ETV Bharat / state

ಅಮಾವಾಸ್ಯೆ ದಿನಕ್ಕಾಗಿ ಕಾದು ಜ್ಯುವೆಲ್ಲರಿ ಶಾಪ್​​ಗೆ ಕನ್ನ: ರಾಜಸ್ಥಾನದ ಖತರ್ನಾಕ್​​​ ಗ್ಯಾಂಗ್ ಅಂದರ್​ - ಜ್ಯುವೆಲ್ಲರಿ ಶಾಪ್​​ ಕಳ್ಳತನ

ನಗರ್ತ ಪೇಟೆಯಲ್ಲಿ ಗಣೇಶ್ ಪವಾರ್ ಎಂಬುವರು ಕಳೆದ ಐದು ವರ್ಷಗಳಿಂದ ಚಿನ್ನದ ಅಂಗಡಿ‌ ಇಟ್ಟುಕೊಂಡಿದ್ದರು. ಅಂಗಡಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿ ಕೆಲಸ‌ ಮಾಡುತ್ತಿದ್ದರು‌. ಕಳೆದ ಅಕ್ಟೊಂಬರ್ 10 ರಂದು ಎಂದಿನಂತೆ ಕೆಲಸ ಮುಗಿಸಿ ಶಾಪ್​​ಗೆ ಬೀಗ ಹಾಕಿ ಹೋಗಿದ್ದರು.

ರಾಜಸ್ಥಾನದ ಖತರ್ನಾಕ್​​​ ಗ್ಯಾಂಗ್ ಅಂದರ್​
ರಾಜಸ್ಥಾನದ ಖತರ್ನಾಕ್​​​ ಗ್ಯಾಂಗ್ ಅಂದರ್​
author img

By

Published : Dec 13, 2021, 4:01 PM IST

ಬೆಂಗಳೂರು: ಇತ್ತೀಚೆಗೆ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಿನ್ನದಂಗಡಿಗಳಲ್ಲಿ ಕಳ್ಳತನ‌ ಹೆಚ್ಚಾಗುತ್ತಿವೆ. ರಾತ್ರೋ ರಾತ್ರಿ ಅಂಗಡಿ ಬೀಗ ಮುರಿದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುವ ಪ್ರವೃತ್ತಿ ಅಧಿಕವಾಗುತ್ತಿವೆ.

ಚಿನ್ನದ ವ್ಯಾಪಾರ ನಡೆಸುತ್ತಿದ್ದ ಗಣೇಶ್ ಎಂಬುವರ ಅಂಗಡಿಯಲ್ಲಿ ಚಿನ್ನ ಕದಿಯಲು ರಾಜಸ್ಥಾನ ಮೂಲದ ಖದೀಮರಿಗೆ ಸುಪಾರಿ ನೀಡಿದ್ದ, ಪ್ರಮುಖ ಆರೋಪಿ ಸೇರಿದಂತೆ 9 ಮಂದಿ ಚೋರರನ್ನು ಹಲಸೂರು ಗೇಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸುನಿಲ್‌ ಮಾಲಿ, ರಾಜೇಂದ್ರ ತಿಂಗಲ್, ಧೀರಜ್, ದಿನೇಶ್, ದೇವರಾಮ್ ಸೇರಿದಂತೆ‌ 9‌ ಆರೋಪಿಗಳನ್ನು ಬಂಧಿಸಿ 24 ಲಕ್ಷ ಮೌಲ್ಯದ ಚಿನ್ನದ ಗಟ್ಟಿ 1 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ.

ನಗರ್ತ ಪೇಟೆಯಲ್ಲಿ ಗಣೇಶ್ ಪವಾರ್ ಎಂಬುವರು ಕಳೆದ ಐದು ವರ್ಷಗಳಿಂದ ಚಿನ್ನದ ಅಂಗಡಿ‌ ಇಟ್ಟುಕೊಂಡಿದ್ದರು. ಅಂಗಡಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿ ಕೆಲಸ‌ ಮಾಡುತ್ತಿದ್ದರು‌. ಕಳೆದ ಅಕ್ಟೊಂಬರ್ 10 ರಂದು ಎಂದಿನಂತೆ ಕೆಲಸ ಮುಗಿಸಿ ಶಾಪ್​​ಗೆ ಬೀಗ ಹಾಕಿ ಹೋಗಿದ್ದರು.

