ETV Bharat / state

ನಾನು ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ, ಅಜೀರ್ಣ ಮಾತ್ರೆ ಬದಲು ನಿದ್ದೆ ಮಾತ್ರೆ ಸೇವಿಸಿದ್ದೆ.. ಎನ್ ಆರ್‌ ಸಂತೋಷ್ - NR Santosh Discharged from Ramaiah Hospital

ಪ್ರತಿ ಬಾರಿ ಅರ್ಧ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ಆದರೆ, ಅಂದು ಒಂದು ಮಾತ್ರೆ ನುಂಗಿದ್ದೆ. ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆ ಅಷ್ಟೇ..

ಎನ್.ಆರ್​.ಸಂತೋಷ್
ಎನ್.ಆರ್​.ಸಂತೋಷ್
author img

By

Published : Nov 30, 2020, 1:13 PM IST

Updated : Nov 30, 2020, 1:45 PM IST

ಬೆಂಗಳೂರು: ಊಟದಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಅಜೀರ್ಣ ಉಂಟಾಗಿತ್ತು. ಆಗ ನಾನು ಯಾವುದನ್ನು ತಗೆದುಕೊಳ್ಳ ಬೇಕೋ ಆ ಮಾತ್ರ ಬಿಟ್ಟು ಬೇರೆ ತೆಗೆದುಕೊಂಡಿದ್ದೆ. ಆಗ ಡೋಸ್​ ಹೆಚ್ಚಾದ ಕಾರಣ ಸ್ವಲ್ಪ ನಿತ್ರಾಣವಾಗಿತ್ತು. ಅದನ್ನು ನೋಡಿದ ನನ್ನ ಪತ್ನಿ ಸ್ವಲ್ಪ ಗಾಬರಿಯಾದರು. ಆಮೇಲೆ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆ ಅಷ್ಟೆ. ಉದ್ದೇಶ ಪೂರ್ವಕವಾದದ್ದಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​. ಸಂತೋಷ್ ತಿಳಿಸಿದರು.

ನಾನು ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ..

ರಾಜಕೀಯ ಒತ್ತಡ ಯಾವಾಗಲೂ ಇರುತ್ತದೆ. ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ. ಸಾಧಾರಣವಾಗಿ ನನಗೆ ನಿದ್ರೆ ಬಾರದಿದ್ದಾಗ ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸ ಇದೆ. ನಾನು ಪ್ರತಿಬಾರಿ ಅರ್ಧ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ಆದರೆ ಮೊನ್ನೆ ಒಂದು ಮಾತ್ರೆ ಸೇವಿಸಿದೆ. ಡೋಸ್​ ಹೆಚ್ಚಾದ ಕಾರಣ ಸ್ವಲ್ಪ ನಿತ್ರಾಣವಾಗಿತ್ತು ಎಂದು ಹೇಳಿದರು.

ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಗೆ ಒತ್ತಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಒತ್ತಡ ಯಾರಿಗೆ ಇತ್ತು ಎಂದು ನನಗೆ ಗೊತ್ತಿಲ್ಲ. ನನಗೆ ಯಾವ ಒತ್ತಡನೂ ಇರಲಿಲ್ಲ. ನನಗೆ ಯಾರೂ ರಾಜೀನಾಮೆಯನ್ನು ಕೇಳಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು.

ನಾನು ಡಿ ಕೆ ಶಿವಕುಮಾರ್​ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಅವರು ಹೀಗೆ ಮಾತನಾಡುತ್ತಿರುವುದು ಮೊದಲನೇ ಬಾರಿಯಲ್ಲ. ಈ ಹಿಂದೆ ಅವರ ಮನೆ ಮೇಲೆ ರೇಡ್​ ಆದಾಗಲೂ ಹೀಗೆ ಮಾತನಾಡಿದ್ದರು. ಹೀಗೆ ಮಾತನಾಡುವುದು ಅವರಿಗೆ ಸ್ವಭಾವ ಆಗಿ ಹೋಗಿದೆ. ಮೊನ್ನೆ ನಡೆದ ಎರಡೂ ವಿಧಾನಸಭಾ ಉಪಚುನಾವಣೆಗಳಲ್ಲಿ ಅವರ ಪಕ್ಷ ಸೋತಿದೆ. ಅದರಲ್ಲೂ ಆರ್​.ಆರ್​.ನಗರದ ಸೋಲಿನಿಂದ ಅವರಿಗೆ ಮತಿಭ್ರಮಣೆಯಾಗಿರಬೇಕು. ರಾಜಕೀಯದಲ್ಲಿ ಹಲವು ಘಟ್ಟಗಳಲ್ಲಿ ಬೆಳೆಯುತ್ತ ಬಂದ ಶಿವಕುಮಾರ್​ ಅವರು ಸ್ವಲ್ಪ ಸಿದ್ದರಾಮಯ್ಯ ಅವರನ್ನು ನೋಡಿ ಹೇಳಿಕೆ ಕೊಡುವುದನ್ನು ಕಲಿಯ ಬೇಕು ಎಂದು ಡಿಕೆಶಿಗೆ ಟಾಂಗ್​ ನೀಡಿದರು.

Last Updated : Nov 30, 2020, 1:45 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.