ಬೆಂಗಳೂರು: ನಗರದಲ್ಲಿ ಹಾಡಹಗಲೇ ವ್ಯಕ್ತಿಗೆ ಚಾಕು ಇರಿದ ಘಟನೆ ಬಾಗಲೂರಿನ ಕಟ್ಟಿಗೇಹಳ್ಳಿ ಸರ್ಕಲ್ ಬಳಿ ನಡೆದಿದೆ. ಮಾರ್ವಾಡಿ ರಮೇಶ್ ಎಂಬಾತನ ಮೇಲೆ ದಾಳಿ ನಡೆಸಿರುವ ಪ್ರಶಾಂತ್ ಅಂಡ್ ಟೀಂ, ಹಫ್ತಾ ಹಣ ನೀಡಲು ನಿರಾಕರಿಸಿದ್ದಕ್ಕೆ ಚಾಕು ಹಾಕಿದೆ ಎನ್ನಲಾಗಿದೆ.
ಆಟೋದಲ್ಲಿ ಬಂದಿದ್ದ ಪ್ರಶಾಂತ್ ಸೇರಿ ನಾಲ್ವರು ರಮೇಶ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ಗಾಯವಾದ ಕಾರಣ ಗಾಯಾಳು ರಮೇಶ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
![Man stabbed to death in Bangalore](https://etvbharatimages.akamaized.net/etvbharat/prod-images/9430193_thum.jpg)
ವಿಚಾರ ತಿಳಿದು ಯಲಹಂಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಗಾಯಾಳು ರಮೇಶ್ಗೆ ಚಿಕಿತ್ಸೆ ಮುಂದುವರೆದಿದೆ.
ಆರೋಪಿ ಪ್ರಶಾಂತ್ ಅಂಡ್ ಟೀಂ ಪತ್ತೆಗೆ ಯಲಹಂಕ ಪೊಲೀಸ್ ಬಲೆ ಬೀಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.