ETV Bharat / state

ಪ್ರಚಾರದಿಂದ ದೂರ ಉಳಿದ ಸಾಹುಕಾರ್ ಕುಟುಂಬ: ಬೆಂಬಲಿಗರ ಮೂಲಕ ಮತ ಯಾಚನೆ..!

author img

By

Published : Apr 6, 2021, 9:02 PM IST

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಜಾರಕಿಹೊಳಿ ಸಹೋದರರು ನೇರವಾಗಿ ಪ್ರಚಾರದ ಕಣಕ್ಕಿಳಿಯುತ್ತಿಲ್ಲ. ಜಾರಕಿಹೊಳಿ ಕುಟುಂಬದ ಅನುಪಸ್ಥಿತಿ ಕಾಡದಂತೆ ಬೆಂಬಲಿಗರ ಪಡೆ ಮೂಲಕ ತೆರೆ ಮರೆಯ ಕಾರ್ಯತಂತ್ರದಲ್ಲಿ ಜಾರಕಿಹೊಳಿ ಸಹೋದರರು ನಿರತರಾಗಿದ್ದಾರೆ.

ಸಾಹುಕಾರ್
ಸಾಹುಕಾರ್

ಬೆಂಗಳೂರು: ಬೆಳಗಾವಿ ಉಪ‌ ಚುನಾವಣಾ ಪ್ರಚಾರ ಕಣದಲ್ಲಿ ಬಿಜೆಪಿ ಪರ ಜಾರಕಿಹೊಳಿ ಕುಟುಂಬ ನೇರವಾಗಿ ಪ್ರಚಾರದ ಕಣಕ್ಕಿಳಿಯುತ್ತಿಲ್ಲ,‌ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಶಾಸಕ ರಮೇಶ್ ಜಾರಕಿಹೊಳಿ ತೆರೆ ಮರೆಯಲ್ಲೇ ಬೆಂಬಲಿಗರ ಮೂಲಕ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಹೌದು, ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ಶಾಸಕ ರಮೇಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಉಪ ಚುನಾವಣಾ ಪ್ರಚಾರ ಕಣದಿಂದ ಹೊರಗುಳಿದಿದ್ದಾರೆ. ಸದ್ಯ ಕೋವಿಡ್ ಪಾಸಿಟಿವ್​ನಿಂದ ರಮೇಶ್​ ಜಾರಕಿಹೊಳಿ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ನಿಂದ ಗುಣಮುಖರಾಗಿ ಹೊರಬಂದರೂ ಕ್ವಾರಂಟೈನ್ ನಿಯಮಾವಳಿ, ಎಸ್ಐಟಿ ವಿಚಾರಣೆ ಸಾಧ್ಯತೆಯಿಂದಾಗಿ ಉಪ ಸಮರದ ಪ್ರಚಾರ ಕಣದಿಂದ ಬಹುತೇಕ ಹೊರಗುಳಿದಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ಸಹೋದರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಬೆಳಗಾವಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಕುರಿತು ಉತ್ಸಾಹ ತೋರಿಲ್ಲ. ಸಹೋದರನನ್ನು ಸಿಡಿ ಸುಳಿಯಿಂದ‌ ಹೊರತರಲು ಹಗಲಿರುಳಿ ಶ್ರಮಿಸುತ್ತಿದ್ದಾರೆ. ಖಾಸಗಿ ಗುಪ್ತಚರ ಸಂಸ್ಥೆಯ ಸಹಕಾರದೊಂದಿಗೆ ರಮೇಶ್ ಜಾರಕಿಹೊಳಿ ವಿರುದ್ಧ ನಡೆದ ಷಡ್ಯಂತ್ರದ ಸಾಕ್ಷಿಗಳ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ರಾಜಕೀಯಕ್ಕಿಂತಲೂ ನಮಗೆ ಕುಟುಂಬದ ಮರ್ಯಾದೆ ಮುಖ್ಯ ಎಂದಿರುವ ಬಾಲಚಂದ್ರ ಜಾರಕಿಹೊಳಿ ಪಕ್ಷದ ಜೊತೆಯೂ ಅಷ್ಟಾಗಿ ಕಾಣಿಸಿಕೊಳ್ಳದೇ ಸಿಡಿ ಷಡ್ಯಂತ್ರದ ಸಾಕ್ಷಿಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಲಚಂದ್ರ ಜಾರಕಿಹೊಳಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ, ಒಂದು ವೇಳೆ ತೀವ್ರ ಒತ್ತಡ ಹೇರಿದಲ್ಲಿ ಮಾತ್ರ ಪ್ರಚಾರ ಕಾರ್ಯದಲ್ಲಿ ನೇರವಾಗಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ ಆದರೆ, ಆ ಸಾಧ್ಯತೆ ಕಂಡುಬರುತ್ತಿಲ್ಲ.

