ಆನೇಕಲ್: ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೌದ್ಧ ಧರ್ಮ ಧೀಕ್ಷಾ ದಿನದ ಪ್ರತಿಜ್ಞೆಯಾಗಿ ಮುಂದೆ ಈ ದೇಶದ ಮೂಲ ಧರ್ಮ ಬೌದ್ಧ ಧರ್ಮದತ್ತ ಮುಖ ಮಾಡಲಿ ಎಂದು ಚಿಂತಕ ಸಿ. ರಾವಣ ಕರೆ ನೀಡಿದರು.
ಆನೇಕಲ್ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಗ್ರಂಥಾಲಯದ ಮುಂದಿನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಧರ್ಮ ಪ್ರವರ್ತಕ ದಿನವನ್ನಾಗಿ ಆಚರಿಸುತ್ತಾ ಮಾತನಾಡಿದ ಅವರು ಭಾರತ ದೇಶದಲ್ಲಿ ಅಸಮಾನತೆ, ಜಾತಿ ನಿಂದನೆ, ದೌರ್ಜನ್ಯಗಳಿಂದ ಮುಕ್ತಗೊಳ್ಳಲು ಬೌದ್ಧ ಧರ್ಮವನ್ನು ಜನತೆ ಅಪ್ಪಿಕೊಳ್ಳಲಿ. ಸಮಾನತೆ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಪಂಚಶೀಲ ಹಾಗೂ ಅಷ್ಟಾಂಗಮಾರ್ಗ ಅನುಸರಿಸಲಿ ಎಂದು ನುಡಿದರು.
ಅಸಮಾನತೆಯಿಂದ ಸಮಾನತೆಯೆಡೆಗೆ ಸಾಗುವುದು, ನೆಮ್ಮದಿ ಜೀವನ ನಡೆಸಲು ಪ್ರಬುದ್ಧರಾಗುವುದು, ಆರ್ಥಿಕವಾಗಿ ಸಬಲೀಕರಣಗೊಳ್ಳುವುದು ಬೌದ್ಧ ಧರ್ಮದಲ್ಲಿ ಸಾಧ್ಯವಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಪಟಾಪಟ್ ನಾಗರಾಜ್ ಮಾತನಾಡಿದರು. ಪಂತಾಮ ತಂಡದವರು ಅಂಬೇಡ್ಕರ್ ಗೀತೆ, ಬುದ್ಧಗೀತೆ ಮತ್ತು ಕ್ರಾಂತಿ ಗೀತೆಗಳನ್ನು ಹಾಡಿದರು. ಅಮೂಲ್ಯ ಹೆಣ್ಣು ಮಗಳ ಹುಟ್ಟು ಹಬ್ಬವನ್ನು ಆಚರಿಸಿದರು.