ETV Bharat / state

ನಿರ್ಭಯಾ ಸೇಫ್ ಸಿಟಿ ಟೆಂಡರ್ ವಿವಾದ: ನಿಂಬಾಳ್ಕರ್ ಪಾತ್ರದ ತನಿಖೆ ನಡೆಸಲು ಡಿ. ರೂಪಾ ಆಗ್ರಹ

ಐಎಂಎ ಕಂಪನಿಯ ವಿರುದ್ಧ ಸಿಬಿಐ 4500 ಕೋಟಿ ರೂಪಾಯಿ ಮೋಸದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ನಿಂಬಾಳ್ಕರ್ ಆರೋಪಿ ಸ್ಥಾನದಲ್ಲಿದ್ದು, ಐಎಂಎ ಕಂಪನಿಯ ಮೋಸದಲ್ಲಿ ನಿಂಬಾಳ್ಕರ್ ಕೂಡ ಪಾಲುದಾರರಾಗಿದ್ದಾರೆ ಎಂದು ಡಿ.ರೂಪಾ ಆರೋಪ ಮಾಡಿದ್ದಾರೆ.

author img

By

Published : Dec 27, 2020, 5:22 PM IST

ips-officers-d-rupa-has-demand-investigation-against-nimbalkar
ನಿಂಬಾಳ್ಕರ್ ವಿರುದ್ದ ತನಿಖೆ ನಡೆಸಲು ಡಿ.ರೂಪಾ ಆಗ್ರಹ

ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಟೆಂಡರ್ ವಿವಾದ ಸಂಬಂಧ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಗೃಹ ಇಲಾಖೆಯ ಕಾರ್ಯದರ್ಶಿ ಡಿ. ರೂಪಾ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಪತ್ರಿಕಾಗೋಷ್ಠಿ ನಡೆಸಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಡಿ. ರೂಪಾ ಮತ್ತೊಂದು ಸುತ್ತಿನ ಆರೋಪ ಮಾಡಿದ್ದಾರೆ.

ನಿರ್ಭಯಾ ಟೆಂಡರ್ ಸಮಿತಿ ಅಧ್ಯಕ್ಷರು ಸರ್ಕಾರವನ್ನು ತಪ್ಪು ದಾರಿಗೆ ಎಳೆದು, ಟೆಂಡರ್​ನಲ್ಲಿ ಭ್ರಷ್ಟಾಚಾರವೆಸಗುತ್ತಿದ್ದಾರೆ. ಐಎಂಎ ಕಂಪನಿಯ ವಿರುದ್ಧ ಸಿಬಿಐ 4500 ಕೋಟಿ ರೂಪಾಯಿ ಮೋಸದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ನಿಂಬಾಳ್ಕರ್ ಆರೋಪಿ ಸ್ಥಾನದಲ್ಲಿದ್ದು, ಐಎಂಎ ಕಂಪನಿಯ ಮೋಸದಲ್ಲಿ ಅವರೂ ಪಾಲುದಾರರಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಓದಿ: ಟಿಕ್ ಟಿಕ್.. ಬರುತಿದೆ ಕಾಲ,, ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ.. ಹಾಡಿನ 'ರೂಪ'ಒಂದು.. ಅರ್ಥ ಮತ್ತೊಂದು!!

ಈಗಾಗಲೇ ಟೆಂಡರ್ 2 ಬಾರಿ ರದ್ದಾಗಿದ್ದು, ಸರ್ಕಾರಕ್ಕೆ ಹೇಮಂತ್ ನಿಂಬಾಳ್ಕರ್ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಅವರ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ರೂಪಾ ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಿಂಬಾಳ್ಕರ್, ಟೆಂಡರ್​ನಲ್ಲಿ ನಾನು ಬಿಇಎಲ್ ಕಂಪನಿಯನ್ನು ತಿರಸ್ಕರಿಸಿದ್ದೇನೆ ಎಂದು ಹೇಳಲಾಗಿದೆ. ಆದರೆ ಆ ಕಂಪನಿ ಇಲ್ಲಿ ಬಿಡ್ ಮಾಡಿಯೇ ಇಲ್ಲ. ಜೂನ್ 20 ರಂದು ಟೆಂಡರ್ ಪರಿಶೀಲನಾ ಸಮಿತಿ ಮೂರು ಕಂಪನಿಗಳನ್ನು ಅಂತಿಮಗೊಳಿಸಿತ್ತು. ಅದರಲ್ಲಿ ಬಿಇಎಲ್​ ಕೂಡ ಇತ್ತು. ಇದು ಕಾಲ್ 2 ನಲ್ಲಿ ನಡೆದಿರುವ ಪ್ರಕ್ರಿಯೆ. ಆದರೆ ಕಾಲ್ 2 ಅನ್ನು ಕ್ಯಾನ್ಸಲ್ ಮಾಡಲಾಗಿತ್ತು. ಚೀನಾ ವಸ್ತುಗಳನ್ನು ತಿರಸ್ಕರಿಸಿ ಎಂಬ ಆದೇಶವಾಗಿದ್ದರಿಂದ ಇದು ಕ್ಯಾನ್ಸಲ್ ಆಗಿತ್ತು ಎಂದರು.

ತದನಂತರ ಕಾಲ್ 3 ನವೆಂಬರ್​ನಲ್ಲಿ ಮಾಡಲಾಗಿತ್ತು. ಅದು ಸದ್ಯ ಚಾಲ್ತಿಯಲ್ಲಿದ್ದು, ಎಂಟನೇ ತಾರೀಖಿನವರೆಗೂ ಚಾಲ್ತಿಯಲ್ಲಿರುತ್ತದೆ. ಇಲ್ಲಿ ಯಾರು ಬೇಕಾದರೂ ಬಿಡ್ ಮಾಡಬಹುದು. ಈ ಬಿಡ್ಡಿಂಗ್ ಶಿಸ್ತು ಬದ್ದವಾಗಿ ವಿವಿಧ ರೀತಿಯ ಸಮಿತಿಗಳ ಅಡಿಯಲ್ಲಿ ತುಂಬಾ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.