ETV Bharat / state

ಬೆಂಗಳೂರು: ಸ್ಮಾರ್ಟ್​ಸಿಟಿ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಕೈಯಿಂದ ಮಲಸ್ವಚ್ಛತೆ - ಸ್ಮಾರ್ಟ್​ಸಿಟಿ ಸಂಸ್ಥೆ

ಶಿವಾಜಿನಗರದ ಇನ್ಫಾಂಟ್ರಿ ರಸ್ತೆಯ ಒಳಚರಂಡಿಯಲ್ಲಿ ಕಾರ್ಮಿಕರ ಕೈಯಿಂದ ಮಲಸ್ವಚ್ಛತೆ ಮಾಡಿಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

manual-scavenging-in-smart-city-project-repair-work-at-benagluru
ಬೆಂಗಳೂರು: ಸ್ಮಾರ್ಟ್​ಸಿಟಿ ಕಾಮಗಾರಿಯ ಸ್ಥಳದಲ್ಲಿ ಕಾರ್ಮಿಕರ ಕೈಯಿಂದ ಮಲಸ್ವಚ್ಛತೆ
author img

By

Published : Sep 10, 2022, 8:44 PM IST

ಬೆಂಗಳೂರು: ಸ್ಮಾರ್ಟ್​ಸಿಟಿ ಕಾಮಗಾರಿಯ ಸ್ಥಳದಲ್ಲಿ ದುರ್ನಾತ ಬೀರುತ್ತಿರುವ ಒಳಚರಂಡಿಯಲ್ಲಿ ಕೈಗೆ ಗ್ಲೌಸ್ ಹಾಗೂ ಮಾಸ್ಕ್ ಇಲ್ಲದೇ ಕೈಗಳಿಂದಲೇ ಬಕೆಟ್ ಮೂಲಕ ಶೌಚಾಲಯದ ನೀರನ್ನು ಕಾರ್ಮಿಕರು ಎತ್ತಿಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಾಜಿನಗರದ ಇನ್ಫಾಂಟ್ರಿ ರಸ್ತೆಯ ಒಳಚರಂಡಿ ಬ್ಲಾಕ್ ಆಗಿದೆ ಎಂಬ ದೂರು ಸ್ಮಾರ್ಟ್​​ಸಿಟಿ ಲಿಮಿಟೆಡ್​​ಗೆ ಬಂದಿತ್ತು. ಸ್ಮಾರ್ಟ್​ಸಿಟಿ ಸಂಸ್ಥೆ ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಬೇಕಿತ್ತು. ಆದರೆ, ಒಬ್ಬ ಕಾರ್ಮಿಕ ಹಾಗೂ ಮತ್ತೊಬ್ಬ ವೃದ್ಧರನ್ನು ಬಳಸಿಕೊಂಡು ಯಾವುದೇ ಸುರಕ್ಷತಾ ಮಾರ್ಗಗಳಿಲ್ಲದೇ ಅತ್ಯಂತ ಕನಿಷ್ಠವಾಗಿ ನಡೆಸಿಕೊಂಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಸ್ಮಾರ್ಟ್​ಸಿಟಿ ಕಾಮಗಾರಿಯ ಸ್ಥಳದಲ್ಲಿ ಕಾರ್ಮಿಕರ ಕೈಯಿಂದ ಮಲಸ್ವಚ್ಛತೆ

ಮಲವನ್ನು ಕೈಯಲ್ಲಿ ಮುಟ್ಟುವಂತಿಲ್ಲ. ಇದು ಮನುಷ್ಯನ ಘನತೆಗೆ ಧಕ್ಕೆ ತರುವಂತ ಘಟನೆ. ಕಳೆದ ಅಕ್ಟೋಬರ್​ನಲ್ಲೂ ಇದೇ ರೀತಿಯಾಗಿ ಇದೇ ರಸ್ತೆಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ನಡೆದಿದೆ. ಇದು ಕಾನೂನುಬಾಹಿರ ಎಂದು ವಕೀಲರಾದ ವಿನಯ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಿಕಪ್​ ಡ್ಯಾಂ ಗೇಟ್​​ಗೆ ಸಿಲುಕಿದ ಸಸ್ಯರಾಶಿ; ತೆರವುಗೊಳಿಸಲು ರೈತರ ಹರಸಾಹಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.