ETV Bharat / state

ಯಲಹಂಕದಲ್ಲಿ 60 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು! - ಯಲಹಂಕ ತಾಲೂಕಿನಲ್ಲಿ ಜಮೀನು ತೆರವು

ಬೆಂಗಳೂರಿನ ಯಲಹಂಕ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಿ 30 ಎಕರೆ ಅನಧಿಕೃತ ಒತ್ತುವರಿ ಜಮೀನನ್ನು ತೆರವುಗೊಳಿಸಲಾಯ್ತು.

ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಚರಣೆ
author img

By

Published : Oct 12, 2019, 7:49 PM IST

ಬೆಂಗಳೂರು: ಯಲಹಂಕ ತಾಲೂಕಿನಲ್ಲಿ ಅನಧಿಕೃತ ಒತ್ತುವರಿ ಜಮೀನನ್ನು ತೆರವುಗೊಳಿಸುವ ಕಾರ್ಯಾಚರಣೆ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.

ತೆರವು ಕಾರ್ಯಾಚರಣೆಯಲ್ಲಿ ಒತ್ತುವರಿಯಾಗಿದ್ದ 60 ಕೋಟಿ ಮೌಲ್ಯದ 30 ಎಕರೆ ಸರ್ಕಾರಿ ಜಮೀನನ್ನು ಮತ್ತೆ ವಶಕ್ಕೆ ಪಡೆದುಕೊಳ್ಳಲಾಯ್ತು. ತಾಲೂಕಿನ ಬಾಗಲೂರು, ಉತ್ತನಹಳ್ಳಿ, ಬಿಲ್ಲಮಾರನಹಳ್ಳಿ ಮತ್ತು ಬೈಪನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನನ್ನು ತೆರವುಗೊಳಿಸಿದ ಜಮೀನಿನಲ್ಲಿ‌ ಜೆಸಿಬಿಯ ಸಹಾಯದಿಂದ ಸರ್ಕಾರಿ ಬೋರ್ಡ್ ಹಾಕಲಾಯ್ತು. ಕೆಲವು ರೈತರು ಮತ್ತು ಕೆಲ ಪ್ರಭಾವಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರಿಗೆ ನೋಟಿಸ್ ನೀಡಿ ಬಳಿಕ ವಶಪಡಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರರು ತಿಳಿಸಿದ್ರು. ಕೆಲವು ಲೇಔಟ್​ಗಳು ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿವೆ. ಆದ್ದರಿಂದ ಸರ್ಕಾರಿ ಜಮೀನನ್ನು ರಕ್ಷಣೆ ಮಾಡುವ ಮೂಲಕ ಒತ್ತುವರಿದಾರರಿಂದ ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆಯ ಎಸಿ ದಯಾನಂದ ಬಂಡಾರಿ ತಿಳಿಸಿದ್ರು.

ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ
ಇನ್ನು ಉತ್ತನಹಳ್ಳಿ ಬಳಿ ಅಕ್ರಮ ಲೇಔಟ್ ತೆರವು ವೇಳೆ ತಹಶೀಲ್ದಾರ್ ವಿರುದ್ಧ ಸ್ಥಳೀಯರು ಗಲಾಟೆ‌ ಮಾಡಿದ ಘಟನೆ ನಡೆಯಿತು. ತೆರವು ಮಾಡದಂತೆ ಕೆಲ ಸ್ಥಳೀಯರಿಂದ ವಿರೋಧ ವ್ಯಕ್ತವಾದರೂ ಸರ್ಕಾರಿ ಬೋರ್ಡ್ ಹಾಕಿ ವಿರೋಧದ ನಡುವೆಯೂ ಸುಮಾರು 60ರಿಂದ 70 ಕೋಟಿ ಮೌಲ್ಯದ ಜಮೀನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Intro:KN_BNG_01_12_Land_Ambarish_7203301
Slug: ಸರ್ಕಾರಿ ಜಮೀನು ಒತ್ತುವರಿ ಕಾರ್ಯಚರಣೆ
ಯಲಹಂಕ ತಾಲೂಕಿನ ಹಲವು ಕಡೆ ತೆರವು ಕಾರ್ಯಚರಣೆ
ತಾಸಿಲ್ದಾರರ ನೇತೃತ್ವದಲ್ಲಿ 60 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ

ಬೆಂಗಳೂರು: ಸರ್ಕಾರದ ಆದೇಶದ ಮೇರೆಗೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಗೊಳಿಸುವ ಕೆಲಸ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ತಾಶಿಲ್ದಾರರು ನಡೆಸುತ್ತಿದ್ದಾರೆ.. ಇದೇ ರೀತಿ ಯಲಹಂಕ ತಾಲೂಕಿನಲ್ಲಿ ಅನಧಿಕೃತ ಒತ್ತುವರಿ ಜಮೀನನ್ನು ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಯಿತು..

