ETV Bharat / state

ರಂಗೇರಿದ ಐಪಿಎಲ್ ಆಟ.. ಬೆಟ್ಟಿಂಗ್‌ನಲ್ಲಿ ತೊಡಗಿದವರ ಮೇಲೆ ಖಾಕಿ ಹದ್ದಿನ ಕಣ್ಣು.. - IPL betting

ಇದು ಕಾನೂನು ಪ್ರಕಾರ ತಪ್ಪು. ಆದ್ರೂ ಕೂಡ ಸದ್ಯ ಇದು ಸದ್ದು ಮಾಡ್ತಿರೋದು‌ ಮಾತ್ರ ನಿಜ. ಬೆಟ್ಟಿಂಗ್ ಆಡುವಾಗ ಎದುರು ಪಾರ್ಟಿಯವನು ಯಾರು, ಏನು ಅನ್ನುವುದರ ‌ಮಾಹಿತಿ ನಮಗಿರಲ್ಲ. ಆದರೆ, ಬಹಳ ಪ್ರತಿಷ್ಠಿತ ವ್ಯಕ್ತಿಗಳೇ ಇದರಲ್ಲಿ ಭಾಗಿಯಾಗಿರ್ತಾರೆ. ಹಾಗೆ ಇದರಲ್ಲಿ ಹಣ ಕಳೆದುಕೊಳ್ಳುವ ಸಂದರ್ಭವೇ ಹೆಚ್ಚು..

IPL cricket  betting
ಐಪಿಎಲ್
author img

By

Published : Oct 4, 2020, 7:39 PM IST

ಬೆಂಗಳೂರು: ಐಪಿಎಲ್ ಹವಾ ಜೋರಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆಯೂ ಕೂಡ ವ್ಯಾಪಕವಾಗಿ ನಡೆಯುತ್ತಿದೆ. ಹಲವು ಮಂದಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದು, ‌ಪ್ರಮುಖವಾಗಿ ಯುವಕರು ಹಾಗೂ ವಿದ್ಯಾರ್ಥಿಗಳು ಈ ಗೀಳಿಗೆ ಬಿದ್ದಿರುವುದು ನಿಜಕ್ಕೂ ಆತಂಕಕಾರಿ.

ಬುಕ್ಕಿಗಳು ಮೊಬೈಲ್ ಮುಖಾಂತರ, ಮನೆಯಲ್ಲಿ ಅಥವಾ ಲಾಡ್ಜ್​​​​​ಗಳಲ್ಲಿ ತಂಡಗಳ ಸೋಲು ಗೆಲುವಿನ ಆಟವಾಡಿ, ಹೆಚ್ಚಿನ ಹಣ ಗಳಿಸ್ತಿದ್ದಾರೆ. ಆದರೆ, ಕೆಲವರು ಹಣ ಕಳೆದುಕೊಂಡು ಬೀದಿಗೆ ಬಂದಿರುವ ವಿಚಾರ ಕೂಡ ಹೆಚ್ಚಾಗಿ ಕಂಡು ಬರ್ತಿದೆ. ಸದ್ಯ ಐಪಿಎಲ್ ಶುರುವಾದ ದಿನದಿಂದ ಪೊಲೀಸರು ಅಲರ್ಟ್ ಆಗಿದ್ದು, ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಆದ ನಂತರ ಪೊಲೀಸರು ಎಲ್ಲೆಡೆ ಕಣ್ಣಿಟ್ಟಿದ್ದಾರೆ‌.

ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಜನವರಿ 1ರಿಂದ ಸೆಪ್ಟೆಂಬರ್ 30ರವರೆಗೆ ಸಿಸಿಬಿ ಅಧಿಕಾರಿಗಳು ಒಟ್ಟು 19 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಿಸಿ 40 ಜನರನ್ನ ಬಂಧಿಸಿದ್ದಾರೆ. 19 ಪ್ರಕರಣದಲ್ಲಿ ಒಟ್ಟು 34,51,850 ರೂ. ಸೀಜ್‌ ಮಾಡಿದ್ದಾರೆ. ಈ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪತ್ತೆ ಹಚ್ಚಲು ಸಿಸಿಬಿ ಘಟಕದಿಂದ ವಿಶೇಷ ತಂಡ ರಚನೆಯಾಗಿದೆ. ಎಲ್ಲೆಡೆ ನಿಗಾ ಇಡಲಾಗಿದೆ. ಸದ್ಯ ಬಹುತೇಕ ಮಂದಿ ಆನ್​​​ಲೈನ್ ಮೂಲಕ ಆಟವಾಡುವ ಕಾರಣ, ಸಿಸಿಬಿ ಪೊಲೀಸರು ಸೈಬರ್ ವಿಂಗ್ ಮುಖಾಂತರ ಆಪರೇಟ್ ಮಾಡುವುದಕ್ಕೆ ಮುಂದಾಗಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್

ಹೇಗೆ ನಡೆಯುತ್ತದೆ ಆನ್​​​ಲೈನ್ ಬೆಟ್ಟಿಂಗ್? : ಅನೇಕ ವೆಬ್​​​ಸೈಟ್​​​​ಗಳ ಆಧಾರಿತ ಬೆಟ್ಟಿಂಗ್ ಇದು. ಬಾಲ್ ಟು ಬಾಲ್ ಆಧಾರದಲ್ಲಿ ಪಂದ್ಯದ ಫಲಿತಾಂಶದ ಆಧಾರದಲ್ಲಿ ನಡೆಯುತ್ತದೆ. ಪ್ರತಿ ಎಸೆತದಲ್ಲಿ ಏನಾಗಲಿದೆ ಎಂದು ಹೇಳುವ ಮೂಲಕ, ನಿಖರವಾಗಿ ಹೇಳಿದವರಿಗೆ ಕೋಟ್ಯಂತರ ಹಣ ಆನ್​​ಲೈನ್​​ನಲ್ಲಿಯೇ ವರ್ಗಾವಣೆಯಾಗುತ್ತದೆ‌. ಮಧ್ಯವರ್ತಿಯೊಬ್ಬ ಹಣ ಪಡೆದು ನಡೆಸುವ ಬೆಟ್ಟಿಂಗ್ ಅಂದ್ರೆ, ಈ ತಂಡ ಗೆದ್ರೆ ಇಂತಿಷ್ಟು ಹಣ ಎಂದು ಹಲವರಿಂದ ಹಣ ಪಡೆದು ಪಂದ್ಯದ ಫಲಿತಾಂಶದಲ್ಲಿ ಗೆದ್ದವರಿಗೆ ಇಂತಿಷ್ಟು ಹಣ ನೀಡುವುದು. ಇಲ್ಲಿ ಮಧ್ಯವರ್ತಿಯು ನಿರ್ದಿಷ್ಟ ಹಣವನ್ನು ತನ್ನ ಕಮಿಷನ್ ರೂಪದಲ್ಲಿ ಪಡೆಯುತ್ತಾನೆ.

