ETV Bharat / state

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಚಿಂತನೆ: ಸಿಎಂ ಬೊಮ್ಮಾಯಿ‌ - implementation of uniform civil code

ಏಕರೂಪ ನಾಗರಿಕ ಸಂಹಿತೆ (ಯೂನಿಫಾರ್ಮ್ ಸಿವಿಲ್‌ ಕೋಡ್‌) ಜಾರಿಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Nov 26, 2022, 12:50 PM IST

ಬೆಂಗಳೂರು: ಏಕರೂಪ ನಾಗರಿಕ ಸಂಹಿತೆಯ ಜಾರಿಯ ಅಗತ್ಯ ಇದೆ. ಈ ಬಗ್ಗೆ ನಾವು ಗಂಭೀರ ಚಿಂತನೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸ್ಪಷ್ಟಪಡಿಸಿದರು.

ವಿಧಾನಸೌಧದ ಎದುರು ಇರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಕೇಂದ್ರದ ಬಿಜೆಪಿಯ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇದರ ಜಾರಿ ಬಗ್ಗೆ ಸಮಿತಿ ರಚಿಸಲಾಗಿದೆ. ಏಕರೂಪ ನಾಗರಿಕ ಸಂಹಿತೆಯ ಎಲ್ಲ ಆಯಾಮಗಳನ್ನೂ ಅಧ್ಯಯನ‌ ಮಾಡುತ್ತೇವೆ. ನಂತರ ಇದರ ಬಗ್ಗೆ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.

ಎರಡೂ ರಾಜ್ಯಗಳು ಸೌಹಾರ್ದತೆ ಕಾಪಾಡಬೇಕು: ಕರ್ನಾಟಕದ ಬಸ್​​ಗಳಿಗೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನಾನು ಈಗಾಗಲೇ‌ ಮಹಾರಾಷ್ಟ್ರ ಸರ್ಕಾರದ ಜತೆ ಮಾತಾಡಿದ್ದೇನೆ. ಇಂದು ಗೃಹ ಸಚಿವರು ಮತ್ತು ಡಿಜಿ‌ ಐಜಿಪಿ ಅಲ್ಲಿನವರ ಜತೆ ಮಾತನಾಡುತ್ತಾರೆ. ನಮ್ಮ ಬಸ್​​ಗಳಿಗೆ ಯಾವುದೇ ಹಾನಿ ಮಾಡಬಾರದು ಎಂದು ತಿಳಿಸಿದ್ದೇವೆ. ಎರಡೂ ರಾಜ್ಯಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡಲು ಹೇಳಿದ್ದೇವೆ ಎಂದರು.

ಮುಕ್ತ ತನಿಖೆಗೆ ಸರ್ಕಾರ ಮುಕ್ತ: ಚಿಲುಮೆ ಪ್ರಕರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಿಚಾರವಾಗಿ ಮಾತನಾಡಿದ ಸಿಎಂ, ಪ್ರಕರಣದ ಮುಕ್ತ ತನಿಖೆ ಮಾಡಿಸಲು ಸರ್ಕಾರ ಮುಕ್ತವಾಗಿದೆ. ಹೀಗಾಗಿಯೇ ನಾವು ತನಿಖೆಗೆ ಕೊಟ್ಟಿರುವುದು. ಹಲವಾರು ಜನರ ಬಂಧನ ಕೂಡ ಆಗಿದೆ. ಚುನಾವಣಾ ಆಯೋಗದ ತನಿಖೆಯನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು. ಅಧಿಕಾರಿಗಳ ವಿರುದ್ಧ ತಪ್ಪು ಸಾಬೀತಾದರೆ ಕ್ರಮ ತೆಗೆದುಕ್ಕೊಳ್ಳುತ್ತೇವೆ. ಚುನಾವಣಾ ಆಯೋಗ ರದ್ದಾದ ವೋಟರ್ ಕಾರ್ಡ್​ಗಳ ಪರಿಷ್ಕರಣೆ ಮಾಡುತ್ತಿದೆ. ಅನ್ಯಾಯವಾಗಿ ರದ್ದಾಗಿದ್ದರೆ, ಸರಿಪಡಿಸಲಾಗುತ್ತದೆ. ಎರಡು ಕಡೆ ವೋಟರ್ ಕಾರ್ಡ್ ಇದ್ದರೆ ರದ್ದು ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.

ಬೆಳಗಾವಿ ಅಧಿವೇಶನ ವೇಳೆ ಪ್ರತಿಮೆಗೆ ಅಡಿಗಲ್ಲು: ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು‌ ಕಿತ್ತೂರು ಚೆನ್ನಮ್ಮ ಪ್ರತಿಮೆಗಳ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಈಗಾಗಲೇ ಈ ಸಂಬಂಧ ಆದೇಶ ಕೊಟ್ಟಿದ್ದೇವೆ. ಅಧಿವೇಶನದ ಸಂದರ್ಭದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತೇವೆ ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಗುಜರಾತ್​ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.