ETV Bharat / state

ಶಿವರಾತ್ರಿ ಪ್ರಯುಕ್ತ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಮೇಲೆ ಮಾರ್ಷಲ್‌ಗಳ ಕಣ್ಗಾವಲು! - Marshall instructs devotees to wear mask

ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಮಾರ್ಷಲ್​ಗಳು ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದು, ಮಾಸ್ಕ್ ಹಾಕದವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದಾರೆ.‌

Marshall instructs devotees to wear mask
ಭಕ್ತಾದಿಗಳ ಮೇಲೆ ಮಾರ್ಷಲ್‌ಗಳ ಕಣ್ಗಾವಲು
author img

By

Published : Mar 11, 2021, 10:40 AM IST

ಬೆಂಗಳೂರು: ದೇಶದೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ‌ ನಗರದ ಬಹುತೇಕ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಭರದಿಂದ ಸಾಗಿವೆ.

ಭಕ್ತಾದಿಗಳ ಮೇಲೆ ಮಾರ್ಷಲ್‌ಗಳ ಕಣ್ಗಾವಲು ...

ಶಿವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಮಾರ್ಷಲ್​ಗಳು ದೇವಸ್ಥಾನದ ಅಂಗಳದಲ್ಲಿ ಕಾವಲು ಕಾಯುತ್ತಿದ್ದಾರೆ.

ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಮಾರ್ಷಲ್​ಗಳು ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೂಪರ್ ವೈಸರ್ ವೆಂಕಟೇಶ್ ಮೂರ್ತಿ ಮತ್ತು ಅವರ ತಂಡ ದೇವಸ್ಥಾನಗಳ ಬಳಿ ಮಾಸ್ಕ್ ಹಾಕುವಂತೆ ಒತ್ತಾಯಿಸಿದ್ದಾರೆ. ಇನ್ನು ಮಾರ್ಷಲ್‌ಗಳು ಕೂಡ ಮಾಸ್ಕ್ ಹಾಕದವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.