ಹೆಡ್ ಟು ಹೆಡ್ ಬೆಟ್ಟಿಂಗ್ ಅಂದರೆ ತಮ್ಮ ತಂಡ ಗೆದ್ದರೆ ಎದುರಾಳಿ ಇಂತಿಷ್ಟು ಹಣ ನಿಡಬೇಕು ಎಂದು, ಮೊದಲೇ ಒಪ್ಪಂದ ಮಾಡಿಕೊಂಡು ಆಡುವುದು. ಅಂತಿಮವಾಗಿ ಗೆದ್ದವನಿಗೆ ಹಣ ಸಿಗುತ್ತದೆ. ಆ್ಯಪ್ ಆಧಾರಿತ ಬೆಟ್ಟಿಂಗ್ ಮೊದಲೇ ಇಂತಿಷ್ಟು ಹಣ ಪಾವತಿಸಿದ್ರೆ ಗೆದ್ದವನಿಗೆ ರ್ಯಾಕಿಂಗ್ ಆಧಾರದದಲ್ಲಿ ಇಷ್ಟು ಹಣ ಎಂದು ನಿಗದಿಯಾಗಿರುತ್ತದೆ. ಆಟಗಾರರ ಪ್ರದರ್ಶನದ ಆಧಾರದಲ್ಲಿ ಪಾಯಿಂಟ್ಸ್​​ಗಳನ್ನಿಳಿಸುವ ಮೂಲಕ ರ್ಯಾಕಿಂಗ್ ಪ್ರಕಾರ ಹಣ ಗಳಿಸುವುದು. ಇದಕ್ಕಾಗಿ ಅನೇಕ ಆ್ಯಪ್​ಗಳು ಚಾಲ್ತಿಯಲ್ಲಿದ್ದು, ಕೆಲವು ಗಂಟೆಗಳಲ್ಲಿ ಮುಗಿಯುವ ಒಂದೊಂದು ಪಂದ್ಯಕ್ಕೆ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ.

ಈ ಕುರಿತಾಗಿ ಬುಕ್ಕಿಯೊಬ್ಬನ ಬಳಿ‌ ಮಾಹಿತಿ ಪಡೆದಾಗ ಆತ ಹೇಳಿದ್ದಿಷ್ಟು.. 'ಕ್ರಿಕೆಟ್ ಬೆಟ್ಟಿಂಗ್ ಇಂದು ಪ್ರತಿ‌ ದಿನ ನಡೆಯುತ್ತದೆ. ಇದು ಪೊಲೀಸರಿಗೆ ಕೂಡ ಗೊತ್ತು. ಪ್ರತಿಷ್ಟಿತ ವ್ಯಕ್ತಿಗಳು ಬೆಟ್ಟಿಂಗ್‌ನ ಆನ್​​​ಲೈನ್​​ನಲ್ಲಿ ನಡೆಸ್ತಿದ್ದಾರೆ. ಆದರೆ, ಕೆಲವರನ್ನು ಆಯ್ಕೆ ಮಾಡಿ ಪೊಲೀಸರು ಖೆಡ್ಡಾಕ್ಕೆ ಕೆಡವುತ್ತಾರೆ. ಹಾಗೆ ಕ್ರಿಕೆಟ್ ಬೆಟ್ಟಿಂಗ್ ಹೆಚ್ಚಾಗಿ ಸದ್ಯ ಆನ್​ಲೈನ್​​​ ಮುಖಾಂತರ ನಡೆಯುತ್ತದೆ. ಇದರಲ್ಲಿ ಕೋಟಿ ಕೋಟಿ ಹಣದ ವಹಿವಾಟು ನಡೆಯುತ್ತದೆ'

ಈಗಾಗಲೇ ಬ್ಯಾನ್ ಆದ ಪೇಟಿಎಂ ಮುಖಾಂತರ ಹಣ ವರ್ಗಾವಣೆ ನಡೆಯುತ್ತಿದೆ. ಇದು ಕಾನೂನು ಪ್ರಕಾರ ತಪ್ಪು. ಆದ್ರೂ ಕೂಡ ಸದ್ಯ ಇದು ಸದ್ದು ಮಾಡ್ತಿರೋದು‌ ಮಾತ್ರ ನಿಜ. ಬೆಟ್ಟಿಂಗ್ ಆಡುವಾಗ ಎದುರು ಪಾರ್ಟಿಯವನು ಯಾರು, ಏನು ಅನ್ನುವುದರ ‌ಮಾಹಿತಿ ನಮಗಿರಲ್ಲ. ಆದರೆ, ಬಹಳ ಪ್ರತಿಷ್ಠಿತ ವ್ಯಕ್ತಿಗಳೇ ಇದರಲ್ಲಿ ಭಾಗಿಯಾಗಿರ್ತಾರೆ. ಹಾಗೆ ಇದರಲ್ಲಿ ಹಣ ಕಳೆದುಕೊಳ್ಳುವ ಸಂದರ್ಭವೇ ಹೆಚ್ಚು. ಇದು ಅದೃಷ್ಠದ ಆಟದ ತರ. ಹಾಗೆ ಒಮ್ಮೆ ಇದ್ದ ಆನ್​​ಲೈನ್ ವೆಬ್‌ಸೈಟ್ ಮತ್ತೊಮ್ಮೆ ಇರಲ್ಲ. ಪ್ರತಿಯೊಂದು ಸೂಕ್ಷ್ಮವಾಗಿ ಬದಲಾವಣೆಯಾಗ್ತಿರುತ್ತದೆ ಎಂಬುದು ಬುಕ್ಕಿಯ ಮಾತು.

