ETV Bharat / state

ಬೆಡ್ ಲಭ್ಯತೆಯ ರಿಯಾಲಿಟಿ ಚೆಕಿಂಗ್​​ಗೆ ಅಧಿಕಾರಿಗಳ ನೇಮಕ

author img

By

Published : May 12, 2021, 4:04 PM IST

ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಬಗ್ಗೆ ಗಮನಹರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಇವತ್ತಿನಿಂದಲೇ ಆರ್ಡರ್ ಮಾಡಲು ಹೇಳಿದ್ದೇವೆ. ವಿಪತ್ತು ನಿರ್ವಹಣಾ ಅಡಿಯಲ್ಲಿ 30 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ..

ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್

ಬೆಂಗಳೂರು : ಬೆಡ್​ಗಳಿಗೆ ಸಂಬಂಧಿಸಿದಂತೆ ರಿಯಾಲಿಟಿ ಚೆಕ್ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಸರ್ಕಾರದ ಒಬ್ಬ ಡಾಕ್ಟರ್ ಜೊತೆಗೆ ಪಿಪಿಇ ಕಿಟ್ ಹಾಕಿಕೊಂಡು ರಿಯಾಲಿಟಿ ಚೆಕ್ ಮಾಡಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೆಡ್​ ಹಾಗೂ ಆಕ್ಸಿಜನ್ ಲಭ್ಯತೆ ಸಂಬಂಧ ಆರ್​. ಅಶೋಕ್ ಪ್ರತಿಕ್ರಿಯೆ..

ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಿಮ್ಸ್​​ನಲ್ಲಿ 30 ಆಕ್ಸಿಜನ್ ಬೆಡ್ ಕೊಡಲು ಮುಂದೆ ಬಂದಿದ್ದಾರೆ. ಬೆಂಗಳೂರಿನ 17 ಕಡೆ ಕೋವಿಡ್ ಕೇರ್ ಸೆಂಟರ್ ಇವೆ. ಅಲ್ಲಿ ಬಂದು ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು. 600 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಮುಂದಾಗಿದ್ದೇವೆ. ಅಲ್ಲಿ ತಕ್ಷಣಕ್ಕೆ ನಿಮಗೆ ಆಕ್ಸಿಜನ್ ಕೊರತೆ ನೀಗುತ್ತದೆ ಎಂದರು.

ಸಿಎಂ ಮನೆಯಲ್ಲಿ ಸಭೆ : ಹೊಸಕೆರೆಹಳ್ಳಿಯಲ್ಲಿ ಒಂದು ಕಟ್ಟಡ ನಿರ್ಮಾಣ ಆಗುತ್ತಿದೆ. ಅದನ್ನು ಮಕ್ಕಳ ಆಸ್ಪತ್ರೆ ಮಾಡುತ್ತೇವೆ. ಅದನ್ನು ಸಂಪರ್ಕಿಸಲು ಬಿಬಿಎಂಪಿ ಜಂಟಿ ಆಯುಕ್ತರಿಗೆ ಹೇಳಿದ್ದೇವೆ. ಪ್ರಾಯೋಗಿಕವಾಗಿ ಅಲ್ಲಿ ಯಾವ ವ್ಯವಸ್ಥೆ ಬೇಕು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದರು.

ರೆಮ್​​​ಡಿಸಿವಿರ್ ಔಷಧಿ, ವ್ಯಾಕ್ಸಿನ್ ಎಲ್ಲಾ ಕೇಂದ್ರದಿಂದ ಬರುತ್ತಿದೆ. ಅದನ್ನು ಎಲ್ಲಾ ಕಡೆ ಹಂಚಿಕೆ ಮಾಡುತ್ತಿದ್ದೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದೆ. ಅದಕ್ಕೆ ನಾವು ಸಂಜೆ ಸಿಎಂ ಮನೆಯಲ್ಲಿ ಸಭೆ ಸೇರುತ್ತಿದ್ದೇವೆ ಎಂದಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಬಗ್ಗೆ ಗಮನಹರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಇವತ್ತಿನಿಂದಲೇ ಆರ್ಡರ್ ಮಾಡಲು ಹೇಳಿದ್ದೇವೆ. ವಿಪತ್ತು ನಿರ್ವಹಣಾ ಅಡಿಯಲ್ಲಿ 30 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಬೆಂಗಳೂರು: ಸಿಗರೇಟ್​​ಗಾಗಿ 20ಕಿ.ಮೀ. ಬೈಕ್​​ನಲ್ಲಿ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.