ETV Bharat / state

ಶಾಕಿಂಗ್​: ರಾಜ್ಯದಲ್ಲಿ ಅತಿವೃಷ್ಟಿಯಿಂದ ನಿರಾಶ್ರಿತರಾಗಿದ್ದು ಎಷ್ಟು ಲಕ್ಷ ಜನ ಗೊತ್ತಾ?

ಪ್ರವಾಹದಿಂದಾಗಿ ರಾಜ್ಯದಲ್ಲಿ 2.18 ಲಕ್ಷ ಜನರು ನಿರಾಶ್ರಿತರಾಗಿದ್ದು, 17 ಜಿಲ್ಲೆಗಳಲ್ಲಿ 924 ಪರಿಹಾರ ಕೇಂದ್ರಗಳನ್ನು ಆರಂಭಿಸಿಲಾಗಿದೆ. 3.14 ಲಕ್ಷ ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 136 ಪ್ರಮುಖ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಓಡಾಟಕ್ಕೆ ಸಾರ್ವಜನಿಕರು ಪರದಾಡಬೇಕಾಗಿದೆ.

flood
author img

By

Published : Aug 11, 2019, 8:42 AM IST

ಬೆಂಗಳೂರು: ಅತಿವೃಷ್ಟಿಯು ರಾಜ್ಯದಲ್ಲಿ 2.18 ಲಕ್ಷ ಜನರನ್ನ ನಿರಾಶ್ರಿತರನ್ನಾಗಿ ಮಾಡಿದೆ. ತೀವ್ರ ಸ್ವರೂಪದ ಮಳೆ ಹಾಗೂ ಪ್ರವಾಹದಿಂದ ಲಕ್ಷಾಂತರ ಜನರ ಬದುಕು ದುಸ್ತರವಾಗಿದೆ. ಸರ್ಕಾರ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ದಿನ ಕಳೆಯುವ ವಾತಾವರಣ ನಿರ್ಮಾಣವಾಗಿದೆ.

ರಾಜ್ಯ ಸರ್ಕಾರ ನಿರಾಶ್ರಿತರಿಗಾಗಿ 17 ಜಿಲ್ಲೆಗಳಲ್ಲಿ 924 ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದು, ಊಟ- ವಸತಿ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

flood
ಪ್ರವಾಹ ಪೀಡಿತರ ರಕ್ಷಣೆಗಾಗಿ ನೇಮಕಗೊಂಡ ತಂಡಗಳು

ಬೆಳಗಾವಿ, ಬಾಗಲಕೋಟೆ, ಗದಗ, ರಾಯಚೂರು, ಉತ್ತರ ಕನ್ನಡ, ಹಾವೇರಿ ಸೇರಿದಂತೆ 17 ಜಿಲ್ಲೆಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ 3.14 ಲಕ್ಷ ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳ, ಎಸ್‌ಡಿಆರ್​ಎಫ್ ಎನ್​ಡಿಆರ್​ಎಫ್ ಮತ್ತು ಸೇನೆಯ ತಂಡಗಳು ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಾಂತರ ಜನರನ್ನು ಇಲ್ಲಿಯವರೆಗೆ ಸಂರಕ್ಷಿಸಿ, ಸುರಕ್ಷಿತ ಜಾಗಕ್ಕೆ ತಲುಪಿಸುವಲ್ಲಿ ಶ್ರಮವಹಿಸಿವೆ.

ಬರಪೀಡಿತ ತಾಲೂಕುಗಳೆಂದು ಘೋಷಿಸಲಾದ 80 ತಾಲೂಕುಗಳ 1702 ಹಳ್ಳಿಗಳು ಅತಿವೃಷ್ಟಿಗೆ ತುತ್ತಾಗಿವೆ.

136 ರಸ್ತೆಗಳ ಸಂಪರ್ಕ ಕಡಿತ :

ಭಾರಿ ಪ್ರಮಾಣದ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಶಿರಾಡಿ ಘಾಟ್, ದೇವಿಮನೆ ಘಾಟ್ ಸೇರಿದಂತೆ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ 136 ಪ್ರಮುಖ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಹಾಗು ಜಿಲ್ಲಾ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿದೆ. ಇದರ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡು ಓಡಾಟಕ್ಕೆ ವಾಹನಗಳು ಮತ್ತು ಸಾರ್ವಜನಿಕರು ಪರದಾಡಬೇಕಾಗಿದೆ.

