ಬೆಂಗಳೂರು : ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಮಾನ್ಯ ಪೊಲೀಸ್ ಆಯುಕ್ತ ಕಮಲ್ ಪಂಥ್ ತಮ್ಮ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಿ ಭೇಷ್ ಅಂದಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಛಾಪಾ ಕಾಗದ ತಯಾರಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದವರನ್ನು ಕೇಂದ್ರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಎಸಿಪಿ ಶ್ರೀಮತಿ ನಜ್ಮಾ ಫಾರೂಕಿ ಹಾಗೂ ಇನ್ಸ್ಪೆಕ್ಟರ್ ಶ್ರೀ ಮಿರ್ಜಾ ಅಲಲಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಇವರ ಕಾರ್ಯವನ್ನು ಮೆಚ್ಚಿ 50000 ನಗದನ್ನು ನೀಡಿದ್ದಾರೆ.
ಅಲ್ಲದೆ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಬಳಿ ನಾಲ್ಕು ವರ್ಷದ ಬಾಲಕಿಯನ್ನು ಕದ್ದೊಯ್ದು ಅತ್ಯಾಚಾರ ಎಸೆಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಶ್ರೀರಾಂಪುರ ಇನ್ಸ್ಪೆಕ್ಟರ್ ಸುನೀಲ್ ನಾಯಕ್ ಮತ್ತು ತಂಡಕ್ಕೆ ಒಂದು ಲಕ್ಷ ಬಹುಮಾನ ನೀಡಿ ಸಿಬ್ಬಂದಿ ಕಾರ್ಯ ಮೆಚ್ವಿದ್ದಾರೆ.