ETV Bharat / state

ನೈಸ್ ಸಂಬಂಧ ಸದನ ಸಮಿತಿ ವರದಿ ಮಂಡನೆಗೆ ಪರಿಷತ್ ಜೆಡಿಎಸ್ ಸದಸ್ಯರ ಒತ್ತಾಯ

ನೈಸ್ ಸಂಸ್ಥೆಯ ಹೊರ ವರ್ತುಲ ರಸ್ತೆ ಮೊದಲ ಎಂಟು ವರ್ಷದಲ್ಲಿ ಸಿಮೆಂಟ್ ರಸ್ತೆ ಮಾಡಬೇಕಿತ್ತು. 2008ರಿಂದಲೂ ಟೋಲ್ ಸಂಗ್ರಹಿಸಲಾಗುತ್ತಿದೆ. 2021ರಲ್ಲಿ ವೈಟ್ ಟ್ಯಾಪಿಂಗ್ ಮಾಡಲಾಗಿದೆ. ಗುಣಮಟ್ಟ ಸೇರಿದಂತೆ ಯಾವುದೇ ಮಾಹಿತಿ ಇಲ್ಲ..

ವಿಧಾನ ಪರಿಷತ್
ವಿಧಾನ ಪರಿಷತ್
author img

By

Published : Mar 22, 2022, 7:27 PM IST

ಬೆಂಗಳೂರು : ವಿಧಾನ ಪರಿಷತ್​​ನಲ್ಲಿ ನೈಸ್ ರಸ್ತೆ ವಿಚಾರ ಮತ್ತೊಮ್ಮೆ ಪ್ರಸ್ತಾಪವಾಯಿತು. ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯ ಸರ್ಕಾರದ ಅನುದಾನ ನೀಡದ ಯೋಜನೆ ಇದಾಗಿದೆ. ಪರ್ಯಾಯವಾಗಿ ಐದು ಕಡೆ ಟೌನ್‍ಶಿಪ್ ನಿರ್ಮಾಣಕ್ಕೆ ಸರ್ಕಾರ ಭೂಮಿ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗುತ್ತದೆ.

20,193 ಎಕರೆ ಭೂಮಿ ಬೇಕಿತ್ತು. 6,999 ಎಕರೆ ಸೇವಾ ರಸ್ತೆ ನಿರ್ಮಿಸಲು ಬೇಕು ಎನ್ನಲಾಗುತ್ತಿದೆ. ಒಟ್ಟಾರೆ ಯೋಜನೆಗೆ 20 ಸಾವಿರ ಎಕರೆ ಭೂಮಿ ಬೇಕು ಎನ್ನಲಾಗುತ್ತಿದೆ. ಸೋಮಶೇಖರ್ ರೆಡ್ಡಿ ಎಂಬುವರು ಅನಗತ್ಯವಾಗಿ ಹೆಚ್ಚುವರಿ ಭೂಮಿ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸುತ್ತಾರೆ. ಸರಿಸುಮಾರು 9 ಸಾವಿರ ಎಕರೆ ಹೆಚ್ಚುವರಿ ಭೂಮಿ ನೀಡಲಾಗಿದೆ ಎಂಬ ಮಾಹಿತಿ ಬರುತ್ತದೆ.

ಇದರ ವಿಚಾರ ಹೈಕೋರ್ಟ್ ಮೆಟ್ಟಿಲೇರುತ್ತದೆ. ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡುತ್ತದೆ. ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗುತ್ತದೆ. ಪ್ರತಿಯಾಗಿ ನೈಸ್ ಸಂಸ್ಥೆ ಸುಪ್ರೀಂ ಮೊರೆ ಹೋಗುತ್ತದೆ. 15 ವರ್ಷ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ನಂತರ ಸುಪ್ರೀಂ ಅರ್ಜಿ ತಿರಸ್ಕರಿಸುತ್ತದೆ ಎಂಬ ವಿವರ ನೀಡಿದರು.

ಈ ವಿಚಾರವಾಗಿ ಸದನ ಸಮಿತಿ ರಚನೆಯಾಗಿ ಎರಡು ವರ್ಷ ವಿಚಾರಣೆ ನಡೆಯಿತು. ನೈಸ್ ಸಂಸ್ಥೆಯ ಹೊರ ವರ್ತುಲ ರಸ್ತೆ ಮೊದಲ ಎಂಟು ವರ್ಷದಲ್ಲಿ ಸಿಮೆಂಟ್ ರಸ್ತೆ ಮಾಡಬೇಕಿತ್ತು. 2008ರಿಂದಲೂ ಟೋಲ್ ಸಂಗ್ರಹಿಸಲಾಗುತ್ತಿದೆ. 2021ರಲ್ಲಿ ವೈಟ್ ಟ್ಯಾಪಿಂಗ್ ಮಾಡಲಾಗಿದೆ. ಗುಣಮಟ್ಟ ಸೇರಿ ಯಾವುದೇ ಮಾಹಿತಿ ಇಲ್ಲ.

ನಿತ್ಯ 10 ಸಾವಿರಕ್ಕೂ ಹೆಚ್ಚು ವಾಹನ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕಂಪನಿ ಕಾಂಕ್ರೀಟ್ ರಸ್ತೆ ಮಾಡಿಲ್ಲ. ಆದರೆ, ಅದೇ ಆಧಾರದ ಮೇಲೆ ಎರಡು ವರ್ಷಕ್ಕೆ ಒಮ್ಮೆ ಟೋಲ್ ಮೊತ್ತ ಹೆಚ್ಚಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಕಳೆದ ವರ್ಷ ಒಂದು ನೋಟಿಸ್ ನೀಡಿದೆ. ಸಾಕಷ್ಟು ಗೊಂದಲ, ವಂಚನೆಗಳು ಆಗಿದ್ದು, ಈ ಬಗ್ಗೆ ಸ್ಪಷ್ಟನೆ ಬೇಕಿದೆ ಎಂದರು.