ಜಾರಕಿಹೊಳಿ ಕುಟುಂಬದ ವರ್ಚಸ್ಸಿನ ಲಾಭಕ್ಕೆ ಯತ್ನ: ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವರ್ಚಸ್ಸು ದೊಡ್ಡ ಮಟ್ಟದಲ್ಲಿದೆ. ಕಾಂಗ್ರೆಸ್​ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿರುವ ಹಿನ್ನಲೆ ಬಿಜೆಪಿ ಪರ ಜಾರಕಿಹೊಳಿ ಕುಟುಂಬದ ಪ್ರಚಾರ ಮುಖ್ಯವಾಗಲಿದೆ. ಆದರೆ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಲಭ್ಯರಾಗದ ಹಿನ್ನಲೆ ಲಖನ್ ಜಾರಕಿಹೊಳಿಗೆ ಬಿಜೆಪಿ ಗಾಳ ಹಾಕಿದೆ. ಸದ್ಯ ಕಾಂಗ್ರೆಸ್​ನಲ್ಲಿರುವ ಲಖನ್ ಜಾರಕಿಹೊಳಿಯನ್ನು ಈಗಾಗಲೇ ಸಂಪರ್ಕಿಸಿರುವ ಬಿಜೆಪಿ ನಾಯಕರು ಬಿಜೆಪಿ ಪರ‌ ಪ್ರಚಾರಕ್ಕೆ ಮನವಿ ಮಾಡಿದ್ದಾರೆ. ಬಿಜೆಪಿ ಸೇರುವಂತೆಯೂ ಆಹ್ವಾನ ನೀಡಿದ್ದಾರೆ. ಜಾರಕಿಹೊಳಿ ಕುಟುಂಬದಿಂದ ಯಾರು ಪ್ರಚಾರ ಮಾಡಿದರೂ ಬಿಜೆಪಿಗೆ ಪ್ಲಸ್ ಆಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ.

ಜಾರಕಿಹೊಳಿ ಸಹೋದರರಿಂದ ತೆರೆ ಮರೆ ಕಾರ್ಯಾಚರಣೆ:
ಇನ್ನು ಬಹಿರಂಗವಾಗಿ ಬಿಜೆಪಿ ಪರ ಪ್ರಚಾರ ಮಾಡದೇ ಇದ್ದರೂ ತೆರೆ ಮರೆಯಲ್ಲಿ ಜಾರಕಿಹೊಳಿ ಸಹೋದರರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪರ ಇರುವ ಸ್ಥಳೀಯ ನಾಯಕರು, ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಖುದ್ದು ಬಾಲಚಂದ್ರ ಜಾರಕಿಹೊಳಿ ಅವರೇ ಬೆಂಬಲಿಗರನ್ನು ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವಂತೆ ಸೂಚಿಸಿ ನಿರ್ವಹಣೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಜಾರಕಿಹೊಳಿ ಸಹೋದರರು ನೇರವಾಗಿ ಪ್ರಚಾರದ ಕಣಕ್ಕಿಳಿಯುತ್ತಿಲ್ಲ. ಜಾರಕಿಹೊಳಿ ಕುಟುಂಬದ ಅನುಪಸ್ಥಿತಿ ಕಾಡದಂತೆ ಬೆಂಬಲಿಗರ ಪಡೆ ಮೂಲಕ ತೆರೆ ಮರೆಯ ಕಾರ್ಯತಂತ್ರದಲ್ಲಿ ಜಾರಕಿಹೊಳಿ ಸಹೋದರರು ನಿರತರಾಗಿದ್ದಾರೆ.

ಇದನ್ನೂ ಓದಿ.. ಕೋವಿಡ್​ ಉಲ್ಬಣ: ಮುಂದಿನ 4 ವಾರ ಭಾರತಕ್ಕೆ ಬಹಳ ನಿರ್ಣಾಯಕ ಎಂದ ಕೇಂದ್ರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.