ETV Bharat / state

ಅಣ್ಣಾಮಲೈ ಸಂಚರಿಸಿದ ಹೆಲಿಕಾಪ್ಟರ್​ನಲ್ಲಿ ನಗದು ಸಾಗಾಟ ಮಾಡಿಲ್ಲ: ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ

ಅಣ್ಣಾಮಲೈ ಸಂಚರಿಸಿದ ಹೆಲಿಕಾಪ್ಟರ್ ಹಣ ಸಾಗಾಟ ಆರೋಪ ಕುರಿತು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿದರು. ಅವರು ಸಂಚರಿಸಿದ ಹೆಲಿಕಾಪ್ಟರ್​ನಲ್ಲಿ ಯಾವುದೇ ಹಣ ಸಾಗಾಟವಾಗಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

Annamalai
ಅಣ್ಣಾಮಲೈ
author img

By

Published : Apr 19, 2023, 7:44 PM IST

ಬೆಂಗಳೂರು: ಅಣ್ಣಾಮಲೈ ಸಂಚರಿಸಿದ ಹೆಲಿಕಾಪ್ಟರ್ ನಗದು ಹಣ ಸಾಗಣೆ ಆರೋಪ ಸಂಬಂಧ ಸ್ಪಷ್ಟೀಕರಣ ನೀಡಿರುವ ಮುಖ್ಯ ಚುನಾವಣಾಧಿಕಾರಿ, ಯಾವುದೇ ಹಣ ಸಾಗಾಟವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನ ವಿನಯ್ ಕುಮಾರ್ ಸೊರಕೆ ಆರೋಪ: ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಉಡುಪಿಗೆ ಬರಲು ತಾವು ಬಳಸಿದ ಹೆಲಿಕಾಪ್ಟರ್​ನಲ್ಲಿ ನಗದು ಹಣ ತೆಗೆದುಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದರು. ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬಿಜೆಪಿ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ಅವರು ಹೆಲಿಕಾಪ್ಟರ್ ಮೂಲಕ ಗಂಟು ತಂದಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಉಡುಪಿ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ನೀತಿ ಸಂಹಿತೆಯ ಪ್ರಕಾರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಡುಪಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರತಿ ಹಂತದಲ್ಲಿ ಸೂಕ್ತ ತಪಾಸಣೆ ನಡೆಸಲಾಗಿದೆ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದೆ.

ಸಂಚಾರಿ ಪರಿವೀಕ್ಷಣಾ ತಂಡದಿಂದ ಪರಿಶೀಲನೆ: ಹೆಲಿಕಾಪ್ಟರ್ ಮೂಲಕ ಏ.17ರ ಬೆಳಿಗ್ಗೆ 9.55ಕ್ಕೆ ಉಡುಪಿಗೆ ಆಗಮಿಸಿದ್ದನ್ನು ಸಂಚಾರಿ ಪರಿವೀಕ್ಷಣಾ ತಂಡ ( ಫ್ಲೈಯಿಂಗ್ ಸ್ಕ್ವಾಡ್ ತಂಡ) ತಪಾಸಣೆ ಹಾಗೂ ಪರಿಶೀಲನೆ ನಡೆಸಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ವರದಿ ಮಾಡಲಾಗಿದೆ. ಹೆಲಿಪ್ಯಾಡ್​ನಿಂದ ಉಡುಪಿಯ ಓಷನ್ ಪರ್ಲ್ ಹೋಟೆಲ್​ಗೆ ಬಂದ ವಾಹನವನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ ಜಿಎಸ್ ಟಿ ತಂಡ ಜಂಟಿಯಾಗಿ ತಪಾಸಣೆ ಮತ್ತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಒಂದು ಬ್ಯಾಗ್ ನಲ್ಲಿ ಎರಡು ಜೊತೆ ಬಟ್ಟೆ ಹಾಗೂ ಕುಡಿಯುವ ನೀರಿನ ಬಾಟಲ್ ದೊರೆತಿದ್ದು, ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ತಂಡಗಳು ವರದಿ ಮಾಡಿದೆ ಎಂದಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ: ನಂತರ ಅದೇ ವಾಹನ 121-ಕಾಪು ವಿಧಾನಸಭಾ ಕ್ಷೇತ್ರಕ್ಕೆ ತೆರಳುವ ಮಾರ್ಗ ಮಧ್ಯೆ ಉದ್ಯಾವರ ಚೆಕ್ ಪೋಸ್ಟ್ ಬಳಿ ಸ್ಥಿರ ಕಣ್ಗಾವಲು ತಂಡ, ವಾಹನವನ್ನು ತಪಾಸಣೆ ಮತ್ತು ಪರಿಶೀಲನೆ ನಡೆಸಿ, ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲವೆಂದು ವರದಿ ಸಲ್ಲಿಸಿದೆ. ನಂತರ ಅಣ್ಣಾಮಲೈ ಅವರು ಕಾಪು ಕ್ರೀಡಾಂಗಣದಲ್ಲಿ ಭಾಜಪದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರು ಕಾರ್ಯಕ್ರಮಕ್ಕೆ ತೆರಳಲು ಬಳಸಿದ ವಾಹನವನ್ನು ಅಬ್ದುಲ್ ರಜಾಕ್ ಬಿ.ಎಂ.ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ತಂಡ ತಪಾಸಣೆ ನಡೆಸಿತು. ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ವರದಿ ನೀಡಿದೆ ಎಂದಿದ್ದಾರೆ.

ಮಧ್ಯಾಹ್ನ 2ಗಂಟೆಗೆ ಅವರು ಉಡುಪಿಯ ಕಡ್ಯಾಳಿಯಲ್ಲಿರುವ ಓಷನ್ ಪರ್ಲ್ ಹೋಟೆಲ್​ಗೆ ಮರಳಿ ಬಂದ ಸಂದರ್ಭದಲ್ಲಿ, ಹೋಟೆಲ್​ನ ಕೊಠಡಿ, ಲಗೇಜ್ ಗಳನ್ನು ತಪಾಸಣಾ ತಂಡವು ತಪಾಸಣೆ ನಡೆಸಿ, ನೀತಿಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ವರದಿ ಮಾಡಿದೆ. ನಂತರ ಅವರು ಹೋಟೆಲ್ ನಿಂದ ನಿರ್ಗಮಿಸಿ , ಅದೇ ವಾಹನದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ತೆರಳಿದರು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭಾ 2023ರ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನದ ಭಾಗವಾಗಿ ಉಡುಪಿ ವಿಧಾನಸಭಾ ಕ್ಷೇತ್ರ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆಯ ನೋಡೆಲ್ ಆಫೀಸರ್, ಅಣ್ಣಾಮಲೈ ಅವರ ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಪ್ರವಾಸದ ಸಂದರ್ಭದಲ್ಲಿ ಯಾವುದೇ ರೀತಿಯ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ವರದಿ ನೀಡಿದ್ದಾರೆ. ಹೀಗಾಗಿ ಆರೋಪ ಕುರಿತ ಮಾಧ್ಯಮ ವರದಿ ತಪ್ಪು ಎಂದು ಸ್ಪಷ್ಟೀಕರಣ ನೀಡಿದೆ.

ಇದನ್ನೂ ಓದಿ: ಸ್ವರೂಪ್‌ ನನ್ನ ಮಗನಿದ್ದಂತೆ, ನಾನೇ ಕುಮಾರಸ್ವಾಮಿಯವರಿಗೆ ಹೇಳಿ ಟಿಕೆಟ್‌ ಕೊಡಿಸಿದೆ: ಭವಾನಿ ರೇವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.