ಭೋಜೇಗೌಡರು ಮಾತನಾಡಿ, ನೈಸ್ ಕತೆ ಹಾರುವ ಮಗನಿಗೆ ಏಣಿ ಹಾಕಿಕೊಟ್ಟ ಹಾಗಾಗಿದೆ. ಮೊದಲೇ ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಂಸ್ಥೆಗೆ ಏಜೆನ್ಸಿಗಳು ಅವಕಾಶ ಮಾಡಿಕೊಟ್ಟಿವೆ. ಇಲ್ಲಿ ಸರ್ಕಾರವೇ ಭಾಗಿ ಆಗಿದೆ ಎಂದು ಆರೋಪಿಸಿಲ್ಲ. 2020ರಲ್ಲಿ ಸುಪ್ರೀಂ ಆದೇಶ ಬಂದ ನಂತರ ಒಂದು ಪ್ರೇಮ್​ವರ್ಕ್ ನಡೆಯುತ್ತಿದೆ. ಯಾವುದೇ ಕಾಮಗಾರಿ ನಿರ್ಧಾರಕ್ಕೂ ಎಂಒಯು ಆಗಬೇಕು. ಅದಕ್ಕೆ ಸೂಕ್ತ ಮಾರ್ಗಸೂಚಿ ಅನುಸರಿಸಬೇಕು.

ಸರ್ಕಾರಿ-ಖಾಸಗಿ ಜಮೀನನ್ನು ಸರ್ಕಾರವೇ ನೀಡಿದೆ. 30 ವರ್ಷ ಲೀಸ್ ಒಪ್ಪಂದ ಅನ್ವಯ. 10 ಸಾವಿರ ಎಕರೆ ಭೂಮಿ ಈ ಯೋಜನೆ ವ್ಯಾಪ್ತಿಗೇ ಬಂದಿಲ್ಲ. ಸರ್ಕಾರ ಇಷ್ಟು ಭೂಮಿಯನ್ನ ಹೇಗೆ ನೀಡಿತು?. ವಿವಿಧ ನ್ಯಾಯಾಲಯದಲ್ಲಿ ನೂರಾರು ಪ್ರಕರಣಗಳಿದ್ದು, ಇತ್ಯರ್ಥವಾಗಿವೆ. ಇದ್ರಿಂದ ಇಷ್ಟು ದಿನ ಮಾತನಾಡಲಾಗದ ವಿಚಾರ ಪ್ರಸ್ತಾಪಿಸಿದ್ದೇನೆ. ಈವರೆಗಿನ ಸರ್ಕಾರ ಕ್ರಮಕೈಗೊಳ್ಳಲು ಕಾನೂನು ತೊಡಕಿತ್ತು, ಈಗಿಲ್ಲ.

ಪ್ರತಿದಿನ ಕೋಟ್ಯಂತರ ರೂ. ಮೊತ್ತ ಟೋಲ್ ಸಂಗ್ರಹಿಸಲಾಗುತ್ತದೆ. ಅಗತ್ಯ ಮೂಲಸೌಕರ್ಯ ಯಾವುದೂ ಆಗಿಲ್ಲ. ಆದಾಯ ಹೆಚ್ಚಿಸಿಕೊಳ್ಳುವ ನೈಸ್‌ನಿಂದಾಗಿ ಸರ್ಕಾರಕ್ಕೆ ಏನು ಸಿಕ್ಕಿದೆ. ಸರ್ಕಾರದ ಎಲ್ಲಾ ಸವಲತ್ತು, ಅನುಕೂಲವನ್ನು ಒಂದು ಸಂಸ್ಥೆ ಮುಖ್ಯಸ್ಥ ಅನುಭವಿಸುತ್ತಿದ್ದಾನೆ. ದೇಶದ ಮೊದಲ ಕಾರಿಡಾರ್ ಯೋಜನೆ ಇದಾಗಿದೆ. ದೇವೇಗೌಡರು ಪ್ರಧಾನಿ, ಜೆ ಹೆಚ್ ಪಟೇಲ್ ಸಿಎಂ ಆಗಿದ್ದಾಗ ಇದರ ಯೋಜನಾ ಎಂಒಯು ಆಗಿದೆ.

ಈ ಯೋಜನೆಯಲ್ಲಿ ದೇವೇಗೌಡರಿಂದ ಯಾವುದೇ ಅಕ್ರಮ ಆಗಿಲ್ಲ. ಅಂದಿನ ಎಂಒಯು ಮೂಲಕ ನಡೆದಿಲ್ಲ ಎಂಬುದಕ್ಕೆ ಇಂದಿಗೂ ವಿವಿಧ ರೂಪದ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ನೀಡಿರುವ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳು ಹತ್ತು ದಿನದೊಳಗೆ ತಂದೊಪ್ಪಿಸಬೇಕೆಂದು ಒತ್ತಾಯಿಸಿದರು. ಈ ವಿಚಾರವಾಗಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಸಹ ನಾಳೆ ಮಾತನಾಡಲಿದ್ದಾರೆ.

ಇದಾದ ಬಳಿಕವೇ ಸಚಿವದ್ವಯರಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್ ಚರ್ಚಿಸಿ ಜೆಡಿಎಸ್ ಸದಸ್ಯರ ಪ್ರಸ್ತಾಪಕ್ಕೆ ಉತ್ತರ ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.