ETV Bharat / state

ಚಾಚಾ ನೆಹರು ಜನ್ಮದಿನದ ಶುಭ ಕೋರಿದ ರಾಜ್ಯ ಕೈ ನಾಯಕರು - KPCC president DK Sivakumar

ನವ ಭಾರತ ನಿರ್ಮಾತೃ, 'ಭಾರತ ರತ್ನ' ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನದಂದು ಮಕ್ಕಳ ಬಗೆಗಿನ ಅವರ ಅತೀವ ಪ್ರೀತಿಯ ಸಂಕೇತವಾಗಿ ಆಚರಿಸಲಾಗುವ 'ಮಕ್ಕಳ ದಿನಾಚರಣೆ'ಯ ಶುಭಾಶಯಗಳು..

DSD
ಚಾಚಾ ನೆಹರು ಜನ್ಮದಿನದ ಶುಭ ಕೋರಿದ ರಾಜ್ಯ ಕೈ ನಾಯಕರು
author img

By

Published : Nov 14, 2020, 12:34 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಜನ್ಮದಿನದ ಶುಭಾಶಯ ಕೋರಿದ್ದಾರೆ.

ಆಧುನಿಕ ಭಾರತದ ಜಾತ್ಯತೀತ ಮೌಲ್ಯದ ಪ್ರಬಲ ಪ್ರತಿಪಾದಕ, ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ಮತ್ತು ಮಕ್ಕಳಲ್ಲಿ ದೇವರನ್ನು ಕಂಡ ಮಾನವತಾವಾದಿ,‌ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಹುಟ್ಟುಹಬ್ಬದಂದು ಅಭಿಮಾನದಿಂದ‌ ಸ್ಮರಿಸುತ್ತಾ, ಗೌರವ ನಮನ‌ ಸಲ್ಲಿಸುವೆ ಎಂದಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಟ್ವೀಟ್​ನಲ್ಲಿ, ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಭಾರತದ ಮೊದಲ‌ ಪ್ರಧಾನಿ, ನವ ಭಾರತ ನಿರ್ಮಾತೃ, 'ಭಾರತ ರತ್ನ' ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನದಂದು ಮಕ್ಕಳ ಬಗೆಗಿನ ಅವರ ಅತೀವ ಪ್ರೀತಿಯ ಸಂಕೇತವಾಗಿ ಆಚರಿಸಲಾಗುವ 'ಮಕ್ಕಳ ದಿನಾಚರಣೆ'ಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಇನ್ನೂ ಮಾಜಿ ಡಿಸಿಎಂ ಜಿ ಪರಮೇಶ್ವರ್, ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಮಾಜಿ ಸಚಿವ ಎಂ ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ನಾಯಕರು ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.