ETV Bharat / state

ವಿಧಾನ ಪರಿಷತ್​ನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚೆ: ಕಾಂಗ್ರೆಸ್ ವಿರೋಧ - ಒಂದು ರಾಷ್ಟ್ರ, ಒಂದು ಚುನಾವಣೆ

ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರವಾಗಿ ವಿಧಾನ ಪರಿಷತ್​ನಲ್ಲಿ ಪರ ವಿರೋಧ ಸುದೀರ್ಘ ಚರ್ಚೆಯಾದ ಬಳಿಕ ಸಭಾಪತಿಗಳು ಕಾಂಗ್ರೆಸ್ ಮಾತಿಗೆ ಬೆಲೆ ಕೊಡದಿದ್ದಾಗ ಪ್ರತಿಪಕ್ಷ ಸದಸ್ಯರು ಬಾವಿಗಿಳಿದು ಧಿಕ್ಕಾರ ‌ಕೂಗಲು ಮುಂದಾದರು.

parishad
parishad
author img

By

Published : Mar 4, 2021, 5:35 PM IST

ಬೆಂಗಳೂರು: ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರ ವಿಧಾನ ಪರಿಷತ್​ನಲ್ಲಿ ದೊಡ್ಡ ಗದ್ದಲದ ವಾತಾವರಣ ನಿರ್ಮಿಸಿತು. ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಭೋಜನ ವಿರಾಮದ ಬಳಿಕ ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವನ್ನು ಕೈಗೆತ್ತಿಕೊಂಡರು. ಆದರೆ ಇದಕ್ಕೆ ಪ್ರತಿಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು.

ಆಡಳಿತ ಪಕ್ಷದ ಪರವಾಗಿ ಹಿರಿಯ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಇಂತಹ ಮಹತ್ವದ ವಿಚಾರ ಚರ್ಚೆ ಆಗಬೇಕು ಎಂದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಸೇರಿದಂತೆ ಕಾಂಗ್ರೆಸ್​ನ ಎಲ್ಲಾ ಸದಸ್ಯರು ಈ ವಿಚಾರದ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು. ಪರ-ವಿರೋಧವಾಗಿ ಸಾಕಷ್ಟು ಚರ್ಚೆ ನಡೆದವು.

ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಚರ್ಚೆ ನಿರ್ಧಾರವಲ್ಲ. ಹೊಸ ವಿಚಾರ, ಚರ್ಚೆ ಬಂದಾಗ ಪರ ವಿರೋಧ ಚರ್ಚೆ ಸಾಧ್ಯ. ಆದರೆ ಚರ್ಚೆ ಮಾಡೋಣ, ಅಭಿಪ್ರಾಯ ವ್ಯಕ್ತವಾಗಲಿ. ಚರ್ಚೆ ಮೂಲಕ ಅಭಿಪ್ರಾಯ ಹೇಳೋಣ, ನಿರ್ಧಾರ ಇಲ್ಲಾಗುವುದಲ್ಲ. ಹೊಸ ವಿಚಾರದ ಬಗ್ಗೆ ವಿವಿಧ ಮಾಹಿತಿ ಹೊರ ಬೀಳಲಿ ಎಂದರು.

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಒಂದು ರಾಷ್ಟ್ರ, ಒಂದು ಚುನಾವಣೆ ನಡೆಸುವುದು ಸುಲಭ ಅಲ್ಲ. 1952 ರಿಂದ 1967ರವರೆಗೂ ಈ ವ್ಯವಸ್ಥೆ ಇತ್ತು. ಒಂದು ದೇಶ, ಒಂದು ಚುನಾವಣೆಗೆ ರಾಜ್ಯಗಳ ಬೆಂಬಲ ಇಲ್ಲ. ಅನಗತ್ಯ ಸಮಯ ವ್ಯರ್ಥ ಬೇಡ ಎಂದು ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇಂದಿನ ಅಜೆಂಡಾ ಮೂಲಕ ಎಲ್ಲಾ ಚರ್ಚೆ ಮುಗಿದಿದೆ. ಇದರಿಂದ ಅನಗತ್ಯವಾಗಿ ಕಲಾಪ ಮುಂದೂಡುವ ಬದಲು ಈ ವಿಷಯದ ಚರ್ಚೆ ಆಗಲಿ. ನಾಳೆ ಬಿಎಸಿ ಸಭೆ ನಡೆಸಿ ಮುಂದುವರಿಸಬೇಕೋ ಬೇಡವೋ ಎಂಬ ತೀರ್ಮಾನ ಮಾಡೋಣ ಎಂದರು.

ನಮಗೆ ಸಂಬಂಧಿಸದ ವಿಚಾರ ಪ್ರಸ್ತಾಪ, ಚರ್ಚೆ ಅನಗತ್ಯ. ಇದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಹೇಳಿದರು.

ಪರ ವಿರೋಧ ಸುದೀರ್ಘ ಚರ್ಚೆಯಾದ ಬಳಿಕ ಸಭಾಪತಿಗಳು ಕಾಂಗ್ರೆಸ್ ಮಾತಿಗೆ ಬೆಲೆ ಕೊಡದಿದ್ದಾಗ ಪ್ರತಿಪಕ್ಷ ಸದಸ್ಯರು ಬಾವಿಗಿಳಿದು ಧಿಕ್ಕಾರ ‌ಕೂಗಲು ಮುಂದಾದರು.

ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮೂರು ಪಕ್ಷದ ಸಚೇತಕರು, ಸಭಾನಾಯಕರು, ಪ್ರತಿಪಕ್ಷ ನಾಯಕರ ಜತೆ ಚರ್ಚಿಸುವ ಸಲುವಾಗಿ ಕಲಾಪವನ್ನು ಐದು ನಿಮಿಷ ಮುಂದೂಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.