ಬೆಂಗಳೂರು: ಕೆಪಿಎಸ್‍ಸಿಗೆ ಸದಸ್ಯರನ್ನು ಸುಪ್ರಿಂಕೋರ್ಟ್ ಕೊಲಿಜಿಂ ಮಾದರಿಯಲ್ಲಿ ಸದಸ್ಯರ ನೇಮಕ ಮಾಡಲು ಒಂದು ಸಮಿತಿ ರಚನೆ ಮಾಡಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಮಾತನಾಡಿದ ಅವರು, ಕೆಪಿಎಸ್‍ಸಿಯಲ್ಲಿ ಇರುವ ಸಿಬ್ಬಂದಿ ಮೊದಲಿನಿಂದಲೂ ಅಲ್ಲಿಯೇ ಇದ್ದಾರೆ. ಪೇಪರ್ಗಳು ಲೀಕ್ ಮಾಡಿದವರು ಯಾರು, ಎಷ್ಟು ಜನರ ಮೇಲೆ ಕ್ರಮ ಕೈಗೊಂಡಿದ್ದೀರಿ, ಹೋಟ ಸಮಿತಿ ಶಿಫಾರಸುಗಳನ್ನು ಸರ್ಕಾರ ಸ್ವೀಕರಿಸಿದಿಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಅಂಕಗಳ ಸಂಖ್ಯೆ ಜಾಸ್ತಿಯಾದಷ್ಟು ಮೆರಿಟ್ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆಯಾಗುತ್ತದೆ. ನಿಜವಾದ ಮೆರಿಟ್ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತದೆ ಎನ್ನುವ ಕಾರಣಕ್ಕೆ ಅಂಕ ಕಡಿತ ಮಾಡಲಾಗಿದೆ. ಸದಸ್ಯರ ಡಿಸ್‍ಕ್ರಿಶನರಿ ಪವರ್ ಕಡಿಮೆ ಮಾಡಲು ಈ ರೀತಿ ಮಾಡಲಾಗಿದೆ. ನೋಟಿಫಿಕೇಷನ್ ಹೊರಡಿಸಿ ಆಕ್ಷೇಪ ಸಲ್ಲಿಸಲು ಅವಕಾಶ ಕಲ್ಪಿಸಿದ್ದೇವೆ. ಈಗ ಪರ ವಿರೋಧ ವಾದ ನಡೆಯುತ್ತಿದೆ. ಆಕ್ಷೇಪಗಳು ಬಂದ ನಂತರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದರೂ ಸಂದರ್ಶನದಲ್ಲಿ ಸೋಲುತ್ತಿದ್ದಾರೆ. ಅವರಿಗೆ ಹೊಸ ವ್ಯವಸ್ಥೆ ಅನುಕೂಲವಾಗುವ ಸಾಧ್ಯತೆ ಇದೆ. ಈ ಬಗ್ಗೆ ಆಕ್ಷೇಪಗಳು ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ ಖರೀದಿ ಮಾಡ್ತಾರಾ?: ಸಿ.ಟಿ ರವಿ