ETV Bharat / state

ಯಡಿಯೂರಪ್ಪನವರೇ ಇದೇನಾ ನಿಮ್ಮ ಪಕ್ಷದ ಸಂಸ್ಕೃತಿ?: ಜೆಡಿಎಸ್​​​​​ ಎಂಎಲ್​ಸಿ ಶರವಣ ಪ್ರಶ್ನೆ - ಗಿರೀಶ್ ಕೆ. ನಾಶಿ ಅವರು ಬುದ್ದಿವಂತರು, ಪ್ರಾಮಾಣಿಕರು ಎಂದ ಶರವಣ

ಜೆಡಿಎಸ್ ಅಭ್ಯರ್ಥಿ ಡಾ. ಗಿರೀಶ್ ಕೆ. ನಾಶಿ ಅವರ ಮೇಲೆ ಸಿಎಂ ಬಿಎಸ್​ವೈ ಮಾಡಿರುವ ಟೀಕೆಗಳನ್ನು ಖಂಡಿಸಿ ಜೆಡಿಎಸ್ ಎಂಎಲ್​ಸಿ ಶರವಣ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಶರವಣ
ಶರವಣ
author img

By

Published : Nov 27, 2019, 8:03 PM IST

ಬೆಂಗಳೂರು: ಜೆಡಿಎಸ್ ಅಭ್ಯರ್ಥಿಯನ್ನು ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಯಡಿಯೂರಪ್ಪನವರೇ ನಿಮ್ಮ ಪಕ್ಷದ ಸಂಸ್ಕೃತಿ ಇದೇನಾ ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಮ್ಮ ಅಭ್ಯರ್ಥಿ ಡಾ. ಗಿರೀಶ್ ಕೆ. ನಾಶಿ ಅವರು ಬುದ್ಧಿವಂತರು, ಪ್ರಾಮಾಣಿಕರು. ಹಾಗಾಗಿ ಅವರನ್ನು ಪಕ್ಷದ ವತಿಯಿಂದ ಆಯ್ಕೆ ಮಾಡಿದ್ದಾರೆ. ಇನ್ನು ನಿಮ್ಮ ಜಾತಿಯವರೇ ಆದ ಅವರನ್ನು ಈ ರೀತಿಯಲ್ಲಿ ನಿಂದನೆ ಮಾಡುತ್ತಿರುವುದು ಸರಿನಾ ಎಂದು ಪ್ರಶ್ನಿಸಿದರು.

ಜೆಡಿಎಸ್ ಎಂಎಲ್​ಸಿ ಶರವಣ

ಪೊಲೀಸರ ಮುಂದೆಯೇ ನಮ್ಮ ಅಭ್ಯರ್ಥಿಯನ್ನು ಜಾತಿ ನಿಂದನೆ ಮಾಡಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆಯೋಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Intro:ಬೆಂಗಳೂರು : ಜೆಡಿಎಸ್ ಅಭ್ಯರ್ಥಿಯನ್ನು ಜಾತಿ ಹೆಸರಿನಲ್ಲಿ ನಿಂದಿಸಿರುವ ಕುರಿತು ಕಿಡಿಕಾರಿರುವ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಯಡಿಯೂರಪ್ಪನವರೇ ನಿಮ್ಮ ಪಕ್ಷದ ಸಂಸ್ಕೃತಿ ಇದೇನಾ? ಎಂದು ಪ್ರಶ್ನಿಸಿದ್ದಾರೆ.Body:ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ನಮ್ಮ ಅಭ್ಯರ್ಥಿ ಡಾ, ಗಿರೀಶ್ ಕೆ. ಸಾಶಿ ಅವರು ಬುದ್ದಿವಂತರಿದ್ದಾರೆ, ಸಜ್ಜನರಿದ್ದಾರೆ. ಅದಕ್ಕೆ ಅವರನ್ನು ಪಕ್ಷದ ವತಿಯಿಂದ ಆಯ್ಕೆ ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಅವರೇ ಗಿರೀಶ್ ನಾಶಿ ಅವರು ನಿಮ್ಮ ಜಾತಿಯವರೆ, ಅವರನ್ನು ಈ ರೀತಿಯಲ್ಲಿ ನಿಂದನೆ ಮಾಡುತ್ತಿರುವುದು ಸರಿನಾ?. ಮಹಾರಾಷ್ಟ್ರದಲ್ಲಿ ಆದ ಪ್ರಕರಣಕ್ಕೆ ಇಲ್ಲಿ ಇವರು ಈ ರೀತಿಯಲ್ಲಿ ಮಾಡುತ್ತಿದ್ದಾರೆಯೇ? ಎಂದು ಟೀಕಿಸಿದರು.
ಪೋಲಿಸರ ಮುಂದೆನೇ ನಮ್ಮ ಅಭ್ಯರ್ಥಿಯನ್ನು ಜಾತಿ ನಿಂದನೆ ಮಾಡಲಾಗಿದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆಯೋಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ತತ್ವ ಸಿದ್ಧಾಂತಗಳಿಗೆ ಹೊಂದಿಕೊಳ್ಳುವ ವ್ಯಕ್ತಿಯನ್ನು ನಾವು ಆಯ್ಕೆ ಮಾಡಿದ್ದೇವೆ. ಇವರನ್ನು ನಿಂದಿಸುವ ಕೆಲಸಕ್ಕೆ ಬಿಜೆಪಿಯವರು ಕೈಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.