ETV Bharat / state

ಹಲಸು ಬೆಳೆಸಿ ಹಣ್ಣು ತಿನ್ನಲು ಹೆಚ್ಚು ಕಾಯಬೇಕಿಲ್ಲ; ಒಂದೆರಡು ವರ್ಷಕ್ಕೆಲ್ಲ ಫಲಕೊಡಲಿವೆ ಈ ಕಸಿಗಿಡಗಳು - ಕೃಷಿಮೇಳ

ರಾಜ್ಯದ ವಿವಿಧ ಭಾಗದ ರೈತರು ತಾವು ಅಭಿವೃದ್ಧಿಪಡಿಸಿದ ಹಲಸಿನ ಗಿಡಗಳ ಜತೆ ಜಿಕೆವಿಕೆ ಆವರಣದ ಕೃಷಿ ಮೇಳದಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ.

ಕೃಷಿಕ
ಕೃಷಿಕ
author img

By

Published : Nov 3, 2022, 10:31 PM IST

ಬೆಂಗಳೂರು: ಇದು ನ್ಯಾನೋ ತಂತ್ರಜ್ಞಾನ ಉತ್ತುಂಗದಲ್ಲಿರುವ ಕಾಲಘಟ್ಟ. ಯಾವುದಕ್ಕೂ ಹೆಚ್ಚು ಕಾಯುವ ಅಗತ್ಯವಿಲ್ಲ. ಆದರೆ ಕೃಷಿ ಉತ್ಪನ್ನಗಳು ಅಷ್ಟು ಬೇಗ ಲಭಿಸುತ್ತಿರಲಿಲ್ಲ. ಹಲಸಿನ ವಿಚಾರಕ್ಕೆ ಬಂದರಂತೂ ನಾಲ್ಕೈದು ವರ್ಷ ಕಾಯಲೇಬೇಕಿತ್ತು. ಆದರೆ ಈಗ ತಂತ್ರಜ್ಞಾನದ ಪ್ರಗತಿಯನ್ನು ಆಧರಿಸಿ ಕಸಿಗಿಡಗಳು ಮಾರುಕಟ್ಟೆಗೆ ಬರುತ್ತಿವೆ.

ಕೃಷಿಕ ಅನಿಲ್ ಕುಮಾರ್ ಅವರು ಮಾತನಾಡಿದರು

ಕೇವಲ ಒಂದರಿಂದ ಎರಡು ವರ್ಷದಲ್ಲಿ ಹಲಸಿನ ಫಸಲು ಕೈಗಿಡುವ ಕಸಿಗಿಡಗಳು ಅಭಿವೃದ್ಧಿಗೊಳ್ಳುತ್ತಿವೆ. ನಂಬಿಕೆ ಬರುತ್ತಿಲ್ಲ ಅಂದರೆ ಒಮ್ಮೆ ಬೆಂಗಳೂರಿನ ಹೆಬ್ಬಾಳ ಸಮೀಪದಲ್ಲಿರುವ ಜಿಕೆವಿಕೆ ಆವರಣಕ್ಕೆ ಭೇಟಿ ಕೊಡಿ. ಇಂದು ಆರಂಭವಾಗಿರುವ ಕೃಷಿ ಮೇಳದಲ್ಲಿ ಕಸಿ ಹಲಸಿನ ಗಿಡ ವಿಶೇಷ ಗಮನ ಸೆಳೆಯುತ್ತಿದೆ.

ಕೇವಲ ಒಂದು ವರ್ಷಕ್ಕೆ ಫಲಕ್ಕೆ ಬರುವ, ಎರಡು ವರ್ಷಕ್ಕೆ ಹಣ್ಣನ್ನು ಕೈಗಿಡುವ ಕಸಿ ಗಿಡಗಳು ಗಮನ ಸೆಳೆಯುತ್ತಿವೆ. ಹಿಂದೆಲ್ಲಾ ಸಾಮಾನ್ಯವಾಗಿ ಹಲಸಿನ ಗಿಡವನ್ನು ಒಂದು ವರ್ಷ ಪಾಟ್ ಇಲ್ಲವೇ ಪ್ಲಾಸ್ಟಿಕ್ ಚೀಲದಲ್ಲಿಟ್ಟು ಬೆಳೆಸುವ ಬಗ್ಗೆ ಕೇಳುತ್ತಿದ್ದೆವು. ಆದರೆ ಈಗ ಪ್ಲಾಸ್ಟಿಕ್​ ಚೀಲದಲ್ಲಿರುವಾಗಲೇ ಫಸಲು ಕೈಗಿಡುವ ಗಿಡಗಳು ಲಭಿಸುತ್ತಿವೆ. ಅದೂ 250 ರಿಂದ 300 ರೂ. ನಷ್ಟು ಕಡಿಮೆ ಬೆಲೆಗೆ.

ರಾಜ್ಯದ ವಿವಿಧ ಭಾಗದ ರೈತರು ತಾವು ಅಭಿವೃದ್ಧಿಪಡಿಸಿದ ಹಲಸಿನ ಗಿಡಗಳ ಜತೆ ಜಿಕೆವಿಕೆ ಆವರಣದ ಕೃಷಿ ಮೇಳದಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ ಈ ಹಲಸಿನ ಮರಗಳ ಆಯಸ್ಸು ಸಹ ದೀರ್ಘಾವಧಿಯಾಗಿದ್ದಲ್ಲ. ಐದಾರು ವರ್ಷ ಬೆಳೆದ ಮೇಲೆ ಫಲ ನೀಡುವ ಹಲಸಿನ ಮರಗಳು ನೂರಾರು ವರ್ಷ ಗಟ್ಟಿಯಾಗಿ ತಲೆಯೆತ್ತಿ ನಿಲ್ಲುವುದನ್ನು ಕಾಣುತ್ತೇವೆ. ಆದರೆ ಈಗೀಗ ಅಭಿವೃದ್ಧಿಹೊಂದುತ್ತಿರುವ ಕಸಿ ಗಿಡಗಳು ಕೇವಲ 10ರಿಂದ 12 ವರ್ಷ ಫಲ ನೀಡಿ ನಂತರ ಸಾವನ್ನಪ್ಪುತ್ತವೆ.

