ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ದಶ್ಯಾ ಎಂಬ 11 ವರ್ಷದ ನೀರಾನೆಯು(ಹಿಪ್ಪೋಪೊಟಮಸ್) ತನ್ನ 2ನೇ ಮರಿಗೆ ಜನ್ಮ ನೀಡಿದೆ.
ದಶ್ಯಾ ನೀರಾನೆ ತನ್ನ 9ನೇ ವಯಸ್ಸಿನಲ್ಲಿ ಮೊದಲ ಗಂಡು ಮರಿ(ಅಲೋಕ್)ಗೆ ಜನ್ಮ ನೀಡಿತ್ತು. ತಾಯಿ ಮತ್ತು ಮರಿ ಎರಡು ಆರೋಗ್ಯವಾಗಿವೆ. ಈ ಮರಿಯ ಜನನದೊಂದಿಗೆ ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಗಳ ಸಂಖ್ಯೆ 8ಕ್ಕೆ ಏರಿದೆ.
ನೀರಾನೆಗಳ ಸಂಖ್ಯೆ ಹೆಚ್ಚಳದಿಂದಾಗಿ ಇತರ ಮೃಗಾಲಯಗಳೊಂದಿಗೆ ಪ್ರಾಣಿ ವಿನಿಮಯ ಯೋಜನೆಗೆ ಅನುಕೂಲವಾಗುತ್ತದೆ ಎಂದು ಬನ್ನೇರುಘಟ್ಟ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ತಿಳಿಸಿದ್ದಾರೆ.