ಬೆಂಗಳೂರು: ಏರೋಸ್ಪೇಸ್ ತಂತ್ರಜ್ಞಾನಕ್ಕೆ ಬೆಂಗಳೂರಿನಲ್ಲಿ ವಿಪುಲ ಅವಕಾಶಗಳಿದ್ದು, ಲಾಕ್ ಹೀಡ್ ಮಾರ್ಟಿನ್(ockheed Martin) ಸಂಸ್ಥೆ ತನ್ನ ಅಸ್ತಿತ್ವವನ್ನು ಹೊಂದಲು ಅಗತ್ಯವಾದ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಯ ಅಂತಾರಾಷ್ಟ್ರೀಯ ಸರಬರಾಜು ಸರಪಳಿ ಮತ್ತು ಕೈಗಾರಿಕಾ ಅಭಿವೃದ್ಧಿ ಉಪಾಧ್ಯಕ್ಷ ವಿನ್ಸೆಂಟ್ ಪ್ಯಾನ್ಜೆರಾ( Vincent Panzera) ಭೇಟಿ ನೀಡಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು,ವಿಶ್ವದಲ್ಲಿಯೇ 6 ನೇ ಸ್ಥಾನವನ್ನು ಹೊಂದಿದೆ. ಕರ್ನಾಟಕ ಮತ್ತು ಬೆಂಗಳೂರು ಭವಿಷ್ಯದ ತಂತ್ರಜ್ಞಾನದ ಶಕ್ತಿಕೇಂದ್ರಗಳು ಎಂದರು.
ಲಾಕ್ ಹೀಡ್ ಮಾರ್ಟಿನ್ ಕಂಪನಿ ಜಗತ್ತಿನ ಪ್ರಮುಖ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾಗಿದೆ. ಏರೋಸ್ಪೇಸ್ ಅವಕಾಶಗಳು ಬೆಂಗಳೂರಿನಲ್ಲಿ ಹೆಚ್ಚಿವೆ. ರಾಜ್ಯ ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿ ಹಾಗೂ ಪ್ರೋತ್ಸಾಹಕಗಳಿಂದಾಗಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವನ್ನು ಹೊಂದಿರುವುದಾಗಿ ತಿಳಿಸಿದರು.
ಐ.ಟಿ.ಬಿ.ಟಿ.ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನು ಓದಿ:ಸಾರಿಗೆ ನಿಗಮಗಳು, ಎಸ್ಕಾಂಗಳನ್ನು ಪುನಶ್ಚೇತನಗೊಳಿಸುತ್ತೇವೆ : ಸಿಎಂ ಬೊಮ್ಮಾಯಿ