ETV Bharat / state

ಬಿಬಿಎಂಪಿ ಚುನಾವಣೆ ನಡೆಸಲು ನಮಗೇನು ಅಭ್ಯಂತರವಿಲ್ಲ: ಸಚಿವ ಭೈರತಿ ಬಸವರಾಜ್

ಬಿಬಿಎಂಪಿ ಚುನಾವಣೆ ನಡೆಸಲು ನಮಗೇನು ಅಭ್ಯಂತರವಿಲ್ಲ. ಚುನಾವಣೆಗೆ ಹೆದರುವ ಪಕ್ಷ ನಮ್ಮದಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.

ಸಚಿವ ಭೈರತಿ ಬಸವರಾಜ್
ಸಚಿವ ಭೈರತಿ ಬಸವರಾಜ್
author img

By

Published : Oct 1, 2021, 3:39 PM IST

Updated : Oct 1, 2021, 5:00 PM IST

ಬೆಂಗಳೂರು: ಇಂದು ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಬಿಬಿಎಂಪಿ ಚುನಾವಣೆ ನಡೆಸಲು ನಮಗೇನು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

ಪಾಲಿಕೆ ಚುನಾವಣೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇವೆ. ಚುನಾವಣೆಗೆ ಹೆದರುವ ಪಕ್ಷ ನಮ್ಮದಲ್ಲ. ನಾವೇ ಅಧಿಕಾರಕ್ಕೆ ಬಂದು ಮೇಯರ್ ಕೂಡ ಆಗ್ತೀವಿ. ಈ ಮೂಲಕ ಬೆಂಗಳೂರಿನ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕರ್ತರಿಂದ ನನ್ನ ಇಲಾಖೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಬಂದಿವೆ. ಈ ಕುರಿತ ಅರ್ಜಿ ವಿಲೇವಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಮಾತನಾಡುತ್ತೇನೆ. ಯಾವುದೇ ಪ್ರದೇಶದಲ್ಲಿ ರಸ್ತೆ ಸಮಸ್ಯೆಗಳಿದ್ದರೆ ಅದನ್ನು ನನ್ನ ಗಮನಕ್ಕೆ ತನ್ನಿ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ: ಬಿ.ವೈ.ವಿಜಯೇಂದ್ರ

Last Updated : Oct 1, 2021, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.