ಬೆಂಗಳೂರು: ಕರ್ನಾಟಕದ ಪ್ರೀಮಿಯರ್ ಲೀಗ್ನಲ್ಲಿ (ಕೆಪಿಎಲ್) ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಈ ಸಂಬಂಧ ಪ್ರಕರಣದ ಮೂರನೇ ಆರೋಪಿ ಹಿಡಿಯಲು ವಿಶೇಷ ತಂಡ ದೆಹಲಿಗೆ ತೆರಳಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಬೆಳಗಾವಿ ಪ್ಯಾಂಥರ್ಸ್ ತಂಡ ಮಾಲೀಕ ಅಸ್ಪಕ್ ಅಲಿ ತಾರ್ ಹಾಗೂ ರಾಜಸ್ಥಾನ ಮೂಲದ ಬುಕ್ಕಿ ಭುವೇಶ್ ಬಾಫ್ನಾ ಬಂಧಿಸಿ ಇವರು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಸನ್ಯಾಮ್ ಎಂಬಾತನ ದೆಹಲಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಅರೆಸ್ಟ್ ಮಾಡಲು ಸಿಸಿಬಿ ಪೊಲೀಸರು ದೆಹಲಿಗೆ ದೌಡಾಯಿಸಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಕೆಪಿಎಲ್ ಟೂರ್ನಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.