ETV Bharat / state

ಸಿಎಂ ಸಿದ್ದರಾಮಯ್ಯಗೆ ಬಕ್ರೀದ್‌ ಬಿರಿಯಾನಿ ಕಳುಹಿಸಿದ ಜಮೀರ್ ಅಹಮ್ಮದ್‌: ಆಟೋದಲ್ಲಿ ಬಂದಾಗ ತಡೆ; ಬೆಂಜ್​ ಕಾರಿನಲ್ಲಿ ತಂದಾಗ ರಾಜಮರ್ಯಾದೆ!

ಬಕ್ರೀದ್​ ಹಿನ್ನಲೆಯಲ್ಲಿ ಸಚಿವ ಜಮೀರ್ ಅಹಮದ್ ಅವರು​ ಸಿಎಂ ಸಿದ್ದರಾಮಯ್ಯರಿಗೆ ವಿಶೇಷ ಬಿರಿಯಾನಿ ಕಳುಹಿಸಿಕೊಟ್ಟಿದ್ದಾರೆ.

minister-jamir-ahmad-sent-biriyani-to-cm-siddaramaiah
ಬಿರಿಯಾನಿ ಆಟೋದಲ್ಲಿ ಬಂದಾಗ ತಡೆ : ಬೆಂಜ್​ ಕಾರಿನಲ್ಲಿ ಬಂದಾಗ ರಾಜಮರ್ಯಾದೆ
author img

By

Published : Jun 29, 2023, 6:58 PM IST

Updated : Jun 29, 2023, 8:17 PM IST

ಬೆಂಗಳೂರು : ಬಕ್ರೀದ್ ಹಬ್ಬದಂದು ಬಿರಿಯಾನಿ ಮಾಡುವುದು ವಿಶೇಷ. ಇದೇ ಬಿರಿಯಾನಿ ಇಂದು ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಸ್ವಾರಸ್ಯಕರ ಘಟನೆಗೆ ಕಾರಣವಾಯಿತು. ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಜಮೀರ್​ ಅಹಮದ್​ ಖಾನ್​ ಆಟೋದಲ್ಲಿ ಕಳುಹಿಸಿದ್ದ ಬಿರಿಯಾನಿಯನ್ನು ವಾಪಸ್​ ಕಳಿಸಿದ ಪ್ರಸಂಗ ನಡೆಯಿತು.

ರಾಜಧಾನಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಕ್ರೀದ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಬಳಿಕ ಸಂಜೆಯವರೆಗೂ ಯಾವುದೇ ಕಾರ್ಯಕ್ರಮವಿಲ್ಲದ ಕಾರಣ ಶಿವಾನಂದ ವೃತ್ತದ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವ ಸಚಿವ ಜಮೀರ್ ಅಹಮದ್ ಖಾನ್ ಅವರು ಒಂದಿಷ್ಟು ವಿಶೇಷ ಬಿರಿಯಾನಿಯನ್ನು ಪ್ಯಾಕ್ ಮಾಡಿಸಿ ಸಿದ್ದರಾಮಯ್ಯ ನಿವಾಸಕ್ಕೂ ಕಳುಹಿಸಿಕೊಟ್ಟಿದ್ದರು. ಜಮೀರ್ ಕಳುಹಿಸಿದ್ದ ಬಿರಿಯಾನಿ ಪಾರ್ಸಲನ್ನು ಆಟೋದಲ್ಲಿ ಹಾಕಿಕೊಂಡು ಸಿದ್ದರಾಮಯ್ಯ ನಿವಾಸಕ್ಕೆ ತರಲಾಗಿತ್ತು. ಪ್ಲಾಸ್ಟಿಕ್‌ ಮೂಟೆಗಳಲ್ಲಿ ಪ್ಯಾಕ್‌ ಮಾಡಿ ತಂದಿದ್ದ ಬಿರಿಯಾನಿ ಡಬ್ಬಗಳನ್ನು ಆಟೋದಲ್ಲಿ ವ್ಯವಸ್ಥಿತವಾಗಿ ಸಿಎಂ ಮನೆಗೆ ಕಳುಹಿಸಲಾಗಿತ್ತು. ಸಿಎಂ ನಿವಾಸಕ್ಕೆ ಆಟೊ ಆಗಮಿಸಿದಾಗ ಪೊಲೀಸರು ಆಟೋ ತಡೆದು ಒಳಹೋಗಲು ಅವಕಾಶ ನೀಡಲಿಲ್ಲ. ಶಿಷ್ಟಾಚಾರದ ಪ್ರಕಾರ ಆಟೋವನ್ನು ಒಳಬಿಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ ಪೊಲೀಸರು ಬಿರಿಯಾನಿ ಸಮೇತ ಆಟೋವನ್ನು ವಾಪಸ್ ಕಳುಹಿಸಿದರು. ಸಿಎಂ ಮನೆಯೊಳಗೆ ತೆರಳಬೇಕಿದ್ದ ಬಿರಿಯಾನಿ ಚಾಮರಾಜಪೇಟೆಗೆ ಹಿಂದಿರುಗಿತು.

