂತೆ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಸಭೆಯಲ್ಲಿ ನಾಲ್ಕು ಹೆಸರುಗಳ ಬಗ್ಗೆ ಚರ್ಚೆ: ಮಹಾ ಮೈತ್ರಿಗೆ ಹೊಸ ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ನಾಲ್ಕು ಹೆಸರುಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆಯಾಗಿದೆ. ಇಂದಿನ ಸಭೆಯಲ್ಲಿ ಒಂದು ನೂತನ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಮಹಾಮೈತ್ರಿಗೆ ಪ್ರೊಗ್ರೆಸಿವ್ ಡೆಮಾಕ್ರೆಟಿಕ್ ಅಲಯನ್ಸ್ (ಪಿಡಿಎ), ಯುಪಿಎ 3, ನ್ಯಾಷನಲ್ ಪ್ರೊಗ್ರೆಸಿವ್ ಅಲಯನ್ಸ್ (ಎನ್​ಪಿಎ) ಮತ್ತು ಇಂಡಿಯಾ ಪ್ರೊಗ್ರೆಸಿವ್ ಅಲಯನ್ಸ್ ಎಂಬ ನಾಲ್ಕು ಹೆಸರುಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ.

ಆರು ಅಂಶಗಳ ಬಗ್ಗೆ ಚರ್ಚೆ: ಸಭೆಯಲ್ಲಿ ಆರು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ರೂಪಿಸಲು ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ವಿಪಕ್ಷ ಮೈತ್ರಿಕೂಟಗಳ ಸೇತುವೆಯಾಗಿದ್ದು, ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನ ನಡೆಸುವ ಕೆಲಸ ಮಾಡಲಿದೆ.

ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಆಯೋಜನೆ ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ದೇಶಾದ್ಯಂತ ಎಲ್ಲಿ ಬೃಹತ್ ರ್ಯಾಲಿಗಳ ಆಯೋಜನೆ, ಎಲ್ಲಿ ಸಮಾವೇಶ ಮಾಡಬೇಕು, ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿ ಜನಾಂದೋಲನ ಮಾಡಬೇಕು, ಈ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಈ ಸಮಿತಿ ನಿರ್ವಹಣೆ ಮಾಡಲಿದೆ.

ವಿಪಕ್ಷಗಳ ಒಕ್ಕೂಟಗಳ ನಡುವೆ ಸೀಟು ಹಂಚಿಕೆ ಬಗ್ಗೆ ಗಂಭೀರ ಮಾತುಕತೆ ನಡೆಯಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಪ್ರಬಲವಾಗಿ ಇದೆಯೋ ಆ ಪಕ್ಷಕ್ಕೆ ಹೆಚ್ಚಿನ ಮನ್ನಣೆ ಸಿಗಬೇಕು. ಈ ಸಂದರ್ಭದಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ನಾಯಕರು ವಿವರಣೆ ನೀಡಲಿದ್ದಾರೆ.

EVM ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಚುನಾವಣಾ ಆಯೋಗಕ್ಕೆ ಒಂದಷ್ಟು ಸಲಹೆಗಳನ್ನು ನೀಡಲಾಗುವುದು. ವಿಪಕ್ಷಗಳ ಮೈತ್ರಿಕೂಟಕ್ಕೆ ಇಡಬೇಕಾದ ಹೆಸರಿನ ಬಗ್ಗೆ ಮಾತುಕತೆ ನಡೆಯಲಿದೆ. ಎಲ್ಲರಿಗೂ ಒಮ್ಮತ ಮೂಡುವ ಹೆಸರನ್ನು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಬಳಿಕ ಮೈತ್ರಿಕೂಟ ಮುನ್ನಡೆಸಲು ಸಂಚಾಲಕರನ್ನು ನೇಮಕ‌ ಮಾಡಲಾಗುವುದು. ಈ ಆರು ಪ್ರಮುಖ ವಿಚಾರಗಳು ಚರ್ಚೆ ಆಗಲಿವೆ ಎಂದು ಮೂಲಗಳ ಮಾಹಿತಿ ನೀಡಿದೆ.

ಸಂಜೆ 4 ಗಂಟೆಗೆ ಮಾಧ್ಯಮಗೋಷ್ಟಿ ಆಯೋಜನೆ ಮಾಡಲಾಗಿದೆ. ಮೈತ್ರಿಕೂಟದ ಪ್ರಮುಖ ನಾಯಕರಿಂದ ಮಾಧ್ಯಮಗೋಷ್ಟಿ ನಡೆಯಲಿದೆ. ಈ ವೇಳೆ ಮೈತ್ರಿಕೂಟದ ಸಭೆಯ ನಿರ್ಣಯಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ : ಮಹಾಘಟಬಂಧನ್ ಸಭೆ: ಹೋಟೆಲ್ ಸುತ್ತ ರಾರಾಜಿಸುತ್ತಿವೆ ರಾಷ್ಟ್ರೀಯ ನಾಯಕರ ಪೋಸ್ಟರ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.