ಬೆಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ರಾಧಾರವಿ (29) ಹಾಗೂ ಪಳನಿವೇಲು (38) ಬಂಧಿತ ಆರೋಪಿಗಳು. ರಾಧಾರವಿ ಕ್ರೈಸ್ಟ್ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ, ಈತನನ್ನು ಬಂಧಿಸಿದ ವಿಚಾರಣೆಗೆ ಒಳಪಡಿಸಿದಾಗ ನೀಡಿದ ಸುಳಿವಿನ ಮೇರೆಗೆ ಪಳನಿವೇಲ ಅನ್ನು ಬಂಧಿಸಲಾಗಿದೆ.
ವಿಶಾಖಪಟ್ಟಣಂನಿಂದ ಗಾಂಜಾ ಖರೀದಿಸಿ ತರುತ್ತಿದ್ದ ಆರೋಪಿಗಳು, ತಮಿಳುನಾಡಿನ ನೇರಳಗಿರಿಯಲ್ಲಿ ಶೇಖರಿಸಿಡುತ್ತಿದ್ದರು. ಅಲ್ಲಿಂದ ಬೆಂಗಳೂರಿಗೆ ತಂದು ಕೆ.ಜಿಗೆ 45 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 30 ಲಕ್ಷ ರೂ. ಮೌಲ್ಯದ 120 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.