ಬೆಂಗಳೂರು: ಮಂಗಳವಾರ ವಿಧಾನ ಪರಿಷತ್ ಸಭೆಯನ್ನು ಕರೆಯುವಂತೆ ಕೋರಿ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ವಿಧಾನ ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಈಗಾಗಲೇ ಸರ್ಕಾರವು ನಿಗದಿಪಡಿಸಿದ ಕಾರ್ಯಕಲಾಪಗಳ ಪಟ್ಟಿಯಂತೆ ಡಿಸೆಂಬರ್ 15ರವರೆಗೆ ವಿಧಾನ ಪರಿಷತ್ತಿನ ಸಭೆ ನಡೆಯಬೇಕಿದೆ. ವಿಧಾನ ಪರಿಷತ್ ಬಿಎಸಿಯಲ್ಲಿ ತೀರ್ಮಾನ ಆಗದ ಕಾರಣ, ಪರಿಷತ್ತಿನಲ್ಲಿ ಸಭಾಪತಿಗಳು ನಿರ್ಧಾರ ಕೈಗೊಳ್ಳಲು ಅಸಮ್ಮತಿ ಸೂಚಿಸಿದ್ದರಿಂದ ಸಭೆಯನ್ನು ಈ ಹಿಂದೆ ನಿಗದಿ ಮಾಡಿದಂತೆ ಡಿ.15ರವರೆಗೆ ಮುಂದುವರೆಸುವಂತೆ ಸರ್ಕಾರದಿಂದ ನಿರ್ದೇಶಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
![latter](https://etvbharatimages.akamaized.net/etvbharat/prod-images/kn-bng-06-councilsession-letter-script-7201951_11122020210149_1112f_1607700709_644.jpg)
ಗ್ರಾಮ ಸ್ವರಾಜ್ಯ ಕಾಂಗ್ರೆಸ್ ಕೂಸು, ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ
ಈಗಾಗಲೇ ಸದಸ್ಯರು ದೂರ ಹೋಗಿದ್ದಲ್ಲಿ ಡಿ.15ರ ಬೆಳಗ್ಗೆ 11 ಗಂಟೆಗೆ ಸಭೆ ಕರೆದು ನಿಯಮಾವಳಿಗಳಂತೆ ಸಭಾಪತಿಯವರ ವಿರುದ್ಧ ನೀಡಲಾದ ಅವಿಶ್ವಾಸ ನಿರ್ಣಯದ ಸೂಚನೆಯ ಕುರಿತು ಚರ್ಚಿಸಲು ಅನುಮತಿ ನೀಡಬೇಕು. ಇತರೆ ಸರ್ಕಾರಿ ಕಾರ್ಯಕಲಾಪಗಳು ನಡೆಯಬೇಕಾಗಿರುವುದರಿಂದ ಮಂಗಳವಾರದಂದು ವಿಧಾನ ಪರಿಷತ್ತಿನ ಸಭೆಯನ್ನು ಕರೆಯುವಂತೆ ಕೋರಲು ಸರ್ಕಾರದಿಂದ ನಿರ್ದೇಶಿತವಾಗಿದೆ ಎಂದು ತಿಳಿಸಿದ್ದಾರೆ.