ಇದರ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಬೆಟ್ಟಿಂಗ್ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಹೀಗಾಗಿ, ಅನೇಕ ಪ್ರಕರಣ ದಾಖಲು ಮಾಡಿ ಆರೋಪಿಗಳನ್ನ ಅರೆಸ್ಟ್ ಕೂಡ ಮಾಡಿದ್ದೀವಿ. ಈ ವರ್ಷದ ಐಪಿಎಲ್ ಪ್ರಾರಂಭವಾಗಿದ್ದು, ಬೆಟ್ಟಿಂಗ್ ನಡೆಯುವ ಸಾಧ್ಯತೆ ಮೇರೆಗೆ ಮೊದಲೇ ನಿಗಾ ಇಟ್ಟಿರುವುದಾಗಿ ತಿಳಿಸಿದ್ದಾರೆ. ಐಪಿಎಲ್ ಶುರುವಾದ ನಂತ್ರ ಎರಡು ಪ್ರಕರಣ ದಾಖಲಾಗಿವೆ.

ಅನೇಕ ಆರೋಪಿಗಳು ಆನ್​​​ಲೈನ್ ಆ್ಯಪ್ ಮೂಲಕ ಬೆಟ್ಟಿಂಗ್ ಮಾಡ್ತಿದ್ದಾರೆ. ಒಂದು ವೇಳೆ ಬೆಟ್ಟಿಂಗ್ ಆ್ಯಪ್ ಬಗ್ಗೆ ಮಾಹಿತಿ ಸಿಕ್ಕರೆ ಕೊಡಿ. ಇದರ ಬಗ್ಗೆ ತನಿಖೆ ನಡೆಸ್ತೀವಿ. ಬೆಟ್ಟಿಂಗ್ ದಂಧೆ ಕಾನೂನು ರೀತಿ ತಪ್ಪು. ಒಂದು ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ವಿಚಾರ ಗೊತ್ತಾದ್ರೆ ನಾವು ಕಾನೂನು ಅಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು, ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಈ ರೀತಿ ದಂಧೆಗಳ ಕಡಿವಾಣ ಹಾಕಲು‌ ಸರ್ಕಾರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು.

ಆದರೆ, ಈವರೆಗೆ ಸರ್ಕಾರ ಯಾವುದೇ ರೀತಿ ಕಠಿಣ ಕ್ರಮಕೈಗೊಂಡಿಲ್ಲ. ಮ್ಯಾಚ್ ಬೆಟ್ಟಿಂಗ್‌ ದಂಧೆಯಲ್ಲಿ ಸಣ್ಣಪುಟ್ಟ ಮಂದಿ ಮಾತ್ರ ಬೆಳಕಿಗೆ ಬರ್ತಿದೆ. ದೊಡ್ಡ ಕುಳಗಳು ದಂಧೆಯಲ್ಲಿ ಯಥಾವತ್ತಾಗಿ ಭಾಗಿಯಾಗ್ತಿದ್ದಾರೆ. ಈ ವಿಚಾರ ಗೊತ್ತಿದ್ರೂ ಸರ್ಕಾರ ಮಾತ್ರ ಕೈಕಟ್ಟಿ ಕುಳಿತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.