ಇಂತಹ ಕಸಿ ಗಿಡಗಳಲ್ಲಿ ಎಲ್ಲ ಪ್ರಕ್ರಿಯೆಗಳೂ ವೇಗವಾಗಿ ನಡೆಯುತ್ತವೆ. ಗಿಡದಂತೆಯೇ ಗೋಚರಿಸುವ ಈ ಹಲಸಿನ ಮರಗಳು ಯಾವತ್ತೂ ಮರದಂತೆ ಎತ್ತರಕ್ಕೆ ಬೆಳೆಯುವುದಿಲ್ಲ. ಹತ್ತಾರು ಅಡಿಯಷ್ಟು ಬೆಳೆಯುತ್ತವೆ. ಚಿಕ್ಕ ಮಕ್ಕಳು ಸಹ ಆರಾಮವಾಗಿ ಹಲಸಿನ ಕಾಯನ್ನು ಕುಯ್ದುಕೊಳ್ಳಬಹುದು. ಫಲ ಸಹ ಸಾಕಷ್ಟು ರುಚಿಕಟ್ಟಾಗಿರುವುದು ವಿಶೇಷ.

ಚಂದ್ರಹಲಸು
ಚಂದ್ರಹಲಸು

ಮೂರು ವರ್ಷಕ್ಕೆ ಫಲ: ಪುತ್ತೂರು ಮೂಲದ ಜಾಕ್ ಅನಿಲ್ ಎಂದೇ ಜನಪ್ರಿಯರಾಗಿರುವ ಅನಿಲ್ ಕುಮಾರ್ ತಾವು ಅಭಿವೃದ್ಧಿ ಪಡಿಸಿರುವ ಹಲಸಿನ ತಳಿಯೊಂದಿಗೆ ಕೃಷಿಮೇಳಕ್ಕೆ ಆಗಮಿಸಿದ್ದಾರೆ. ಕೆಂಬಲಸು ಅಥವಾ ಚಂದ್ರಹಲಸು ಎಂದು ಕರೆಸಿಕೊಳ್ಳುವ ಒಂದು ವಿಧದ ಹಲಸಿನ ತಳಿ ಮೂರು ವರ್ಷಕ್ಕೆ ಫಲ ಬರುತ್ತದೆ. ಇದರ ಜತೆ ಇನ್ನೊಂದು ತಳಿ ಅಭಿವೃದ್ಧಿಪಡಿಸಿದ್ದು, ಸರ್ವಕಾಲಿಕ ಹಲಸು ಎಂಬ ಹೆಸರಿಟ್ಟಿದ್ದಾರೆ.

ವರ್ಷವಿಡೀ ಫಸಲು ನೀಡುತ್ತದೆ. ತಲಾ 12 ಅಡಿ ಅಂತರದಲ್ಲಿ ಬೆಳೆಸಬೇಕು. 15-20 ವರ್ಷ ಈ ಕಸಿ ಗಿಡ ಬಾಳುತ್ತದೆ. ಇತ್ತೀಚಿನ ಕಸಿ ಹಲಸುಗಳು ಸಾಮಾನ್ಯವಾಗಿ 4 ವರ್ಷಕ್ಕೆ ಫಸಲು ನೀಡುತ್ತವೆ. ನಾವು ಸಿದ್ಧಪಡಿಸಿದ ಹಲಸಿನ ತಳಿ ಮಾರಾಟ ಮಾಡುತ್ತೇನೆ. 22 ವರ್ಷದಿಂದ ನಾನು ಪುತ್ತೂರಿನಲ್ಲಿ ನರ್ಸರಿ ನಡೆಸುತ್ತಿದ್ದು, 200 ರಿಂದ 250 ರೂ.ಗೆ ಗಿಡ ಮಾರುತ್ತೇನೆ.

ಬಿಸಿಲು ಹೆಚ್ಚಿದ್ದಷ್ಟು ಒಳ್ಳೆಯದು: ಇದು ತೆರೆದ ಸ್ಥಳದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮಳೆ, ನೀರು ಕಡಿಮೆ ಇರುವ ಜಾಗದಲ್ಲಿ ಇದು ಹೆಚ್ಚಾಗಿ ಇಳುವರಿ ನೀಡುವುದಿಲ್ಲ. ಬಯಲು ಸೀಮೆಗೆ ಹೇಳಿ ಮಾಡಿಸಿದ ಬೆಳೆ. ಕರಾವಳಿ ಭಾಗದಲ್ಲಿ ಬೆಳೆಯುತ್ತೇವೆ. ಬಿಸಿಲು ಹೆಚ್ಚಿದ್ದಷ್ಟು ಒಳ್ಳೆಯದು. ಮಲೆನಾಡಿನಂತ ಭಾಗದಲ್ಲಿ ಫಂಗಸ್ ಬರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ.

ಓದಿ: ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.