ಬೆಂಗಳೂರು: ರಾಜ್ಯದ ಮೇಲೆ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ಮಾತಿಗೆ ಸಂಪೂರ್ಣ ಸಹಮತವಿದೆ. ಕೇಂದ್ರ ತ್ರಿಭಾಷಾ ಸೂತ್ರದ ಮೂಲಕ ಕನ್ನಡಿಗರ ಮೇಲೆ ಬಲವಂತದ ಹಿಂದಿ ಏರಿಕೆ ಮಾಡುತ್ತಿರುವುದು ಖಂಡನೀಯ. ದೆಹಲಿ ಹುಕುಂ ಪಾಲಿಸಲು ಶಿರ ಬಾಗಿಸಿ ನಿಂತಿರುವ ರಾಜ್ಯ ಸರ್ಕಾರ ತ್ರಿಭಾಷಾ ಸೂತ್ರದ ಬಗ್ಗೆ ಸೊಲ್ಲೆತ್ತದೆ ಇರುವುದು ರಾಜ್ಯಕ್ಕೆ ಮಾಡುತ್ತಿರುವ ದ್ರೋಹ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಅವರು, ಇದೀಗ ಎಐಸಿಸಿ ಇಂದ ತಮಿಳುನಾಡು, ಗೋವಾ ಹಾಗೂ ಪುದುಚೇರಿ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡ ನಂತರ ತಮ್ಮ ವಾಗ್ದಾನವನ್ನು ಇನ್ನಷ್ಟು ಪ್ರಖರವಾಗಿ ಮುಂದುವರಿಸಿದ್ದಾರೆ.