ಆದರೆ ಸಿದ್ದರಾಮಯ್ಯ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್​​ಗೆ ಹೇಗಾದರೂ ಸಿಎಂ ನಿವಾಸಕ್ಕೆ ಬಿರಿಯಾನಿ ಕಳುಹಿಸಿ ಕೊಡಲೇಬೇಕಿತ್ತು. ಹಬ್ಬದ ನಿಜವಾದ ಆಚರಣೆ ಯಶಸ್ವಿಯಾಗಬೇಕಾದರೆ ಸಿದ್ದರಾಮಯ್ಯನವರು ತಮ್ಮ ಕಡೆಯಿಂದ ಕಳುಹಿಸಿಕೊಟ್ಟ ಬಿರಿಯಾನಿಯನ್ನು ಸೇವಿಸಬೇಕು. ಸಿದ್ದರಾಮಯ್ಯ ಮಾಂಸಾಹಾರ ಪ್ರಿಯರಾಗಿದ್ದು ಅವರಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ಬಿರಿಯಾನಿ ವ್ಯರ್ಥವಾಗಬಾರದು ಎಂದು ಚಿಂತಿಸಿ ಇದಕ್ಕೊಂದು ಮಾರ್ಗ ಕಂಡುಕೊಂಡಿದ್ದಾರೆ.

ಆಟೋದಲ್ಲಿ ತೆರಳಿ ವಾಪಸ್ ಬಂದ ಬಿರಿಯಾನಿ ಖಾಸಗಿ ಬೆಂಜ್ ಕಾರಿಗೆ ಭರ್ತಿ ಮಾಡಲಾಗಿದೆ. ಆ ಕಾರು ಮರಳಿ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿತು. ಆಟೋದಲ್ಲಿ ಬಂದಾಗ ತಡೆದು ವಾಪಸ್ ಕಳುಹಿಸಿದ್ದ ಅದೇ ಪೊಲೀಸರು ಕಾರಿಗೆ ವಿಶೇಷ ರಾಜ ಮರ್ಯಾದೆ ನೀಡಿ ಸಿದ್ದರಾಮಯ್ಯ ನಿವಾಸದೊಳಗೆ ಕಳುಹಿಸಿ ಕೊಟ್ಟಿದ್ದಾರೆ. ಆಟೋದಲ್ಲಿ ತಲುಪಬೇಕಿದ್ದ ಬಿರಿಯಾನಿ ರಾಜ ಮರ್ಯಾದೆಯೊಂದಿಗೆ ಕಾರಿನಲ್ಲಿ ಸಿದ್ದರಾಮಯ್ಯ ನಿವಾಸ ತಲುಪಿ ಯಶಸ್ವಿಯಾಗಿ ಮಧ್ಯಾಹ್ನದ ಭೋಜನವಾಗಿ ಪೂರ್ಣಗೊಂಡಿದೆ.

ಇಲ್ಲಿ ಕಂಡುಬಂದ ವ್ಯತ್ಯಾಸವೆಂದರೆ ಮೊದಲು ಆಟೋದಲ್ಲಿ ಬಂದ ಬಿರಿಯಾನಿಗೆ ಒಳ ಪ್ರವೇಶಿಸಲು ಯಾವುದೇ ಪಾಸ್ ಇರಲಿಲ್ಲ. ಆದರೆ ನಂತರ ಬಂದ ಬೆಂಜ್ ಕಾರಿಗೆ ಸಿಎಂ ನಿವಾಸಕ್ಕೆ ಎಂಟ್ರಿ ಪಾಸ್‌ ಇದ್ದ ಕಾರಣ ಯಾವುದೇ ತಕರಾರು ಎದುರಾಗಿಲ್ಲ. ಪೊಲೀಸರು ಸಹ ನಿರಾತಂಕವಾಗಿ ಕಳುಹಿಸಿಕೊಟ್ಟಿದ್ದಾರೆ. ಈ ರೀತಿ ಕೊನೆಗೂ ಮಧ್ಯಾಹ್ನದ ಊಟದ ಸಮಯ ಮೀರುವ ಮುನ್ನವೇ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ವಿಶೇಷ ಬಕ್ರೀದ್‌ ಬಿರಿಯಾನಿ ಸರಬರಾಜು ಮಾಡುವಲ್ಲಿ ಜಮೀರ್‌ ಅಹ್ಮದ್‌ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : Bakrid: ರಾಜ್ಯಾದ್ಯಂತ ಸಂಭ್ರಮದ ಬಕ್ರೀದ್; ಈದ್ಗಾ ಮೈದಾನಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

Last Updated : Jun 29, 2023, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.