ಬೆಂಗಳೂರು : ಕುಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿಕೊಂಡು ರೌಡಿ ಶೀಟರ್ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬ್ಯಾಟರಾಯನಪುರದ ಭಾರತಿ ನಗರದಲ್ಲಿ ನಡೆದಿದೆ.
ಅಶೋಕ್ ಅಲಿಯಾಸ್ ದಡಿಯಾ ಕೊಲೆಯಾದ ರೌಡಿ ಶೀಟರ್. ಅಶೋಕ್ ಹಾಗೂ ಆತನ ಸ್ನೇಹಿತರು ಭಾರತಿ ನಗರದಲ್ಲಿ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಎಲ್ಲರೂ ಕಂಠಪೂರ್ತಿ ಕುಡಿದು ವೈಯುಕ್ತಿಕ ವಿಷಯವನ್ನಿಟ್ಟುಕೊಂಡು ಅಶೋಕ್ ಜೊತೆ ಜಗಳ ಶುರು ಮಾಡಿದ್ದಾರೆ. ಕೊನೆಗೆ ಗಲಾಟೆ ತಾರಕಕ್ಕೇರಿ ಅಶೋಕ್ನನ್ನು ಕೊಲೆಗೈದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕೊಲೆಯಾದ ಅಶೋಕ್, ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳು ಈತನ ಮೇಲಿವೆ.