ಬೆಂಗಳೂರು: ನಾಯಕ ಮಯಾಂಕ್ ಅಗರ್ವಾಲ್ ದಾಖಲಿಸಿದ ಸ್ಪೋಟಕ ಶತಕ ಹಾಗೂ ಬೌಲಿಂಗ್‌ನಲ್ಲಿ ಮೊಹ್ಸಿನ್ ಖಾನ್ ಉತ್ತಮ ಕೊಡುಗೆಯ ನೆರವಿನಿಂದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಂದು ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ 11 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಬ್ಲಾಸ್ಟರ್ಸ್ ಪರ ಮಯಾಂಕ್ ಅಗರ್ವಾಲ್ 57 ಎಸೆತಗಳಲ್ಲಿ 105 ರನ್ ಗಳಿಸಿದರೆ, ಚೊಚ್ಚಲ ಪಂದ್ಯವನ್ನಾಡಿದ ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್ 4/35 ಪಡೆದು ಮಿಂಚಿದರು.
-
.@kbblasters hold their nerves and emerge victorious against the Warriors 🔥#MWvKBB #IlliGeddavareRaja #MaharajaTrophy #KSCA #Karnataka pic.twitter.com/XwhH4vHjt0
— Maharaja Trophy T20 (@maharaja_t20) August 25, 2023 " class="align-text-top noRightClick twitterSection" data="
">.@kbblasters hold their nerves and emerge victorious against the Warriors 🔥#MWvKBB #IlliGeddavareRaja #MaharajaTrophy #KSCA #Karnataka pic.twitter.com/XwhH4vHjt0
— Maharaja Trophy T20 (@maharaja_t20) August 25, 2023.@kbblasters hold their nerves and emerge victorious against the Warriors 🔥#MWvKBB #IlliGeddavareRaja #MaharajaTrophy #KSCA #Karnataka pic.twitter.com/XwhH4vHjt0
— Maharaja Trophy T20 (@maharaja_t20) August 25, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು, ಮೊದಲ ನಾಲ್ಕು ಓವರ್‌ಗಳಲ್ಲಿ 16 ರನ್ ಗಳಿಸುವ ಮೂಲಕ ಮಂದಗತಿಯ ಆರಂಭ ಪಡೆಯಿತು. ಆರಂಭಿಕ ಇ.ಜೆ ಜಾಸ್ಪರ್ ಕೇವಲ 1 ರನ್ ಗಳಿಸಿ ಜೆ.ಸುಚಿತ್‌ಗೆ ವಿಕೆಟ್ ಒಪ್ಪಿಸಿದರು. ನಿಶ್ಚಲ್ಗೆ ಜೊತೆಯಾದ ಮಯಾಂಕ್ ಅಗರ್ವಾಲ್ ಐದನೇ ಓವರ್‌ನ ಅಂತಿಮ ಎರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪವರ್‌ಪ್ಲೇ ಅಂತ್ಯದ ವೇಳೆಗೆ ಬೆಂಗಳೂರು ತಂಡ 43-1 ತಲುಪಿತು. ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 55 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ನಿಶ್ಚಲ್ (29) ಜೆ.ಸುಚಿತ್‌ಗೆ ಎರಡನೇ ಬಲಿಯಾದರು.
ನಂತರ ಬಂದ ಶುಭಾಂಗ್ ಹೆಗ್ಡೆ 24 ರನ್ ಕೊಡುಗೆ ನೀಡಿ 17ನೇ ಓವರ್‌ನಲ್ಲಿ ಮೋನಿಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಮಯಾಂಕ್ ಅಗರ್ವಾಲ್ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ ಭರ್ಜರಿ ಶತಕ ದಾಖಲಿಸಿದರು. ಶತಕದ ಬೆನ್ನಲ್ಲೇ ಮಯಾಂಕ್ (107) ಗೌತಮ್ ಮಿಶ್ರಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸೂರಜ್ ಅಹುಜಾ 10 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿ ಅಜೇಯ 35 ರನ್ ಗಳಿಸಿದರು. ಇದರಿಂದ ನಿಗದಿತ ಓವರ್‌ಗಳ ಅಂತ್ಯಕ್ಕೆ ತಂಡ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತ್ತು.