ಯಲಹಂಕ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಒತ್ತುವರಿಯಾಗಿದ್ದ 60 ಕೋಟಿ ಮೌಲ್ಯದ 30 ಎಕರೆ ಸರ್ಕಾರಿ ಜಮೀನನ್ನು ಮತ್ತೇ ವಶಕ್ಕೆ ಪಡೆದುಕೊಳ್ಳಲಾಯ್ತು..‌ ತಾಲೂಕಿನ ಬಾಗಲೂರು, ಉತ್ತನಹಳ್ಳಿ, ಬಿಲ್ಲಮಾರನಹಳ್ಳಿ ಮತ್ಯು ಬೈಪನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನನ್ನು ತೆರವುಗೊಳಿಸಿದ ತಾಸಿಲ್ದಾರರು ಜಮೀನಿನಲ್ಲಿ‌ ಜೆಸಿಬಿಯ ಸಹಾಯದಿಂದ ಸರ್ಕಾರಿ ಬೋರ್ಡ್ ಹಾಕಿದ್ರು.. ಅಲ್ಲದೇ ಇದೇ ರೀತಿ ಪ್ರತಿ ವಾರ ಕೂಡ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಚರಣೆ ಮಾಡಲಾಗುತ್ತದೆ..‌ ಯಾರೇ ಒತ್ತುವರಿ ಮಾಡಿಕೊಂಡರೂ ಅವರಿಂದ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ.. ಇದರಲ್ಲಿ ಕೆಲವು ರೈತರು ಮತ್ತು ಕೆಲ ಪ್ರಭಾವಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.. ಅವರಿಗೆ ನೋಟೀಸ್ ನೀಡಿ ಬಳಿಕ ವಶಕ್ಕೆ ಪಡದುಕೊಳ್ಳಲಾಗುವುದು ಎಂದು ತಾಸಿಲ್ದಾರ ರಘು ಮೂರ್ತಿ ಹೇಳಿದ್ರು..

ಬೈಟ್: ರಘು ಮೂರ್ತಿ, ಯಲಹಂಕ ತಾಸಿಲ್ದಾರರು

ಇನ್ನು ತಾಸಿಲ್ದಾರರ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಚರಣೆಯನ್ನು ಪರಿಶೀಲನೆ ನಡೆಸಲು ಬೆಂಗಳೂರು ನಗರ ಜಿಲ್ಲೆಯ ಎಸಿ ದಯನಂದ ಅವರು ಆಗಮಿಸಿದ್ರು.. ಈ ವೇಳೆ ಸರ್ಕಾರದ ಆದೇಶದ ಮೇರೆಗೆ ಒತ್ತುವರಿ ತೆರವು ಕಾರ್ಯಚರಣೆ ತಾಸಿಲ್ದಾರರ ನೇತೃತ್ವದಲ್ಲಿ ನಡೆಯುತ್ತಿದೆ.. ನಾನು ಅದನ್ನು ವೀಕ್ಷಣೆ ನಡೆಸಲು ಬಂದಿರುವೆ.. ಕೆಲವು ಲೇಔಟ್ ಗಳು ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿವೆ.. ಅದರಿಂದ ಸರ್ಕಾರಿ ಜಮೀನನ್ನು ರಕ್ಣಣೆ ಮಾಡುವ ಮೂಲಕ ಒತ್ತುವರಿದಾರರಿಂದ ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದರು..

ಬೈಟ್: ದಯನಂದ ಬಂದಲಿ, ಎಸಿ

ಇನ್ನು ಉತ್ತನಹಳ್ಳಿ ಬಳಿ ಅಕ್ರಮ ಲೇಔಟ್ ತೆರವು ವೇಳೆ, ತಹಶೀಲ್ದಾರ್ ವಿರುದ್ದ ಸ್ಥಳೀಯರು ಗಲಾಟೆ‌ ಮಾಡಿದ ಘಟನೆ ನಡೆಯಿತು.. ತೆರವು ಮಾಡದಂತೆ ಕೆಲ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ, ತೀವ್ರ ವಿರೋಧದ ನಡುವೆ ಸರ್ಕಾರಿ ಬೋರ್ಡ್ ಹಾಕಿ ವಶಕ್ಕೆ ಪಡೆದುಕೊಂಡರು.. ಒಟ್ಟಾರೆ ಯಲಹಂಕ ತಾಲೂಕಿನಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತಾಸಿಲ್ದಾರರ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಯಿತು.. ಕೆಲವರ ವಿರೋಧದ ನಡುವೆಯೂ ಸುಮಾರು 60 ರಿಂದ 70 ಕೋಟಿ ಮೌಲ್ಯದ ಜಮೀನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ..

Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.