ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಿಗೆ ರಾತ್ರೋರಾತ್ರಿ ಡಾಂಬರೀಕರಣ ಮಾಡಿರುವುದು ಬೆಳಕಿಗೆ ಬಂದಿದೆ. ಬಿಬಿಎಂಪಿ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದ್ದರೂ ಗುಂಡಿ ಮುಚ್ಚಿರಲಿಲ್ಲ, ಆದರೀಗ ಮೋದಿ ಬರುತ್ತಾರೆಂದು ಎಲ್ಲ ಗುಂಡಿ ಮುಚ್ಚಲಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೋದಿ ಓಡಾಡುವ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಏರ್ಪೋರ್ಟ್ನಿಂದ ಭಾರತೀಯ ವಿಜ್ಞಾನ ಸಂಸ್ಥೆಯ ವರೆಗೂ ರಸ್ತೆ ಪೂರ್ತಿ ದುರಸ್ತಿ ಮಾಡಲಾಗಿದೆ. ರಾಜ್ಯ ಸರ್ಕಾರದ ಮುತುವರ್ಜಿಯಿಂದ ರೋಡ್ ಗುಂಡಿ ಮುಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಮೋದಿ, ಜೂನ್ 21ರಂದು ಮೈಸೂರಿಗೆ ತೆರಳಲಿದ್ದಾರೆ. ಮೈಸೂರಿನ ಅರಮನೆ ಆವರಣದಲ್ಲಿ ನಡೆಯುಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಪ್ರವಾಸದ ವೇಳೆ ಸಾರ್ವಜನಿಕ ಸಭೆಗಳಲ್ಲೂ ಕೂಡ ಪ್ರಧಾನಿ ಭಾಗಿಯಾಗುವರು.
ಇದನ್ನೂ ಓದಿ: ಅಗ್ನಿವೀರರ ಸಂಖ್ಯೆ ಮುಂದೆ 1 ಲಕ್ಷಕ್ಕೆ ಹೆಚ್ಚಳ, ಸೇನೆಗೆ ಹೋಶ್, ಜೋಶ್ ಬೇಕಿದೆ: ಸೇನಾ ಮುಖ್ಯಸ್ಥರು