-
Watching @mayankcricket in full flow is pure bliss! 🔥👊#MWvKBB #IlliGeddavareRaja #MaharajaTrophy #KSCA #Karnataka pic.twitter.com/5xQGoDBnQN
— Maharaja Trophy T20 (@maharaja_t20) August 25, 2023 " class="align-text-top noRightClick twitterSection" data="
">Watching @mayankcricket in full flow is pure bliss! 🔥👊#MWvKBB #IlliGeddavareRaja #MaharajaTrophy #KSCA #Karnataka pic.twitter.com/5xQGoDBnQN
— Maharaja Trophy T20 (@maharaja_t20) August 25, 2023Watching @mayankcricket in full flow is pure bliss! 🔥👊#MWvKBB #IlliGeddavareRaja #MaharajaTrophy #KSCA #Karnataka pic.twitter.com/5xQGoDBnQN
— Maharaja Trophy T20 (@maharaja_t20) August 25, 2023
ಬೃಹತ್ ಗುರಿ ಪಡೆದ ಮೈಸೂರು ವಾರಿಯರ್ಸ್ ಸ್ಪೋಟಕ ಆರಂಭ ಪಡೆಯಿತು. ಆರಂಭಿಕರಾದ ಎಸ್.ಯು.ಕಾರ್ತಿಕ್ ಮತ್ತು ಆರ್.ಸಮರ್ಥ್ 29 ಎಸೆತಗಳಲ್ಲಿ 60 ರನ್‌ಗಳ ಜೊತೆಯಾಟವಾಡುವ ಮೂಲಕ ಭರವಸೆಯ ಆರಂಭ ನೀಡಿದರು. ಆದರೆ ಪವರ್‌ಪ್ಲೇನ ಕೊನೆಯ ಓವರ್ ಎಸೆದ ಎಲ್.ಆರ್.ಕುಮಾರ್ ಸಮರ್ಥ್ ವಿಕೆಟ್ ಪಡೆಯುವ ಮೂಲಕ ಬೆಂಗಳೂರಿಗೆ ಮೊದಲ ಯಶಸ್ಸು ತಂದುಕೊಟ್ಟರು. ಮತ್ತೊಂದೆಡೆ, ನಾಯಕ ಕರುಣ್ ನಾಯರ್ ಜೊತೆಗೂಡಿದ ಕಾರ್ತಿಕ್, 22 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಪಂದ್ಯಾವಳಿಯ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದರು.
ಈ ಹಂತದಲ್ಲಿ ದಾಳಿಗಿಳಿದ ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್, ಕಾರ್ತಿಕ್ (70) ಹಾಗೂ ಕರುಣ್ ನಾಯರ್ (34) ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ಮತ್ತೊಂದೆಡೆ ಸರ್ಫರಾಜ್ ಅಶ್ರಫ್, ಕೆ.ಎಸ್.ಲಂಕೇಶ್ (1), ಶಿವಕುಮಾರ್ ರಕ್ಷಿತ್ (6) ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯವನ್ನು ಬೆಂಗಳೂರು ಪರ ತಿರುಗಿಸಿದರು.
ಅಂತಿಮ 4 ಓವರ್‌ಗಳಲ್ಲಿ ಮೈಸೂರು ಗೆಲುವಿಗೆ 57 ರನ್‌ಗಳ ಅವಶ್ಯಕತೆಯಿತ್ತು. ಆದರೆ 18ನೇ ಓವರ್‌ನಲ್ಲಿ ಮನೋಜ್ ಭಾಂಡಗೆ (6) ಮತ್ತು ಜಗದೀಶ ಸುಚಿತ್ (19) ವಿಕೆಟ್ ಕೈಚೆಲ್ಲಿದರು. ಶೋಯೆಬ್ ಮ್ಯಾನೇಜರ್ (13) ರನೌಟಿಗೆ ಬಲಿಯಾದರು. ಅಂತಿಮವಾಗಿ, 202 ರನ್ ಗಳಿಸಲಷ್ಟೇ ಶಕ್ತವಾದ ಮೈಸೂರು 11 ರನ್‌ಗಳಿಂದ ಸೋಲು ಕಂಡಿತು.
ಸಂಕ್ಷಿಪ್ತ ಸ್ಕೋರ್ ವಿವರ: ಬೆಂಗಳೂರು ಬ್ಲಾಸ್ಟರ್ಸ್ - 212-4 (20) (ಮಯಾಂಕ್ ಅಗರ್ವಾಲ್ - 105, ಸೂರಜ್ ಅಹುಜಾ - 35*, ಜೆ.ಸುಚಿತ್ - 2/34-4, ಗೌತಮ್ ಮಿಶ್ರಾ - 1/32-4) ಮೈಸೂರು ವಾರಿಯರ್ಸ್ - 202-8 (20) (ಎಸ್.ಯು ಕಾರ್ತಿಕ್ - 70, ರವಿಕುಮಾರ್ ಸಮರ್ಥ್ - 35, ಮೊಹ್ಸಿನ್ ಖಾನ್ 4/35-4, ಸರ್ಫರಾಜ್ ಅಶ್ರಫ್ - 2/23-4) ಪಂದ್ಯ ಪುರುಷ - ಮಯಾಂಕ್ ಅಗರ್ವಾಲ್
ಇದನ್ನೂ ಓದಿ: ಮಹಾರಾಜ ಟ್ರೋಫಿ: ಸೋಲಿನ ಸರಪಳಿ ಕಳಚದ ಬೆಂಗಳೂರು ಬ್ಲಾಸ್ಟರ್ಸ್.. ಗುಲ್ಬರ್ಗಾ ಮಿಸ್ಟಿಕ್ಸ್ಗೆ ಸುಲಭದ ಜಯ