ETV Bharat / state

ಪೇದೆಗೆ ಕೊರೊನಾ: ಸೀಲ್ ​​ಡೌನ್ ಆಗುತ್ತಾ ಪುಲಕೇಶಿ‌ನಗರ ಟ್ರಾಫಿಕ್​ ಪೊಲೀಸ್ ಸ್ಟೇಷನ್?

author img

By

Published : May 22, 2020, 5:03 PM IST

ಯಲಹಂಕದ ನಿವಾಸಿ ಹಾಗೂ‌ ಪುಲಕೇಶಿ ನಗರ ಸಂಚಾರಿ ಠಾಣೆಯ ಕಾನ್​​ಸ್ಟೇಬಲ್​ಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಇಡೀ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸೀಲ್ ​​ಡೌನ್ ಆಗಲಿದೆಯಾ ಎಂಬ ಆತಂಕ ಮೂಡಿದೆ.

Is Pulakeshinagar Traffic Police Station will sealdown ?
ಪೇದೆಗೆ ಕೊರೊನಾ ಸೋಂಕು ಹಿನ್ನೆಲೆ: ಸಿಲ್​​ಡೌನ್ ಆಗುತ್ತಾ ಪುಲಕೇಶಿ‌ನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್?

ಬೆಂಗಳೂರು: ಪುಲಕೇಶಿನಗರ ಟ್ರಾಫಿಕ್​ ಕಾನ್​​ಸ್ಟೇಬಲ್​ಗೆ ಕೊರೊನಾ ಸೋಂಕು ಪತ್ತೆಯಾದ ಆತಂಕದ ಬೆನ್ನಲ್ಲೇ ಇಡೀ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸೀಲ್​​ ಡೌನ್ ಆಗಲಿದೆಯಾ ಎಂಬ ಆತಂಕ ಮನೆ ಮಾಡಿದೆ.

ಯಲಹಂಕದ ನಿವಾಸಿ ಹಾಗೂ‌ ಪುಲಕೇಶಿ ನಗರ ಸಂಚಾರಿ ಠಾಣೆಯ ಕಾನ್​​ಸ್ಟೇಬಲ್​ಗೆ ಪಾಸಿಟಿವ್ ಎಂದು ವರದಿ ಬಂದಿದ್ದು, ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವರದಿ ಬರುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು, ಕಾನ್​ಸ್ಟೇಬಲ್​​ನನ್ನು‌ ಕೂಡಲೇ ಕ್ವಾರಂಟೈನ್​​ಗೆ ಒಳಪಡಿಸಿದ್ದಾರೆ. ಇವರ ಜೊತೆಯಲ್ಲಿದ್ದ ಮಹಿಳಾ ಕಾನ್​​ಸ್ಟೇಬಲ್​​ಗೂ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ಕೊರೊನಾ ಪರೀಕ್ಷೆ ಮಾಡಿಸಿದ ಬಳಿಕ ಎಲ್ಲೆಲ್ಲಿ ಹೋಗಿದ್ದರು,‌ ಯಾರ ಜೊತೆಯಲ್ಲಿ ಇದ್ದರು ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.

ಸೀಲ್​ ​ಡೌನ್ ಆಗುತ್ತಾ ಟ್ರಾಫಿಕ್ ಪೊಲೀಸ್ ಸ್ಟೇಷನ್?‌ ಕೊರೊನಾ ವೈರಸ್ ಕಾಣಿಸಿಕೊಂಡ ಕಾನ್​​ಸ್ಟೇಬಲ್ ಹೇಳುವ ಮಾಹಿತಿ ಮೇರೆಗೆ ಸೀಲ್ ​​ಡೌನ್ ಮಾಡುವ ನಿರ್ಧಾರವಾಗಲಿದೆ. ಪೇದೆಯನ್ನು ಮೇ. 20ರಂದು ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ನಿನ್ನೆ ವರದಿಯಲ್ಲಿ ಪಾಸಿಟಿವ್ ಎಂದು ಬಂದಿತ್ತು.‌ ನಿನ್ನೆ ಎಂದಿನಂತೆ ಕೆಲಸಕ್ಕೆ ಬಂದಿದ್ದರು. ಐದಕ್ಕಿಂತ ಹೆಚ್ಚಿನ ಪೊಲೀಸರನ್ನು ಕಾನ್​ಸ್ಟೇಬಲ್‌ ಸಂಪರ್ಕ ಹೊಂದಿದ್ದರೆ ಸೀಲ್ ​​ಡೌನ್ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈಗಾಗಲೇ ಕೆ.ಆರ್‌.ಪೇಟೆ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆ ಸೀಲ್​ ​ಡೌನ್ ಆಗಿವೆ. ಪುಲಕೇಶಿ ನಗರ ಸಂಚಾರಿ ಠಾಣೆ ಸೀಲ್​ ಡೌನ್​​ ಆಗಲಿದೆಯೇ ಎಂಬುದು ಸದ್ಯದಲ್ಲೇ ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.