ETV Bharat / state

ಬಿಜೆಪಿ ಸದನದ ಬಾವಿಗೆ ಬಿದ್ರೂ, ಯಾರ ನೇತೃತ್ವದಲ್ಲಿ ಅಂತ ಅವರಿಗೇ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ ವ್ಯಂಗ್ಯ - assembly session 2023

ಇಂದಿನ ಕಲಾಪದ ವೇಳೆ ಮಧ್ಯಾಹ್ನದ ಬಳಿಕವೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. ಆದರೆ, ಯಾರ ನೇತೃತ್ವದಲ್ಲಿ ಅಂತ ಅವರಿಗೇ ಗೊತ್ತಿಲ್ಲವೆಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ
author img

By

Published : Jul 4, 2023, 8:34 PM IST

ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಹಾಸ್ಯಾಸ್ಪದ ಹೇಗಿದೆ ಅಂದ್ರೆ ಬಿಜೆಪಿ ಸದನದ ಭಾವಿಗೆ ಬಿದ್ರೂ, ಯಾರ ನೇತೃತ್ವದಲ್ಲಿ ಅಂತ ಅವರಿಗೇ ಗೊತ್ತಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಯಕಲಾಪ ಹೀಗೆ ಹಾಳು‌ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದರು.

ಆಡಳಿತ ಪಕ್ಷದಲ್ಲಿದ್ದಾಗಲೂ ಸದನ ನಡೆಯಲು ಬಿಡಲಿಲ್ಲ. ಪ್ರತಿ ಪಕ್ಷದಲ್ಲಿ ಇದ್ದಾಗಲೂ ಹೀಗೆ ಮಾಡುತ್ತಿದ್ದಾರೆ. ಬಿಜೆಪಿ ಸದನದ ಭಾವಿಗೆ ಬಿದ್ರೂ, ಯಾರ ನೇತೃತ್ವದಲ್ಲಿ ಅಂತನೂ ಗೊತ್ತಿಲ್ಲ. ಅವರ ಬೇಡಿಕೆ ಅಂತಲೂ ಗೊತ್ತಿಲ್ಲ. ಯಾರಿಗೆ ಉತ್ತರ ಕೊಡಬೇಕು ಅಂತಾ ನಮಗೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನೀವು ಯಾವುದಕ್ಕೆ ಹೋರಾಟ ಮಾಡುತ್ತಿದ್ದೀರಾ ಗೊತ್ತಾಗುತ್ತಿಲ್ಲ. ಸದನ ನಡೆಯಲು ಬಿಡಿ, ಗ್ಯಾರಂಟಿ ಪರವಾಗಿದ್ದೀರಾ ಅಥವಾ ವಿರೋಧವಾಗಿದ್ದೀರಾ ಗೊತ್ತಾಗತ್ತದೆ. ಆಗಸ್ಟ್ 15ಕ್ಕೆ ಗೃಹ ಲಕ್ಷ್ಮಿ ಜಾರಿಯಾಗಲಿದೆ. ಮಲತಾಯಿ ಧೋರಣೆಯಿಂದ ಅಕ್ಕಿ ಸಿಗ್ತಿಲ್ಲ. ಸದನ ನಡೆಯುವುದಕ್ಕೆ ಬಿಡಿ, ರಾಜ್ಯದಲ್ಲಿ ಬರದ ಛಾಯೆ ಇದೆ. ನಿರೊದ್ಯೋಗ ತಾಂಡವವಾಡ್ತಿದೆ, ರೈತರ ಸಮಸ್ಯೆ ಆಲಿಸೋಣ ಸದನ ನಡೆಯಲು ಬಿಡಿ ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸವಾಲು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಧಮ್ಮು ತಾಕತ್ತು ಪ್ರಶ್ನೆ ಎತ್ತಿರುವುದು ಬೊಮ್ಮಾಯಿ ಅವರು. ಈಗಲೂ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಭ್ರಷ್ಟಾಚಾರದ ವಿರುದ್ಧ ನಾವಿದ್ದೇವೆ. ಯಾವುದೇ ಇಲಾಖೆಯಲ್ಲಾದರೂ ಭ್ರಷ್ಟಾಚಾರ ನಡೆದಿದೆ ಎಂದು ಗೊತ್ತಾದರೆ, ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಅದರಲ್ಲಿ ಮೀನಮೇಷ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಹಗರಣಗಳ ಬಗ್ಗೆ ತನಿಖೆಗಳನ್ನು ಮಾಡುತ್ತೇವೆ ಎಂದು ನಾವು ಮಾತು ಕೊಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಅಭಿ ನಿಗಮದ ಅಕ್ರಮ, ಗಂಗಾ ಕಲ್ಯಾಣ ಹಗರಣದ ಅಕ್ರಮ, ಬಿಟ್ ಕಾಯಿನ್ ಬಗ್ಗೆ ಎಸ್​ಐಟಿ (ವಿಶೇಷ ತನಿಖಾ ತಂಡ) ರಚನೆಯಾಗಿದೆ. ಕೊರೊನಾ ಭ್ರಷ್ಟಾಚಾರದ ತನಿಖೆ ಬಗ್ಗೆ ಸಂಪುಟದಲ್ಲಿ ತೀರ್ಮಾನವಾಗಿದೆ. ಎಲ್ಲ ಹಗರಣಗಳಿಗೆ ನಿರ್ದಿಷ್ಟವಾದ ಕಾರ್ಯಪಡೆ ಮೂಲಕ ತನಿಖೆ ನಡೆಸುತ್ತೇವೆ. ಎಲ್ಲದಕ್ಕೂ ತಾರ್ಕಿಕ ಅಂತ್ಯ ಕೊಡುತ್ತೇವೆ. ಅದು ನಮ್ಮ ಅನಧಿಕೃತ ಆರನೇ ಗ್ಯಾರಂಟಿ ಎಂದು ತಿಳಿಸಿದರು.

ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್: ಸಿಸಿಬಿ ತನಿಖಾ ಕಡತ ಹಸ್ತಾಂತರ ಪ್ರಕ್ರಿಯೆ ಚುರುಕು: ಎಸ್ಐಟಿ ಮುಖ್ಯಸ್ಥರ ಮಾಹಿತಿ

ಸದನದಲ್ಲಿ ಮುಂದುವರಿದ ಬಿಜೆಪಿ ಧರಣಿ: ಇಂದು ಮಧ್ಯಾಹ್ನದ ಬಳಿಕವೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. ಧರಣಿ ಮಧ್ಯೆಯೇ ಗಮನ ಸೆಳೆಯುವ ಸೂಚನೆಯನ್ನು ಮಂಡಿಸಲಾಯಿತು.‌ ಈ ವೇಳೆ, ಮಾಜಿ ಸಿಎಂ ಬೊಮ್ಮಾಯಿ ಆತ್ಮ ಸಾಕ್ಷಿಯಾಗಿ ನಡೆದುಕೊಳ್ಳಿ, ಪರಂಪರೆಯನ್ನು ಉಳಿಸಿ, ಕರ್ನಾಟಕ ವಿಧಾನಸಭೆಯ ಪರಂಪರೆ ನಿಮ್ಮ ಕೈಯಿಂದ ಹಾಳು ಮಾಡುತ್ತಿದ್ದೀರಿ ಎಂಬ ಕೆಟ್ಟ ಹೆಸರು ಪಡೆಯಬೇಡಿ ಎಂದು ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಸದಸ್ಯರು ಸ್ಪೀಕರ್ ಒನ್ ಸೈಡ್, ಸ್ಪೀಕರ್ ಒನ್ ಸೈಡ್ ಎಂದು ಘೋಷಣೆ ಕೂಗಿದರು. ಸ್ಪೀಕರ್ ಕಾಂಗ್ರೆಸ್ ಸೈಡ್ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಒಂದು ಸೈಡ್ ಸದನ‌ ನಡೆಸಿಕೊಂಡು ಹೋಗುತ್ತೀರಾ.‌ ಮುಂದಿನ ಐದು ವರ್ಷ ಹೀಗೆ ಮಾಡುತ್ತೀರಾ? ಎಂದು ಆರ್.ಅಶೋಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನಾನು ಯಾರ ಸೈಡೂ ಇಲ್ಲ. ನಿಯಮಾನುಸಾರ ನಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. ಬಳಿಕ ಸದನವನ್ನು ನಾಳೆ ಬೆಳಗ್ಗೆ 10.30ಗೆ ಮುಂದೂಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.