Intro: ರಾಜ್ಯದಲ್ಲಿ ೨.೧೮ ಲಕ್ಷ ಜನರನ್ನ ನಿರಾಶ್ರಿತರನ್ನಾಗಿ
ಮಾಡಿದ ಅತಿವೃಷ್ಟಿ

ಬೆಂಗಳೂರು : ಅತಿವೃಷ್ಟಿ ಯು ರಾಜ್ಯದಲ್ಲಿ ೨.೧೮ ಲಕ್ಷ ಜನರನ್ನ ನಿರಾಶ್ರಿತರನ್ನಾಗಿ ಮಾಡಿದೆ. ತೀವ್ರ ಸ್ವರೂಪದ ಮಳೆ ಹಾಗು ಪ್ರವಾಹದಿಂದ ಲಕ್ಷಾಂತರ ಜನರ ಬದುಕು ದುಸ್ತರವಾಗಿದೆ. ಸರಕಾರ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ದಿನಕಳೆಯುವ ವಾತಾವರಣ ನಿರ್ಮಾಣವಾಗಿದೆ.

ರಾಜ್ಯ ಸರಕಾರ ನಿರಾಶ್ರಿತರಿಗಾಗಿ ೧೭ ಜಿಲ್ಲೆಗಳಲ್ಲಿ ೯೨೪ ಪರಿಹಾರ ಕೇಂದ್ರಗಳನ್ನು ಆರಂಭಿಸಿ ಊಟ ವಸತಿ ಜತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.

ಬೆಳಗಾವಿ , ಬಾಗಲಕೋಟೆ, ಗದಗ, ರಾಯಚೂರು, ಉತ್ತರ ಕನ್ನಡ, ಹಾವೇರಿ ಸೇರಿದಂತೆ ೧೭ ಜಿಲ್ಲೆಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಹಾಗು ಮುನ್ನೆಚ್ಚರಿಕೆ ಕ್ರಮವಾಗಿ ೩.೧೪ ಲಕ್ಷ ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳ, ಎಸ್‌ಡಿ ಆರ್ ಎಫ್, ಎನ್ ಡಿಆರ್ ಎಫ್ ಮತ್ತು ಸೇನೆಯ ತಂಡಗಳು ಸಂಕಷ್ಟ ಕ್ಕೆ ಸಿಲುಕಿದ್ದ ಲಕ್ಷಾಂತರ ಜನರನ್ನು ಇಲ್ಲಿಯವರೆಗೆ ಸಂರಕ್ಚಿಸಿ ಸುರಕ್ಷಿತ ಜಾಗಕ್ಕೆ ತಲುಪಿಸುವಲ್ಲಿ ಶ್ರಮವಹಿಸಿವೆ.

ಬರಪೀಡಿತ ತಾಲೂಕುಗಳೆಂದು ಘೋಷಿಸಲಾದ ಎಂಬತ್ತು ತಾಲೂಕುಗಳ ೧೭೦೨ ಹಳ್ಳಿಗಳು ಅತಿವೃಷ್ಟಿಗೆ ತುತ್ತಾಗಿವೆ.

Body: ೧೩೬ ರಸ್ತೆಗಳ ಸಂಪರ್ಕ ಕಡಿತ :

ಭಾರೀ ಪ್ರಮಾಣದ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಶಿರಾಡಿ ಘಾಟ್, ದೇವಿಮನೆ ಘಾಟ್ ಸೇರಿದಂತೆ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಮಲೆನಾಡು, ಕರಾವಳಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ೧೩೬ ಪ್ರಮುಖ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಹಾಗು ಜಿಲ್ಲಾ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿದೆ. ಇದರ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡ ಓಡಾಟಕ್ಕೆ ವಾಹನಗಳು ಮತ್ತು ಸಾರ್ವಜನಿಕರು ಪರದಾಡಬೇಕಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.