ಮಾರನೇ ದಿನ ಅಂಗಡಿ ತೆರೆಯಲು ಬಂದಾಗ ಅಂಗಡಿಯಲ್ಲಿ ಇಟ್ಟಿದ್ದ 790 ಗ್ರಾಂ ಚಿನ್ನ, 7.55 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು. ಗ್ಯಾಸ್ ಕಟ್ಟರ್ ಬಳಸಿ ಬೀಗ ಒಡೆದು ಖದೀಮರು ಕಳ್ಳತನ ಮಾಡಿದ್ದರು. ಈ ಸಂಬಂಧ‌ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಕಾಟನ್​ ಪೇಟೆಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ ಆರೋಪಿ

ಆರೋಪಿಗಳ ಪೈಕಿ ಸುನಿಲ್ ಮಾಲಿ‌ ಕಾಟನ್‌ ಪೇಟೆಯಲ್ಲಿ ಚಿನ್ನದ ಅಂಗಡಿ ಇಟ್ಟಿಕೊಂಡಿದ್ದಾನೆ. ಮತ್ತೋರ್ವ ಆರೋಪಿ ಸಿಸಿಬಿ ಪೊಲೀಸರಿಗೆ ಭಾತ್ಮೀದಾರನಂತೆ‌ ಓಡಾಡಿಕೊಂಡಿದ್ದ. ನಗರ್ತಪೇಟೆಯಲ್ಲಿ ಅಂಗಡಿ ಇಟ್ಟಿಕೊಂಡಿದ್ದ ಗಣೇಶ್ ಪವಾರ್ ವ್ಯವಹಾರ ತಿಳಿದುಕೊಂಡಿದ್ದರು‌.

ಪ್ರತಿ ದಿನ ದೂರದಿಂದಲೇ ವ್ಯವಹಾರ ಹಾಗೂ ಚಲನವಲನದ ಬಗ್ಗೆ ನಿಗಾ ವಹಿಸುತ್ತಿದ್ದರು. ದರೋಡೆ ಮಾಡಬೇಕೆಂದು ಸ್ಕೆಚ್ ಹಾಕಿದ್ದ ಆರೋಪಿಗಳು, ರಾಜಸ್ಥಾನದಲ್ಲಿದ್ದ ತಮ್ಮ ಸಹಚರರಿಗೆ ಬೆಂಗಳೂರಿನಲ್ಲಿ ಕಳ್ಳತನ ಮಾಡುವ ಬಗ್ಗೆ ತಿಳಿಸಿದ್ದರು.

ಬಂದ ಹಣದಲ್ಲಿ ಸಮಾನವಾಗಿ ಹಣ ಹಂಚುವುದಾಗಿ ಭರವಸೆ ನೀಡಿದ್ದರು. ಪ್ರಮುಖ ಆರೋಪಿಗಳ ಸೂಚಿಸಿದಂತೆ ರಾಜಸ್ಥಾನ ಮೂಲದ ಆರೋಪಿಗಳು ನಗರಕ್ಕೆ ಬಂದಿದ್ದರು.

ಅಮಾವಾಸ್ಯೆ ದಿನದಂದೆ ಕಳ್ಳತನಕ್ಕೆ ಮುಹೂರ್ತ ಇಟ್ಟಿದ್ದ ಗ್ಯಾಂಗ್​ :

ಅಂಗಡಿಯಲ್ಲಿ ಕಳ್ಳತನ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡ ಆರೋಪಿಗಳು ಅಂಗಡಿ ಬಳಿ ಹೋಗಿ ಕಳ್ಳತನ ಮಾಡಲು ಮುಂದಾದಾಗ ಮಳೆ ಅಡ್ಡಿಯಾಗಿತ್ತು.‌ ಇದಾದ ನಂತರ ಅಮಾವಾಸ್ಯೆ ದಿನ ಕಳ್ಳತನ ಮಾಡಿದರೆ ಸೂಕ್ತ ಎಂದು ವ್ಯೂಹ ರಚಿಸಿಕೊಂಡು ಕಳೆದ ತಿಂಗಳು 10 ರಂದು ಗ್ಯಾಸ್ ಕಟ್ಟರ್ ಬಳಸಿ ಅಂಗಡಿಗೆ‌ ನುಗ್ಗಿ‌ ಕೃತ್ಯ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಇಂಗ್ಲೆಂಡ್​​ನಿಂದ ಬಂದ ಇಬ್ಬರು ಮಕ್ಕಳು ಸೇರಿ ಐವರಿಗೆ ಕೊರೊನಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.