ETV Bharat / state

ವಿಡಿಯೋ ಕಾಲ್​ ಮೂಲಕ ಕೈದಿಗಳಿಗೆ ಕುಟುಂಬದವರ ಜೊತೆ ಮಾತನಾಡುವ ಅವಕಾಶ

author img

By

Published : Dec 3, 2020, 9:56 PM IST

ಕೊರೊನಾ ಹಿನ್ನೆಲೆ ಇನ್ಮುಂದೆ ಕೈದಿಗಳು ವಿಡಿಯೋ ಕಾಲ್​ ಮುಖಾಂತರ ತಮ್ಮ ಕುಟುಂಬದವರ ಜೊತೆ ಮಾತನಾಡಲು ಜೈಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.

jail-administration-adopt-video-call-system-for-prisoners
ವಿಡಿಯೋ ಕಾಲ್​ ಮೂಲಕ ಕೈದಿಗಳಿಗೆ ಕುಟುಂಬದವರ ಜೊತೆ ಮಾತನಾಡುವ ಅವಕಾಶ

ಬೆಂಗಳೂರು: ಕೊರೊನಾ ಬಿಕ್ಕಟ್ಟು ಪರಿಣಾಮ ಕಳೆದ ಆರೇಳು ತಿಂಗಳಿಂದ ಕುಟುಂಬಸ್ಥರ ಭೇಟಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಕೈದಿಗಳು ಕಂಗಲಾಗಿದ್ದರು. ಕುಟುಂಬಸ್ಥರೂ ಸಹ ತಮ್ಮವರ ಭೇಟಿಗೆ ಅವಕಾಶ ನೀಡುವಂತೆ ದುಂಬಾಲು ಬಿದ್ದಿದ್ದರು‌‌. ಎರಡೂ ಕಡೆಯಿಂದ ಮನವಿ ಸ್ವೀಕರಿಸಿದ ಜೈಲಾಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.

ಕೈದಿಗಳ ಜೊತೆ ಕುಟುಂಬಸ್ಥರ ಮಾತುಕತೆಗೆ ಅನುವು ಮಾಡಿಕೊಡುವ ದೃಷ್ಟಿಯಿಂದ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೊರೆ ಹೋಗಿದ್ದಾರೆ. ಕೈದಿಗಳ ಕುಟುಂಬಸ್ಥರು ಜೈಲಿನ ಬಳಿ ಬಂದಾಗ ಅವರ ಬಳಿ ಕೈದಿಗಳ ಹೆಸರು, ಕೇಸ್ ಮತ್ತು ಅವರ ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ. ನಂತರ ಒಂದು ವಿಡಿಯೋ ಕಾಲ್​​ನ ಆ್ಯಪ್ ಐಡಿ ನೀಡುತ್ತಾರೆ (Zoom, Skype,Google due ) ಈ ಆ್ಯಪ್ ಮುಖಾಂತರ ಲ್ಯಾಪ್ ಟಾಪ್, ಹೆಡ್‌ ಫೋನ್, ಮೈಕ್ ಬಳಕೆ ಮಾಡಿ ನಂತರ ಆ ಐಡಿಯನ್ನು ಸಂಬಂಧಿಗಳಿಗೆ ನೀಡುತ್ತಾರೆ. ಅದರ ಜೊತೆಗೆ ಇಂತಿಷ್ಟು ಸಮಯವನ್ನು ಸಹ ಅಧಿಕಾರಿಗಳೇ ನಿರ್ಧಾರ ಮಾಡ್ತಾರೆ. ಅಂತಹ ಸಮಯದಲ್ಲಿ ವಿಡಿಯೋ ಕಾಲ್‌ ಮಾಡಬೇಕಾಗತ್ತೆ.

ಜೈಲಿನಲ್ಲಿ ಇದಕ್ಕಾಗಿಯೇ ಒಂದು ಕೊಠಡಿ ಮೀಸಲು ಮಾಡಲಾಗಿದೆ. ಒಬ್ಬೊಬ್ಬರಿಗೆ ನಾಲ್ಕರಿಂದ ಐದು ನಿಮಿಷದಷ್ಟು ಸಮಯ ನಿಗದಿ ಮಾಡುವ‌ ಸಾಧ್ಯತೆಯಿದೆ. ಕೊರೊನಾ ಹಿನ್ನೆಲೆ ಜೈಲಿಗೆ ಕೈದಿಗಳ ಕುಟುಂಬಸ್ಥರ ಭೇಟಿಗೆ ಅವಕಾಶ ಇರಲಿಲ್ಲ. ಈ ನಡುವೆ ಜೈಲಿನಲ್ಲಿನ ಕೈದಿಗಳಿಂದ ಅಧಿಕಾರಿಗಳಿಗೆ ಸಾಕಷ್ಟು ದೂರು ಹೋಗುತ್ತಿತ್ತು. ನಮ್ಮ ಮನೆಯವರನ್ನು ಕರೆಸಿ ಎಂದು ಮನವಿ ಮಾಡುತ್ತಿದ್ದರು. ಮನವಿ ಆಲಿಸಿದ ಅಧಿಕಾರಿಗಳು ವಿಡಿಯೋ ಕಾಲ್ ಮುಖಾಂತರ ಕೈದಿಗಳಿಗೆ ಕರೆ ಮಾಡುವುದಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.