ETV Bharat / state

ಅಧಿಕೃತ ಸೇರ್ಪಡೆಗೆ ಮುನ್ನವೇ ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಮಧು ಬಂಗಾರಪ್ಪ! - Madhubangarappa to campaign for Congress

2 ವಿಧಾನಸಭೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಚಾರ ಮಾಡಲಿದ್ದಾರೆ.

Madhubangarappa
ಕಾಂಗ್ರೆಸ್ ಪರ ಪ್ರಚಾರಕ್ಕೆ ಮಧುಬಂಗಾರಪ್ಪ
author img

By

Published : Apr 8, 2021, 10:21 PM IST

ಬೆಂಗಳೂರು: ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿರುವ ಮಾಜಿ ಶಾಸಕ ಮಧು ಬಂಗಾರಪ್ಪ ನಾಳೆಯಿಂದ ಕಾಂಗ್ರೆಸ್ ಪರ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

ಮಾನಸಿಕವಾಗಿ ಕೆಲ ತಿಂಗಳ ಹಿಂದೆಯೇ ಜೆಡಿಎಸ್ ತೊರೆದಿರುವ ಮಧು ಬಂಗಾರಪ್ಪ, ತಾವು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ. ಕಳೆದ ತಿಂಗಳೇ ಶಿವಮೊಗ್ಗ ಜಿಲ್ಲೆಯಲ್ಲಿ ಸಮಾರಂಭ ನಡೆಸಿ ಕಾಂಗ್ರೆಸ್ ಸೇರ್ಪಡೆ ಆಗಬೇಕಿತ್ತು. ಆದರೆ ಇದುವರೆಗೂ ಮಧು ಅಧಿಕೃತವಾಗಿ ಸೇರ್ಪಡೆ ಆಗಿಲ್ಲ.

ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ತಾವು ಕಾಂಗ್ರೆಸ್ ಪಕ್ಷದ ಪರ ಇರುವುದಾಗಿಯೂ ಹಾಗೂ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಮಧು ಬಂಗಾರಪ್ಪ ಸೂಚನೆ ನೀಡಲಿದ್ದಾರೆ. ಏಪ್ರಿಲ್ 10ರಂದು ಬಸವಕಲ್ಯಾಣ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ (ಮಾಲಾ) ನಾರಾಯಣರಾವ್ ಪರ ಮತಯಾಚನೆ ಮಾಡಲಿದ್ದಾರೆ. ಬಸವಕಲ್ಯಾಣದಲ್ಲಿ ರೋಡ್ ಶೋ ನಡೆಸಲಿರುವ ಮಧು ಬಂಗಾರಪ್ಪ, ಏ. 11ರಂದು ಸತೀಶ್ ಜಾರಕಿಹೊಳಿ ಪರ ಬೆಳಗಾವಿಯಲ್ಲಿ ಕ್ಯಾಂಪೇನ್ ನಡೆಸಲಿದ್ದಾರೆ. ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವತ್ತು ಪ್ರಚಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದುವರೆಗೂ ದೊರಕಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.